ಇವ್ರು ಸ್ಪರ್ಧಿಗಳೋ, ಎಲಿಮೆಂಟ್​ಗಳೊ?.. ನನ್ನನ್ನ ಟಾರ್ಗೆಟ್‌ ಮಾಡ್ತಿದ್ದಾರೆ – ಕಿಚ್ಚನ ಮುಂದೆ ಅಶ್ವಿನಿ ಗೌಡ ಗರಂ

ಇವ್ರು ಸ್ಪರ್ಧಿಗಳೋ, ಎಲಿಮೆಂಟ್​ಗಳೊ?.. ನನ್ನನ್ನ ಟಾರ್ಗೆಟ್‌ ಮಾಡ್ತಿದ್ದಾರೆ – ಕಿಚ್ಚನ ಮುಂದೆ ಅಶ್ವಿನಿ ಗೌಡ ಗರಂ

ಶನಿವಾರ ಬಂತು ಅಂದರೆ ಸಾಕು ಕಿಚ್ಚನ ಪಂಚಾಯ್ತಿಗೆ ಕಾದು ಕುಳಿತಿರುತ್ತಾರೆ ವೀಕ್ಷಕರು. ಅದರಲ್ಲೂ ಕಿಚ್ಚನ ಕ್ಲಾಸ್‌ಗೆ ಹಲವರು ಕಾದು ಕುಳಿತಿರುತ್ತಾರೆ. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ, ರಜತ್ ಮತ್ತು ಚೈತ್ರಾ ಕುಂದಾಪುರ ತನ್ನನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಶ್ವಿನಿ ಗೌಡ ಕಿಚ್ಚ ಸುದೀಪ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜ.6ಕ್ಕೆ ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ! – ಇಕ್ಬಾಲ್‌ ಹುಸೇನ್‌ ಸ್ಪೋಟಕ ಹೇಳಿಕೆ

ಬಿಗ್‌ಬಾಸ್‌ ಮನೆಯಲ್ಲಿ ಇಷ್ಟು ದಿನ ಅಶ್ವಿನಿ ಗೌಡ ಬೇರೆಯವರನ್ನ ಟಾರ್ಗೆಟ್‌ ಮಾಡ್ತಿದ್ರು. ಆದ್ರೀಗ ಮೊದಲ ಬಾರಿಗೆ ನನ್ನನ್ನೇ ಟಾರ್ಗೆಟ್‌ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್​, ರಾಶಿಕಾ ಕ್ಯಾಪ್ಟೆನ್ಸಿಗೆ ಮನೆಯಲ್ಲಿ ರಿಯಾಕ್ಷನ್​ ಹೇಗಿದೆ ಎಂದು ಕೇಳಿದಾಗ, ರಜತ್​ ಅವರು, ಅಶ್ವಿನಿ ಅವರು ತುಂಬಾ ಈಸಿಯಾಗಿ ಸಾಲ್ವ್​ ಆಗುವ ವಿಷಯಗಳನ್ನು burst ಮಾಡಿದ್ದಾರೆ ಎನ್ನಿಸತ್ತೆ ಎಂದು ಹೇಳಿದರು. ಇದರಿಂದ ಅಶ್ವಿನಿ ಗೌಡ ಕೆಂಡಾಮಂಡಲ ಆದರು. ರಜತ್​ ಯಾಕೆ ಇಷ್ಟೊಂದು ಸ್ಟುಪಿಡ್​ ಆಗಿ ಮಾತಾಡ್ತಾ ಇದ್ದಾರೆ ಅಂತ ನನಗೆ ಅರ್ಥ ಆಗ್ತಿಲ್ಲ. ಅನ್​ನೆಸ್ಸಸ್ಸರಿ ಆಗಿ ನನ್ನನ್ನು ರಜತ್​ ಮತ್ತು ಚೈತ್ರಾ ಟಾರ್ಗೆಟ್​ ಮಾಡುತ್ತಿದ್ದಾರೆ. ಅವರು ನನ್ನ ತಂಟೆಗೆ ಬರಬಾರದು ಅಷ್ಟೇ ಎಂದು ಸುದೀಪ್​ ಎದುರು ರೇಗಾಡಿದರು.

ಏ ಸುಬ್ಬಿ ಆ ಮುದುಕಿಯನ್ನು ಹೊಡೀತಿನಿ ಕಣೋ, ಬಿಡಲ್ಲ ಕಣೋ ಅಂತ ಹೇಳ್ತಾರೆ, ಏನಿದು ಎಂದು ಪ್ರಶ್ನಿಸಿರೋ ಅಶ್ವಿನಿ ಗೌಡ, ಬಿಗ್​ಬಾಸ್​​ನವರು ಮನೆಯೊಳಕ್ಕೆ ಕಂಟೆಸ್ಟೆಂಟ್​ ಅನ್ನು ಕಳಿಸಿದ್ದಾರೋ ಅಥ್ವಾ ಬೇರೆ ಯಾವುದೋ ಎಲಿಮೆಂಟ್​ ಅನ್ನು ಕಳಿಸಿದ್ದಾರೋ ಗೊತ್ತಾಗ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಸೀಸನ್​ 12ರಲ್ಲಿ ಇವರಿಬ್ಬರಷ್ಟು ಕಳಪೆ ಯಾರೂ ಇಲ್ಲ ಕಣಣ್ಣ ಎಂದು ನಾನು ಎದೆ ತಟ್ಟಿಕೊಂಡು ಹೇಳ್ತೀನಿ ಎಂದು ಅಶ್ವಿನಿ ಗೌಡ ಕಿಚ್ಚ ಸುದೀಪ್​ಗೆ ಹೇಳಿದ್ದಾರೆ.

Shwetha M