ಭಾರತದಲ್ಲಿ 11-2 = 9 ಬ್ಯಾಟರ್ಸ್ – ಗಿಲ್ & ಸೂರ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ
ಬೌಲರ್ ಗಳನ್ನೇ ನಂಬಿದ್ರೆ ವಿಶ್ವಕಪ್ ಹೇಗೆ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಸದ್ಯ ಮೂರು ಪಂದ್ಯಗಳು ಮುಗಿದಿವೆ. ಭಾರತ ಎರಡು ಪಂದ್ಯಗಳನ್ನ ಗೆದ್ದು ಲೀಡ್ ಸಾಧಿಸಿದೆ. ಬಟ್ ಮ್ಯಾಟ್ರ್ ಅದಲ್ಲ. ಭಾರತ ಎರಡೂ ಪಂದ್ಯಗಳನ್ನ ಗೆದ್ದಿರೋದು ಪ್ಯೂರ್ ಬೌಲರ್ಗಳಿಂದಲೇ. ಬ್ಯಾಟರ್ಗಳು ಜಸ್ಟ್ ಸಪೋರ್ಟ್ ಮಾಡಿದ್ದಾರಷ್ಟೇ. ಆದ್ರೆ ಇದೇ ಬ್ಯಾಟಿಂಗ್ ಲೈನಪ್ ಭಾರತಕ್ಕೆ ಹೊರೆಯಾಗೋ ಎಲ್ಲಾ ಲಕ್ಷಣಗಳು ಕಾಣ್ತಿದೆ. ಅದ್ರಲ್ಲೂ ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ.
ಇದನ್ನೂ ಓದಿ : RCBಗೆ ಬೇಕು ಫಾರಿನ್ ವೆಪನ್ – ಫಸ್ಟ್ ರೌಂಡ್ ಹರಾಜಿನಲ್ಲೇ ಬಿಗ್ ಸ್ಟಾರ್ಸ್
ಟಿ-20ಐನಲ್ಲಿ ಜಗತ್ತಿನಲ್ಲೇ ನಂಬರ್ 1 ಟೀಂ ಭಾರತ. 2024ರ ಟಿ-20 ವಿಶ್ವಕಪ್ ಟ್ರೋಫಿ ಗೆದ್ಮೇಲೆ ಒಂದೇ ಒಂದು ಟಿ-20ಐ ಸರಣಿ ಸೋತಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಆಲ್ಮೋಸ್ಟ್ ಭಾರತವೇ ಸರಣಿ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಉಳಿದ 2 ಪಂದ್ಯಗಳ ಪೈಕಿ ಇನ್ನೊಂದು ಮ್ಯಾಚ್ ಗೆದ್ರೂ ಸರಣಿ ನಮ್ದೇ. ಡೌಟೇ ಇಲ್ಲ. ಬಟ್ ಇರೋ ಪ್ರಾಬ್ಲಂ ಅಂದ್ರೆ ಬ್ಯಾಟಿಂಗ್ ವಿಭಾಗದ್ದು. ಇಬ್ಬರು ಟಾಪ್ ಆರ್ಡರ್ ಬ್ಯಾಟರ್ಗಳೇ ಆಟಕ್ಕುಂಟು ಲೆಕ್ಕಕ್ಕಲ್ಲ ಎನ್ನುವಂತೆ ಪರ್ಫಾಮ್ ಮಾಡ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ಈ ಇಡೀ ವರ್ಷ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಪರಿಣಾಮ ಪಂದ್ಯದ ಕಂಪ್ಲೀಟ್ ಪ್ರೆಶರ್ ಬೌಲರ್ಗಳೇ ಮೇಲೇ ಬೀಳ್ತಿದೆ. ಸದ್ಯ ಸರಣಿಯಲ್ಲಿ 2 ಪಂದ್ಯ ಗೆಲ್ಲಿಸಿದ್ದೂ ಬೌಲರ್ಗಳೇ.
ಬೌಲರ್ ಗಳ ಮೇಲೇ ಡಿಪೆಂಡ್ ಆಯ್ತಾ ಟೀಂ ಇಂಡಿಯಾ?
