3 ದಿನ.. 4 ಸಿಟಿ.. ₹1000 ಕೋಟಿ INCOME – ಭಾರತದಲ್ಲಿ ದುಡ್ಡಿನ ಮಳೆ ಸುರಿಸಿದ ಮೆಸ್ಸಿ!
ಫುಟ್ಬಾಲ್‌ಗೆ ಬಂತಾ ಹೊಸ ಶಕ್ತಿ?

ಲಿಯೊನೆಲ್ ಮೆಸ್ಸಿ ಅವರ “GOAT India Tour 2025” ಡಿಸೆಂಬರ್ 13ರಿಂದ 15 ರ ತನಕ ನಡೆಯಿತು. ಕೊಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿ ನಗರಗಳಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. 2011ರ ನಂತರ ಮೆಸ್ಸಿ ಅವರ ಭಾರತಕ್ಕೆ ಮೊದಲ ಭೇಟಿಯಾಗಿದ್ದು, ಫುಟ್ಬಾಲ್ ಪ್ರೇಮಿಗಳಿಗೆ ಭಾರೀ ಉತ್ಸಾಹ ತಂದಿದೆ. ಹಾಗಿದ್ರೆ ಈ ಮೆಸ್ಸಿಯಿಂದ ಭಾರತಕ್ಕೆ ಏನೆಲ್ಲಾ ಲಾಭ ಆಗಿದೆ ಅನ್ನೋದ್ದನ್ನ ತಿಳಿಯೋಣ.
ಇದನ್ನೂ ಓದಿ: ರಾಶಿಕಾ, ಚೈತ್ರಾ ಕಿತ್ತಾಟ ಮಜವೋ ಮಜಾ! – ರಕ್ಷಿತಾ ಬ್ರೈನ್ ವಾಶ್ ಮಾಡಲು ಮುಂದಾದ ಧ್ರುವಂತ್ ಶೇಪ್‌ಔಟ್!
ಭಾರತದಲ್ಲಿ 3 ದಿನ ಮೆಸ್ಸಿ ಮೇನಿಯಾ ಜೋರಾಗಿತ್ತು. ಮೊದಲ ದಿನ ಅಂದ್ರೆ ಡಿ. 13 ರಂದು ಕೊಲ್ಕತ್ತಾಕ್ಕೆ ಎಂಟ್ರಿ ಕೊಟ್ಟ ಮೆಸ್ಸಿಗೆ ಅದ್ದೂರಿ ವೆಲ್ಕಂ ಸಿಗ್ತು. ಆದ್ರೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಮೀಟ್-ಅಂಡ್-ಗ್ರೀಟ್ ಕಾರ್ಯಕ್ರಮ ಅವ್ಯವಸ್ಥೆಗೆ ಕಾರಣವಾಗಿತ್ತು. ಮೆಸ್ಸಿ ಅವರ ಸುತ್ತಾ ರಾಜಕಾರಣಿಗಳು, ವಿಐಪಿಗಳು ಮತ್ತು ಭದ್ರತಾ ಸಿಬ್ಬಂದಿ ದಟ್ಟವಾಗಿ ಸುತ್ತುವರಿದಿದ್ದರಿಂದ ಟೆಕೆಟ್‌ಗೆ 4 ಸಾವಿರದಿಂದ 12 ಸಾವಿರದ ತನಕ ದುಡ್ಡು ಕೊಟ್ಟು ಬಂದ ಫ್ಯಾನ್ಸ್‌ಗೆ ಮೆಸ್ಸಿಯನ್ನ ನೋಡೋಕೆ ಆಗಿಲ್ಲ. ಮೆಸ್ಸಿ ಕೇವಲ 20-22 ನಿಮಿಷಗಳಷ್ಟೇ ಸ್ಟೇಡಿಯಂನಲ್ಲಿ ಇದ್ದು ಆಮೇಲೆ ಹೋದ್ರು. ಇದರಿಂದ ಕೋಪಗೊಂಡ ಅಭಿಮಾನಿಗಳು ಬಾಟಲ್‌ಗಳನ್ನು ಎಸೆದರು ಕುರ್ಚಿಗಳನ್ನು ಕಿತ್ತು ಬ್ಯಾರಿಕೇಡ್‌ಗಳನ್ನು ಒಡೆದರು ಮತ್ತು ಪಿಚ್‌ಗೆ ಇಳಿದರು. ಆಮೇಲೆ ಮೆಸ್ಸಿ ಹೈದರಾಬಾದ್‌ಗೆ ಹೋದ್ರು ಅಲ್ಲಿ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಮೆಸ್ಸಿ ಜೊತೆಗೆ ಆಟವಾಡಿದರು ಮತ್ತು ಗೋಲು ಕೂಡ ಬಾರಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೆಸ್ಸಿಯನ್ನ ಭೇಟಿ ಮಾಡಿದ್ರು. ಭಾನುವಾರ ಮುಂಬೈನಲ್ಲಿ ಮೆಸ್ಸಿ ಕಾರ್ಯಕ್ರಮ ಯಾವುದೇ ತೊಂದರೆ ಇಲ್ಲದೇ ನಡೆಯಿತು. ಸಚಿನ್ ತೆಂಡೂಲ್ಕರ್ ಕೂಡ ಭಾಗಿಯಾಗಿದ್ರು, ಸಚಿನ್ ತಮ್ಮ ಜರ್ಸಿಯನ್ನ ಮೆಸ್ಸಿಗೆ ನೀಡಿದ್ರು. . ಇನ್ನೂ ಸೋಮವಾರ ದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಆದ್ರೆ ಮೋದಿಯನ್ನ ಭೇಟಿ ಮಾಡ್ತಾರೆ ಎನ್ನಲಾಗಿತ್ತು, ಮೋದಿ ವಿದೇಶ ಪ್ರವಾಸದಲ್ಲಿ ಇರುವುದರಿಂದ ಆ ಕಾರ್ಯಕ್ರಮ ರದ್ದಾಗಿದೆ. ನಾವು ಈಗ ಮೆಸ್ಸಿಯ ಈ ನಾಲ್ಕು ದಿನದ ಭೇಟಿಯಿಂದ ಆಯೋಜಕರಿಗೆ ಹಾಗೂ ಭಾರತಕ್ಕೆ ಏನೆಲ್ಲಾ ಲಾಭ ಆಗಿದೆ ಅನ್ನೋದ್ದನ್ನ ನೋಡೋಣ.
ಮೆಸ್ಸಿಯಿಂದ ಭಾರತಕ್ಕೆ ಏನೆಲ್ಲಾ ಲಾಭ?
ನಾಲ್ಕು ನಗರಗಳಲ್ಲಿ ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿಯಲ್ಲಿ ಲಾಭ
ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಮತ್ತು ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ
4 ನಗರಗಳಲ್ಲಿ ಅಭಿಮಾನಿಗಳ ಆಗಮನದಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಿದೆ
ಟೆಿಕೆಟ್‌ಗಳ ಮಾರಾಟದಿಂದ ಆಯೋಜಕರಿಗೆ ₹500 ರಿಂದ ₹800 ಕೋಟಿ ಆದಾಯ
ಮೆಸ್ಸಿ ಭೇಟಿಯಿಂದ ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ಉತ್ಸಾಹ
ಯೂತ್ ಕ್ಲಿನಿಕ್‌ಗಳು ಮತ್ತು ಕೋಚಿಂಗ್ ಪ್ರೋಗ್ರಾಮ್‌ಗಳ ಮೂಲಕ ಯುವಕರಲ್ಲಿ ಆಸಕ್ತಿ
ಸ್ಪಾನ್ಸರ್‌ಗಳು, ಮರ್ಚೆಂಡೈಸ್, ಬ್ರಾಡ್‌ಕಾಸ್ಟಿಂಗ್ ಹಕ್ಕುಗಳಿಂದ ಹೆಚ್ಚುವರಿ ಆದಾಯ
ಮೆಸ್ಸಿ ಟೂರ್‌ನಿಂದ ಭಾರತಕ್ಕೆ ಅಂದಾಜು ₹500-800 ಕೋಟಿ ಆರ್ಥಿಕ ಪ್ರಯೋಜನ
ಮೆಸ್ಸಿಯವರು ಸುಮಾರು 100 ರಿಂದ 120 ಕೋಟಿ ಸಂಭಾವನೆ

ನೋಡಿರಿ

