ಅಯ್ಯೋ ದೇವ್ರೇ.. ಒಂದೇ ರೂಮಿನಲ್ಲಿ ನಿಮ್ಮ ಜೊತೆ ಹೇಗೆ ಇರೋದು? – ಸೀಕ್ರೆಟ್‌ ರೂಮ್‌ಗೆ ಬರ್ತಿದ್ದಂತೆ ರಕ್ಷಿತಾಗೆ ಟೆನ್ಷನ್‌ ಶುರು!

ಅಯ್ಯೋ ದೇವ್ರೇ.. ಒಂದೇ ರೂಮಿನಲ್ಲಿ ನಿಮ್ಮ ಜೊತೆ ಹೇಗೆ ಇರೋದು? – ಸೀಕ್ರೆಟ್‌ ರೂಮ್‌ಗೆ ಬರ್ತಿದ್ದಂತೆ ರಕ್ಷಿತಾಗೆ ಟೆನ್ಷನ್‌ ಶುರು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡಲಾಗ್ತಿದೆ. ಈ ಸೀಸನ್‌ ನಲ್ಲಿ ರಕ್ಷಿತಾ ಶೆಟ್ಟಿ ಮೊದಲ ವಾರವೇ ಇವಿಕ್ಟ್‌ ಆಗಿದ್ರು. ಅದಾದ ಮೇಲೆ ಮತ್ತೆ ಕರೆಸಿಕೊಳ್ಳಲಾಗಿತ್ತು. ಇದೀಗ ಮತ್ತೆ ಬಿಗ್‌ಬಾಸ್‌ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್‌ ನನ್ನ ಸೀಕ್ರೆಟ್‌ ರೂಮ್‌ಗೆ ಕಳುಹಿಸಿದ್ದಾರೆ. ಸೀಕ್ರೆಟ್‌ ರೂಮ್‌ಗೆ ಕಾಲಿಟ್ಟ ಒಂದೇ ದಿನಕ್ಕೆ ರಕ್ಷಿತಾಗೆ ತಲೆನೋವು ಶುರುವಾಗಿದೆ. ಧ್ರುವಂತ್‌ ಗೆ ಆಟ ಆದ್ರೆ ರಕ್ಷಿತಾಗೆ ಪ್ರಾಣ ಸಂಕಟ ಎನ್ನುವಂತಾಗಿದೆ.

ಇದನ್ನೂ ಓದಿ: ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪೊಲೀಸರು! – ಖಾಕಿಗೆ ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ!

ಧುವಂತ್‌ಗೆ ರಕ್ಷಿತಾಳನ್ನ ಕಂಡ್ರೆ ಒಂಚೂರು ಆಗಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ರಕ್ಷಿತಾ ಆರಂಭದಲ್ಲಿ ಅಣ್ಣ ಎಂದು ಕರಿತಾ ಇದ್ರು. ಧ್ರುವಂತ್‌ ಬಗ್ಗೆ ಗೊತ್ತಾಗುತ್ತಿದ್ದಂತೆ ರಕ್ಷಿತಾ ಆತನಿಂದ ದೂರ ಉಳಿದಿದ್ರು. ಆದ್ರೀಗ ಇವರಿಬ್ಬರನ್ನ ಸೀಕ್ರೆಟ್‌ ರೂಮ್‌ಗೆ ಕಳುಹಿಸಲಾಗಿದೆ. ಇದೀಗ ಧ್ರುವಂತ್‌ ಸೀಕ್ರೆಟ್‌ ರೂಮ್‌ನಲ್ಲೂ ಕಾಟ ಕೊಡೋದಿಕ್ಕೆ ಶುರುಮಾಡಿದ್ದಾರೆ.  ಧ್ರುವಂತ್‌ ಕೊಟ್ಟ ಕಾಟಕ್ಕೆ ರಕ್ಷಿತಾ ತಲೆ ಮೇಲೆ ಕೈ ಇಟ್ಟುಕೊಳ್ಳುವಂತೆ ಆಗಿದೆ.

ಹೌದು, ದೊಡ್ಮನೆಯಲ್ಲಿ ರಕ್ಷಿತಾ ಹಾಗೂ ಧ್ರುವಂತ್‌ ಎಲಿಮಿನೇಟ್‌ ಆಗಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಹೀಗಾಗಿ ಅವರಿಬ್ಬರ ಬಗ್ಗೆ ಮನೆಮಂದಿ ಮಾತನಾಡುತ್ತಿದ್ದಾರೆ. ಇದನ್ನ ಬಿಗ್‌ಬಾಸ್‌ ಸೀಕ್ರೆಟ್‌ ರೂಮ್‌ನಲ್ಲಿ ಪ್ಲೇ ಮಾಡಿದ್ದಾರೆ.  ಮನೆಯ ಒಳಗೆ ಚೈತ್ರಾ ಅವರು ರಾಶಿಕಾ ಬಳಿ, ರಕ್ಷಿತಾದು ಒಂದೇ ಸಮಸ್ಯೆ ಅಂದ್ರೆ ತುಂಬಾ ಕನ್‌ಫ್ಯೂಸ್‌ ಆಗಿರ್ತಾ ಇದ್ಲು ಎಂದಿದ್ದಾರೆ. ಇನ್ನು ರಜತ್‌, ರಕ್ಷಿತಾ ಮನೆಯಿಂದ ಹೊರಗೆ ಹೋಗುವಾಗ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಇತ್ತು. ಧ್ರುವಂತ್‌ಗೆ ಯಾರು ಒಬ್ಬರು ಮಾತನಾಡಿಸಲಿಲ್ಲ ಎಂದಿದ್ದಾರೆ. ಈ ವೇಳೆ ರಕ್ಷಿತಾ, ಧ್ರುವಂತ್‌ಗೆ ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ. ಇನ್ನು ಗಿಲ್ಲಿ ಕೂಡ ರಕ್ಷಿತಾ ಬಗ್ಗೆ ಮಾತನಾಡಿದ್ರು. ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಬೇಸರವಾಯ್ತು, ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.

ಮನೆಮಂದಿ ರಕ್ಷಿತಾ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳುತ್ತಿದ್ದಂತೆ ಧ್ರುವಂತ್‌ ಉರ್ಕೊಂಡಿದ್ದಾರೆ. ಈ ಬೆನ್ನಲ್ಲೇ ರಕ್ಷಿತಾಗೆ ವ್ಯಂಗ್ಯ ಮಾಡಲು ಶುರು ಮಾಡಿದರು. ನಿನ್ನಂಥವರೇ, ನಿನ್ನ ಇಡೀ ಮನೆಯಲ್ಲಿ ಡ್ರಾಮಗಳನ್ನು ನೋಡಿಕೊಂಡೇ ಬಂದಿದ್ದೇನೆ ಎಂದಿದ್ದಾರೆ. ಧ್ರುವಂತ್‌ ಕೊಡೋ ಕಾಟಕ್ಕೆ, ಅಯ್ಯೋ ದೇವರೇ ಒಂದೇ ರೂಮಲ್ಲಿ ನಿಮ್ಮ ಜೊತೆ ಹೇಗೆ ಇರೋದು! ಅಂತ ಫುಲ್‌ ಟೆನ್ಷನ್‌ ಮಾಡಿಕೊಂಡಿದ್ದಾರೆ.

Shwetha M