ಗಂಭೀರ್ ಗೆ Favouritism ರಿವರ್ಸ್ – ಗೌತಿ ವಿರುದ್ಧ ನೆಗೆಟಿವ್ ಹಬ್ಬಿದ್ದೇಗೆ?
T-20I ಸರಣಿ ಗೆದ್ರಷ್ಟೇ ಸೇಫ್

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟಿ-20ಐ ಸರಣಿ ಗೆಲ್ಲೋದು ತಂಡಕ್ಕೆ ಎಷ್ಟು ಮುಖ್ಯವೋ ಗೌತಮ್ ಗಂಭೀರ್ ಪಾಲಿಗೂ ಅಷ್ಟೇ ಮುಖ್ಯವಾಗುತ್ತೆ. ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಗಂಭೀರ್ ಬಗ್ಗೆ ತುಂಬಾನೇ ನೆಗೆಟಿವ್ ಒಪೀನಿಯನ್ಸ್ ಇದೆ. ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್ ಕೂಡ ಸಿಟ್ಟಾಗಿದ್ದಾರೆ. ಇಂಥಾ ಟೈಮಲ್ಲಿ ಗಂಭೀರ್ನ ಕಾಪಾಡ್ತಾ ಇರೋದೇ ಟಿ-20ಐ ಮ್ಯಾಚಸ್. ಬಟ್ ಈಗ ಟಿ-20ಐನಲ್ಲೂ ಗಂಭೀರ್ ತೆಗೆದುಕೊಳ್ತಿರೋ ನಿರ್ಧಾರಗಳು ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : U-19 ODIನಲ್ಲಿ ವೈಭವ್ ಸೂರ್ಯವಂಶಿ ಆರ್ಭಟ – 95 ಎಸೆತಗಳಲ್ಲಿ 171 ರನ್
2024ರ ಟಿ-20 ವಿಶ್ವಕಪ್ನೊಂದಿಗೆ ರಾಹುಲ್ ದ್ರಾವಿಡ್ ಹೆಡ್ಕೋಚ್ ಹುದ್ದೆಯಿಂದ ಕೆಳಗಿಳೀತಾರೆ. ಇಂಥಾ ಟೈಮಲ್ಲಿ ಕೋಚ್ ಆಗಿ ಎಂಟ್ರಿ ಕೊಟ್ಟಿದ್ದೇ ಗೌತಮ್ ಗಂಭೀರ್. ಌಕ್ಚುಲಿ ಗಂಭೀರ್ ಕೋಚ್ ಆಗೋ ಮೊದ್ಲೇ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ವು. ಅವ್ರ ಥಾಟ್ಸ್ ಬಗ್ಗೆ, ಟೀಂ ಇಂಡಿಯಾ ಪ್ರೆಡಿಕ್ಷನ್, ಸ್ಟಾರ್ ಡಂ, ಕೋಚಿಂಗ್ ಸ್ಟಾಫ್ಸ್ ಹೀಗೆ ಅವ್ರು ನೀಡಿದ್ದ ಹೇಳಿಕೆಗಳು ಅಸಮಾಧಾನಕ್ಕೆ ಕಾರಣವಾಗಿತ್ತು. ಕೋಚ್ ಆದ್ಮೇಲಂತೂ ಅವ್ರ ನಿರ್ಧಾರಗಳು ಇಂದಿಗೂ ಚರ್ಚೆಯಾಗ್ತಾನೇ ಇರುತ್ವೆ. ಸೌತ್ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ ಸೋತ ಮೇಲಂತೂ ಗಂಭೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಟಿ-20ಐನಲ್ಲಿ ತಂಡ ಹಳ್ಳ ಹಿಡಿದ್ರೆ ಗಂಭೀರ್ ಗೆ ಹೊಡೆತ!
ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ಪವರ್ ಸಿಕ್ಕಿದ್ಮೇಲೆ ಭಾರತ ಈವರೆಗೂ ಒಂದೇ ಒಂದು ಟಿ-20ಐ ಸರಣಿ ಸೋತಿಲ್ಲ. 2025ರ ಏಷ್ಯಾಕಪ್ನಲ್ಲಿ ಅಜೇಯವಾಗಿ ಟ್ರೋಫಿ ವಿನ್ ಆಗಿತ್ತು. ಆದ್ರೆ ತಂಡ ಪಂದ್ಯಗಳನ್ನ ಗೆಲ್ತಿದ್ರೂ ಪ್ಲೇಯಿಂಗ್ 11ನಲ್ಲಿನ ಬದಲಾವಣೆಗಳೇ ಗಂಭೀರ್ಗೆ ತಿರುಗು ಬಾಣವಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಸಿರೀಸ್ನಲ್ಲೂ ಎಕ್ಸ್ಪೆರಿಮೆಂಟ್ ನಿಂತಿಲ್ಲ. ಹೀಗಾಗಿ ಇದನ್ನೆಲ್ಲಾ ತಣ್ಣಗೆ ಮಾಡ್ಬೇಕು ಅಂದ್ರೆ ಗಂಭೀರ್ ಈ ಸರಣಿ ಗೆಲ್ಲಲೇಬೇಕಾಗುತ್ತೆ.
ಗಂಭೀರ್ ಪಾಲಿಗೆ ಅಗ್ನಿಪರೀಕ್ಷೆ!
ಟೆಸ್ಟ್ ನಲ್ಲಿ ಕ್ಲೀನ್ ಸ್ವೀಪ್.. ರೋ-ಕೊ ಜೊತೆ ಅಪಸ್ವರ
ಟಿ20ಐನಲ್ಲಿ ಸ್ಯಾಮ್ಸನ್ ಕೈಬಿಟ್ಟಿದ್ದು ದೊಡ್ಡ ಮಟ್ಟದಲ್ಲಿ ಸದ್ದು
ಗಿಲ್ ಕಳಪೆ ಫಾರ್ಮ್ ಗಂಭೀರ್ ಗೆ ಬಿಗ್ ಸೆಟ್ ಬ್ಯಾಕ್
ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡ್ತಿರೋದಕ್ಕೆ ಸಿಟ್ಟು
2024ರ ಟಿ-20 ವಿಶ್ವಕಪ್ ಟ್ರೋಫಿ ಉಳಿಸಿಕೊಳ್ಳಬೇಕು
ಹೀಗೆ ಟಿ-20ಐನಲ್ಲಿ ಜಗತ್ತಿನ ನಂಬರ್ 1 ಟೀಂ ಆಗಿರೋ ಟೀಂ ಇಂಡಿಯಾ ಮತ್ತೊಂದು ವಿಶ್ವಕಪ್ ಆಡೋಕೆ ಕೆಲವೇ ವಾರಗಳಷ್ಟೇ ಬಾಕಿ. 2026ರ ಫೆಬ್ರವರಿಯಲ್ಲಿ ಟಿ-20 ವಿಶ್ವಕಪ್ ಫಿಕ್ಸ್ ಆಗಿದೆ. ಇಷ್ಟು ದಿನ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೂ ವಿಶ್ವಕಪ್ ಗೆಲ್ಲೋದೇ ಟಾರ್ಗೆಟ್ ಆಗುತ್ತೆ. ಹೀಗಾಗಿ ಈ ಸರಣಿಯನ್ನ ಗೆಲ್ಲೋದು ಭಾರತಕ್ಕೆ ಎಷ್ಟು ಮುಖ್ಯವೂ ಗಂಭೀರ್ ಪಾಲಿಗೂ ಅಷ್ಟೇ ಮುಖ್ಯವಾಗುತ್ತೆ.

ನೋಡಿರಿ

