ಒಂದೇ ವಾರಕ್ಕೆ ಡಲ್ ಆಯ್ತಾ ಡೆವಿಲ್ – 5 ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಸಾಕಷ್ಟು ನಿರೀಕ್ಷೆಯಿಂದ ತರೆ ಮೇಲೆ ಬಂದ ಡೆವಿಲ್ ಒಂದು ವಾರಕ್ಕೆ ಡಲ್ ಆಗಿದೆ. ‘ಡೆವಿಲ್’ ಸಿನಿಮಾ ಮೊದಲ ದಿನ 13 ಕೋಟಿ ರೂಪಾಯಿ ಗಳಿಸಿತ್ತು. ಆ ಬಳಿಕ ಸಿನಿಮಾ ಗಳಿಕೆ ದಿನ ಕಳೆದಂತೆ ಕುಸಿತ ಕಂಡಿತ್ತು. ಭಾನುವಾರ ಈ ಚಿತ್ರ 4 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರಕ್ಕೆ ಹೋಲಿಸಿದರೆ ಕಲೆಕ್ಷನ್ ಕೊಂಚ ಹೆಚ್ಚಿತ್ತು. ಈಗ ಸೋಮವಾರದ ಗಳಿಕೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಈ ಚಿತ್ರ ಮೊದಲ ಸೋಮವಾರ 1.40 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ.
ಇದನ್ನೂ ಓದಿ: ಶಿವಣ್ಣನ ಲೇಡಿ ಗೆಟಪ್, ಉಪ್ಪಿ ಮಾಸ್ ಡೈಲಾಗ್ – ‘45’ ಮೂವಿ ಟ್ರೈಲರ್‌ಗೆ ಫ್ಯಾನ್ಸ್ ಫಿದಾ
ನಿನ್ನೆ ಸೋಮವಾರ ಡೆವಿಲ್ ಕಲೆಕ್ಷ್ ಫುಲ್ ಡಲ್ ಆಗಿದೆ. ಭಾನುವಾರ 4 ಕೋಟಿ ಬಾಚಿಕೊಂಡಿದ್ದ ಸಿನಿಮಾ ನಿನ್ನೆ ಸೋಮವಾರ 1.5 ಕೋಟಿ ಅಷ್ಟೇ ಗಳಿಕೆ ಕಂಡಿದೆ. ಇದ್ದನ್ನ ಲೆಕ್ಕಹಾಕಿ ನೋಡಿದ್ರೆ ಇಂದಿನಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಕುಸಿಯಬಹುದು. ಡಿಸೆಂಬರ್ 25ರಂದು ‘45’ ಹಾಗೂ ‘ಮಾರ್ಕ್’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವೇಳೆ ‘ಡೆವಿಲ್’ಗೆ ಸಿಕ್ಕ ಶೋ ಸಂಖ್ಯೆ ಕಡಿಮೆ ಆಗಬಹುದು. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. ಸಿನಿಮಾದ ಒಟ್ಟೂ ಗಳಿಕ 25 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
ಅಖಂಡದ ಮುಂದೆ ಡಲ್ ಆಯ್ತಾ ಡೆವಿಲ್
‘ಅಖಂಡ 2’ ಚಿತ್ರ ನೋಡಿ ಮೊದಲ ದಿನ ವಿಮರ್ಶೆ ಮಾಡಿದ ಬಹುತೇಕರು ನೆಗೆಟಿವ್ ರಿವಿವ್ಯೂ ಕೊಟ್ಟಿದ್ರು. ಆದರೆ, ಅಭಿಮಾನಿಗಳು ಮಾತ್ರ ಬಾಲಯ್ಯ ಅವರನ್ನು ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ ಅವರ ಕಡೆಯಿಂದ ಬೆಂಬಲ ಸಿಕ್ಕಿದೆ. ಹೀಗಾಗಿ, ಬುಕ್ ಮೈ ಶೋನಲ್ಲಿ ಈವರೆಗೆ 47 ಸಾವಿರ ಜನರು ರೇಟಿಂಗ್ ಕೊಟ್ಟಿದ್ದು, 10ಕ್ಕೆ 8.8 ರೇಟಿಂಗ್ ಸಿಕ್ಕಿದೆ. ಈ ಸಿನಿಮಾದ ಸಕ್ಸಸ್ ಡೆವಿಲ್‌ಗೆ ನೆಗಟಿವ್ ಆಗಿದೆ ಅಂತ ಹೇಳಲಾಗ್ತಿದೆ.

ನೋಡಿರಿ

