ಮಾರ್ಚ್ 26ಕ್ಕೆ IPL ಆರಂಭಕ್ಕೆ ಮುಹೂರ್ತ – ಮೇ 31ಕ್ಕೆ ಫೈನಲ್ ಪಂದ್ಯ ಫಿಕ್ಸ್

ಮಾರ್ಚ್ 26ಕ್ಕೆ IPL ಆರಂಭಕ್ಕೆ ಮುಹೂರ್ತ – ಮೇ 31ಕ್ಕೆ ಫೈನಲ್ ಪಂದ್ಯ ಫಿಕ್ಸ್

IPL 19 ಆವೃತ್ತಿ ಯಾವಾಗ ಶುರುವಾಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಈ ಬಾರಿ ಮಾರ್ಚ್ 26ರಂದು ಐಪಿಎಲ್ ಶುರುವಾಗಲಿದೆ. ಮೇ 31ಕ್ಕೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಭಾರತದಲ್ಲಿ 11-2 = 9 ಬ್ಯಾಟರ್ಸ್ – ಗಿಲ್ & ಸೂರ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ಕ್ಕೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 26 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಮೇ 31 ರಂದು ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. 67 ದಿನಗಳ ಕಾಲ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಭಾರತದಲ್ಲಿ ಟಿ20 ವಿಶ್ವಕಪ್ ಕೂಡ ಜರುಗಲಿದೆ. ಭಾರತ-ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ. ಇನ್ನು ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ. ವಿಶ್ವಕಪ್ ಮುಗಿದು 17 ದಿನಗಳ ಬಳಿಕ ಐಪಿಎಲ್ ಆರಂಭವಾಗಲಿದೆ.

ಇದಕ್ಕೂ ಮೊದಲು ವುಮೆನ್ಸ್ ಪ್ರೀಮಿಯರ್ ಲೀಗ್ ಆಯೋಜಿಸಲು ನಿರ್ಧರಿಸಲಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಜನವರಿ 9 ರಿಂದ ಆರಂಭವಾಗಲಿದೆ. ಐದು ತಂಡಗಳ ನಡುವಿನ ಈ ಟೂರ್ನಿಯ ಫೈನಲ್ ಪಂದ್ಯವು ಫೆಬ್ರವರಿ 5 ರಂದು ಜರುಗಲಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಇದು ಮುಗಿಯುತ್ತಿದ್ದಂತೆ ಐಪಿಎಲ್ ಶುರುವಾಗಲಿದೆ. ಹೀಗಾಗಿ ಈ ಬಾರಿಯ ಹೊಸವರ್ಷ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ನೋಡೋದೇ ಹಬ್ಬವಾಗಲಿದೆ.

Sulekha