ಹಿಂದೆಲ್ಲಾ ಬಲಿಷ್ಠ ಬ್ಯಾಟಿಂಗ್ ಲೈನಪ್ ಎನಿಸಿಕೊಂಡಿದ್ದ ಭಾರತ ಇತ್ತೀಚೆಗೆ ಯಾಕೋ ಡಲ್ ಹೊಡೀತಿದೆ. ಟಾಪ್ ಆರ್ಡರ್ ಬ್ಯಾಟರ್ಗಳಿಂದ ನಿರೀಕ್ಷಿತ ರನ್ಸ್ ಬರ್ತಿಲ್ಲ. ಅದ್ರಲ್ಲೂ ಟಿ-20ಐನಲ್ಲಂತೂ ಶುಭ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಲ್ಲೇ ಇದ್ದಾರೆ. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಹಾಗೇ ಆಲ್ರೌಂಡರ್ಗಳು ಮಾತ್ರವೇ ಬ್ಯಾಟಿಂಗ್ನಲ್ಲಿ ಪಂದ್ಯ ಗೆಲ್ಲಿಸ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೂರೂ ಪಂದ್ಯಗಳಲ್ಲೂ ಇದೇ ಆಗಿದೆ.
ಬೌಲರ್ ಗಳೇ ಮ್ಯಾಚ್ ವಿನ್ನರ್ಸ್!
ಮೊದಲ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಇಂಡಿಯಾ
ಬ್ಯಾಟಿಂಗ್ ಫೇಲ್, ಪಾಂಡ್ಯ ಫಿಫ್ಟಿ, 175 ರನ್ಸ್ ಸ್ಕೋರ್
74 ರನ್ ಗಳಿಗೆ ಸೌತ್ ಆಫ್ರಿಕಾ ಆಲೌಟ್ ಮಾಡಿದ ಬೌಲರ್ಸ್
2ನೇ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಭಾರತ ತುಂಬಾ ದುಬಾರಿ
ಫಾಸ್ಟ್ ಬೌಲರ್ಸ್ ವಿಕೆಟ್ ಇಲ್ಲ, ಹರಿಣಪಡೆ 213 ರನ್ಸ್ ಕಲೆ
ತಿಲಕ್ 62 ರನ್ಸ್, 162 ರನ್ ಗಳಿಗೆ ಭಾರತ ಆಲೌಟ್
3ನೇ ಮ್ಯಾಚಲ್ಲಿ ಬೌಲಿಂಗ್ ಅಬ್ಬರ, 117 ರನ್ ಗಳಿಗೆ ಆಲೌಟ್
15.5ನೇ ಓವರ್ ನಲ್ಲೇ ಟಾರ್ಗೆಟ್ ರೀಚ್ ಆಗಿ ಗೆದ್ದ ಭಾರತ
ಸೋ ಈ ಅಂಕಿಅಂಶಗಳನ್ನ ನೋಡಿದ್ರೇನೆ ಗೊತ್ತಾಗುತ್ತೆ ಭಾರತ ಪಂದ್ಯಗಳನ್ನ ಗೆಲ್ತಿರೋದು ಬೌಲರ್ಗಳ ಅಟ್ಯಾಕ್ನಿಂದ ಮಾತ್ರನೇ ಅನ್ನೋದು. ಅದ್ರಲ್ಲೂ ಭಾರತ ಬ್ಯಾಟಿಂಗ್ನಲ್ಲಿ 11 ಆಟಗಾರರನ್ನ 9 ಆಟಗಾರರು ಎನ್ನುವಂತಾಗಿದೆ. ಅಂದ್ರೆ ಇಲ್ಲಿ ಸೂರ್ಯ ಮತ್ತು ಗಿಲ್ ಹೆಸ್ರಷ್ಟೇ ಇರುತ್ತೆ ಬ್ಯಾಟಿಂಗ್ ಕೊಡುಗೆ ಏನೂ ಇರಲ್ಲ. ಬಿಲೋ 20, 30 ಒಳಗೇ ಔಟ್ ಆಗೋದ್ರಿಂದ ಭಾರತಕ್ಕೆ ಪ್ರೆಶರ್ ಬಿಟ್ರೆ ಹೆಲ್ಪ್ ಏನೂ ಆಗ್ತಿಲ್ಲ.
