ರಾಶಿಕಾ, ಚೈತ್ರಾ ಕಿತ್ತಾಟ ಮಜವೋ ಮಜಾ! – ರಕ್ಷಿತಾ ಬ್ರೈನ್‌ ವಾಶ್‌ ಮಾಡಲು ಮುಂದಾದ ಧ್ರುವಂತ್‌ ಶೇಪ್‌ಔಟ್!‌

ರಾಶಿಕಾ, ಚೈತ್ರಾ ಕಿತ್ತಾಟ ಮಜವೋ ಮಜಾ! – ರಕ್ಷಿತಾ ಬ್ರೈನ್‌ ವಾಶ್‌ ಮಾಡಲು ಮುಂದಾದ ಧ್ರುವಂತ್‌ ಶೇಪ್‌ಔಟ್!‌

ರಕ್ಷಿತಾ, ಧ್ರುವಂತ್‌ ಸೀಕ್ರೆಟ್‌ ರೂಮ್‌ನಲ್ಲಿ ಇದ್ರೆ, ಇತ್ತ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ಶುರುವಾಗಿದೆ. ಈ ವಾರ ಕೂಡ 2 ಟೀಮ್‌ ಮಾಡಿದ್ದು, ಟೀಮ್‌ಗಳಿಗೆ ಟಾಸ್ಕ್‌ ನೀಡಲಾಗುತ್ತಿದೆ. ಇದೀಗ ಟಾಸ್ಕ್‌ ಮಧ್ಯೆ ಚೈತ್ರಾ ಹಾಗೂ ರಾಶಿಕಾ ಸರಿಯಾಗೇ ಕಿತ್ತಾಡಿಕೊಂಡಿದ್ದಾರೆ. ಇದೀಗ ಇವರಿಬ್ಬರು ಕಿತ್ತಾಡುತ್ತಿರುವುದನ್ನ ನೋಡಿಕೊಂಡು ಮಜಾ ತೆಗೆದುಕೊಳ್ತಿದ್ದಾರೆ ರಕ್ಷಿತಾ ಹಾಗೂ ಧುವಂತ್‌. ಮತ್ತೊಂದ್ಕಡೆ ಧ್ರುವಂತ್‌ ರಕ್ಷಿತಾ ಬ್ರೈನ್‌ ವಾಶ್‌ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮೊಟ್ಟೆ ಪ್ರೋಟಿನ್‌ ಅಲ್ಲ.. ಕ್ಯಾನ್ಸರ್‌ ಮೂಲ!? – ಮೊಟ್ಟೆ ಟೆಸ್ಟ್‌ಗೆ ಆರೋಗ್ಯ ಇಲಾಖೆ ಸೂಚನೆ!

ದೊಡ್ಮನೆಯ ಆಟ ಕ್ಷಣ ಕ್ಷಣಕ್ಕೂ ರೋಚಕತೆ ಮೂಡಿಸುತ್ತಿದೆ. ಈ ವಾರ ರಕ್ಷಿತಾ ಹಾಗೂ ಧ್ರುವಂತ್‌ ಸೀಕ್ರೆಟ್‌ ರೂಮ್‌ನಲ್ಲಿ ಇದ್ದಾರೆ. ಇಲ್ಲಿಂದಲೇ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೋಡುತ್ತಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ನೀಡಿದ್ದಾರೆ. ಕಲರ್‌ ಪಸಲ್ಸ್‌ ನ ಜೋಡಿಸುವ ಟಾಸ್ಕ್‌ ನೀಡಿದ್ದಾರೆ. ಈ ವೇಳೆ ಅಶ್ವಿನಿ ಹಾಗೂ ಚೈತ್ರಾ ಎಳೆದಾಡಿದ್ದಾರೆ. ಆಗ ರಾಶಿಕಾ ಅಶ್ವಿನಿ ಪರವಾಗಿ ಮಾತನಾಡಿದ್ದಾರೆ. ಆಗ ಚೈತ್ರಾ ಕೂಗಾಡಿದ್ದಾರೆ. ಇವರಿಗೆ ಬೇಕಾದವರನ್ನ ಸೇವ್‌ ಮಾಡಬೇಕಾದ್ರೆ, ಯಾವ ನೈತಿಕತೆ ಇಟ್ಕೊಂಡು ಮಾತಾಡ್ತಾರೆ ಎಂದು ರಾಶಿಕಾ ಮೇಲೆ ಚೈತ್ರಾ ಕೂಗಾಡಿದ್ದಾರೆ. ಇವರ ಕಿತ್ತಾಟ ನೋಡಿ ಧ್ರುವಂತ್‌ ಹಾಗೂ ರಕ್ಷಿತಾ ಜೋರಾಗಿ ನಕ್ಕಿದ್ದಾರೆ.

ಮತ್ತೊಂದ್ಕಡೆ ಧ್ರುವಂತ್ ಸೀಕ್ರೆಟ್‌ ರೂಮ್‌ನಲ್ಲಿ ರಕ್ಷಿತಾ ಬ್ರೈನ್‌ ವಾಶ್‌ ಮಾಡಲು ಮುಂದಾಗಿದ್ದಾರೆ. ರಕ್ಷಿತಾಗೆ ಅಕಸ್ಮಾತ್‌ ನೀವು‌ ಒಬ್ರೇ ಸೀಕ್ರೆಟ್‌ ರೂಮ್‌ನಲ್ಲಿದ್ದು, ನಾನು ಅಲ್ಲಿರ್ತಿದ್ರೆ, ಯಾರು ಬೆಸ್ಟ್‌ ಅನ್ನಿಸ್ತಿತ್ತು ಅಂತ ಧ್ರುವಂತ್‌ ಕೇಳಿದ್ದಾರೆ. ಆಗ ರಕ್ಷಿತಾ ನಾನೇ ಅಂತ ಹೇಳಿದ್ದಾರೆ. ಇದನ್ನ ಕೇಳಿ ಶಾಕ್‌ ಆದ ಧ್ರುವಂತ್‌, ಗುರು ನಾನು ಅಲ್ಲಿ ಇರೋರನ್ನ ಹೇಳಿದ್ದು, ಇಲ್ಲಿ ಇರೋರನ್ನ ಹೇಳಿಲ್ಲ ಅಂದಿದ್ದಾರೆ. ಆಗ ರಕ್ಷಿತಾ ನೀವು ಯಾಕೆ ಅಲ್ಲಿಲ್ಲ ಅಂತ ಕನ್ಸಿಡರ್‌ ಮಾಡಲ್ಲ.. ನಾನು ನನ್ನ ಕನಸಲ್ಲಿ ಕೂಡ ಯೋಚನೆ ಮಾಡಲ್ಲ ಎಂದಿದ್ದಾರೆ. ಆಗ ಧ್ರುವಂತ್‌ ತನ್ನ ಪ್ರಶ್ನೆಯನ್ನ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ. ಆದ್ರೆ ರಕ್ಷಿತಾ ತನ್ನದೇ ವಾದ ಮುಂದುವರಿಸಿದ್ದಾರೆ. ಇದೀಗ ರಕ್ಷಿತಾ ಹಾಗೂ ಧ್ರುವಂತ್‌ ಮುಂದೆ ಹೇಗಿರ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

Shwetha M