ಮೂರನೇ ಮ್ಯಾಚಲ್ಲಿ ಕಂ ಬ್ಯಾಕ್ ಮಾಡೋಕೆ ಸೂರ್ಯ ಮತ್ತು ಗಿಲ್ಗೆ ಒಳ್ಳೆ ಟೈಂ ಅಂತಾ ಕಾಮೆಂಟೇಟರ್ಸ್ ಕೂಡ ಹೇಳ್ತಿದ್ರು. ಅಂದ್ರೆ ಸೌತ್ ಆಫ್ರಿಕಾ ಬೇಗ ಔಟ್ ಆಗಿದ್ರು. ಹೀಗಾಗಿ ಬಿಗ್ ಸ್ಕೋರ್ ಇಲ್ಲದೇ ಇರೋದ್ರಿಂದ ಸೆಟಲ್ ಆಗೋಕೆ ಸ್ವಲ್ಪ ಟೈಂ ತಗೊಳ್ಬೋದು. ಪ್ರೆಶರ್ ಇರಲ್ಲ. ಆ ನಂತ್ರ ಬಿಗ್ ಸ್ಕೋರ್ ಆಗಿ ಕನ್ವರ್ಮ್ ಮಾಡ್ಬೋದು. ಇದಕ್ಕಿಂತ ಬೆಸ್ಟ್ ಆಪ್ಶನ್ ಸಿಗಲ್ಲ ಅಂದಿದ್ರು. ಬಟ್ ಇಬ್ಬರೂ ಕೂಡ ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಸ್ವಲ್ಪದರಲ್ಲೇ ಡಕ್ಔಟ್ ತಪ್ಪಿಸಿಕೊಂಡ ಗಿಲ್ಗೆ ಒಳ್ಳೆ ಆಪರ್ಚುನಿಟಿ ಸಿಕ್ಕಿತ್ತು. ಆದ್ರೆ ಗಿಲ್ ಆರಂಭದಲ್ಲಿ ಅದ್ಭುತವಾಗಿ ಕಾಣಿಸ್ತಿದ್ರೂ ಆ ನಂತ್ರ ಮತ್ತದೇ ಫೇಲ್ಯೂರ್. 28 ಬಾಲಲ್ಲಿ 28 ರನ್ ಗಳಿಸಿ ಔಟಾದ್ರು. ಇನ್ನು ಸೂರ್ಯಂದು ಸೇಮ್ ಸ್ಟೋರಿ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 12 ರನ್ಗಳಿಗೆ ಆಟ ಮುಗಿಸಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಪಂದ್ಯ ಆದ್ಮೇಲೆ ಮಾತ್ನಾಡಿರೋ ಸೂರ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಫಾರ್ಮ್ ಕಳ್ಕೊಂಡಿಲ್ಲ. ನೆಟ್ಸ್ನಲ್ಲಿ ಸಖತ್ತಾಗೇ ಬ್ಯಾಟಿಂಗ್ ಮಾಡ್ತಿದ್ದೀನಿ. ಆದ್ರೆ ಮೈದಾನದಲ್ಲಿ ರನ್ಸ್ ಬರ್ತಿಲ್ಲ ಅಷ್ಟೇ. ರನ್‌ಗಳು ಯಾವಾಗ ಬರಬೇಕೋ ಆಗ ಖಂಡಿತ ಬರುತ್ತವೆ ಎಂದಿದ್ದಾರೆ. ಕಳೆದ 21 ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಒಟ್ಟಾರೆ 239 ರನ್ ಗಳಿಸಿದ್ದಾರೆ. ಯಾವುದೇ ಅರ್ಧ ಶತಕ ಕೂಡ ಬಂದಿಲ್ಲ. ಅದೂ ಕೂಡ 118.90 ಸ್ಟ್ರೇಕ್ ರೇಟ್‌ನೊಂದಿಗೆ. ಹೀಗಿದ್ರೂ ಅದ್ಯಾವ ಲಾಜಿಕ್ ಮೇಲೆ ಫಾರ್ಮ್ ಕಳ್ಕೊಂಡಿಲ್ಲ ಅಂತಾರೋ ಅವ್ರಿಗೇ ಗೊತ್ತು. ಇನ್ನು ಶುಭ್ಮನ್ ಗಿಲ್ ರದ್ದೂ ಅದೇರಾಗ ಅದೇಹಾಡು. ಟಿ-20ಐನಿಂದ ಕೈಬಿಟ್ಟು ಗಿಲ್ಗೆ ರೆಸ್ಟ್ ಕೊಡಿ ಅಂದ್ರೂ ಹಠಕ್ಕೆ ಬಿದ್ದಂತೆ ಬಿಸಿಸಿಐ ಮತ್ತೆ ಮತ್ತೆ ಚಾನ್ಸ್ ಕೊಡ್ತಾನೇ ಇದೆ. ಇವ್ರಿಬ್ಬರ ಔಟ್ ಆಫ್ ಫಾರ್ಮ್ ತಂಡಕ್ಕೆ ಹೊಡೆತ ಬೀಳುವಂತೆ ಮಾಡಿದೆ.

ನೋಡಿರಿ

