SUPER MAN ಜಿತೇಶ್ ಶರ್ಮಾ – ಸ್ಟಂಪ್ಸ್ ಹಿಂದೆ ಧೋನಿ ನೆನಪಿಸಿದ್ದೇಗೆ?
T-20I ಸ್ಟ್ರೆಂಥ್ ಆದ್ರಾ ಶರ್ಮಾ?

ಕ್ರಿಕೆಟ್ನಲ್ಲಿ ಆಲ್ರೌಂಡ್ ಪ್ರದರ್ಶನ ಚೆನ್ನಾಗಿದ್ರೆ ಮಾತ್ರವೇ ಮ್ಯಾಚ್ ಗೆಲ್ಲೋಕೆ ಸಾಧ್ಯ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಇವ್ರಲ್ಲಿ ಯಾರೇ ಕೈಕೊಟ್ರೂ ಮ್ಯಾಚ್ ಹೊಗೆನೆ. ಬಟ್ ಇವ್ರೆಲ್ಲರ ಜೊತೆಗೆ ವಿಕೆಟ್ ಕೀಪರ್ಗಳ ಪಾತ್ರವೂ ದೊಡ್ಡದಿದೆ. ಸ್ಟಂಪ್ಗಳ ಹಿಂದೆ ನಿಂತು ಫ್ರಾಕ್ಷನ್ ಆಫ್ ಸೆಕೆಂಡ್ಸ್ನಲ್ಲಿ ವಿಕೆಟ್ ಎಗರಿಸೋ ಚಾಣಾಕ್ಷ್ಯತನ ಇರ್ಬೇಕು. ಈ ವಿಚಾರದಲ್ಲಿ ಭಾರತದ ಪರ ಮಹೇಂದ್ರ ಸಿಂಗ್ ಧೋನಿ ಯಾವಾಗ್ಲೂ ಫಸ್ಟ್ ಪ್ಲೇಸ್ನಲ್ಲಿದ್ದಾರೆ. ಬಟ್ ಇತ್ತೀಚೆಗೆ ಧೋನಿ ನೆನಪಿಸುವಂಥ ಕೆಲಸ ಮಾಡ್ತಿರೋದು ಜಿತೇಶ್ ಶರ್ಮಾ. ಟೀಂ ಇಂಡಿಯಾ ಪರ ಟಿ-20ಐ ಫಾರ್ಮೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಜಿತೇಶ್ ಸದ್ದು ಮಾಡ್ತಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿ – ಪುಟ್ಬಾಲ್ ತಾರೆ ಎಂಟ್ರಿ ವೇಳೆ ಫ್ಯಾನ್ಸ್ ಸಂಭ್ರಮ ಹೇಗಿತ್ತು ನೋಡಿ
ಸೌತ್ ಆಫ್ರಿಕಾ ವಿರುದ್ಧದ ಟಿ-20ಐ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದಿದ್ದ ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ನಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ. ಕಟಕ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ನಾಲ್ಕು ಕ್ಯಾಚ್ಗಳನ್ನ ಹಿಡಿದು ದಾಖಲೆ ಬರೆದಿದ್ರು. ಅದೂ ಕೂಡ ಟಾಪ್ ಎಡ್ಜ್ ಆಗಿದ್ದ ಬಾಲ್ಗಳನ್ನ ಡೈ ಹೊಡೆದು ಹಿಡಿಯೋ ಮೂಲಕ ಇಬ್ಬರನ್ನ ಔಟ್ ಮಾಡಿದ್ರು. ಌಂಡ್ ರಿವ್ಯೂ ಟೈಮಲ್ಲೂ ಕರೆಕ್ಟ್ ಸಜೇಷನ್ಸ್ ಕೊಡ್ತಿದ್ದಾರೆ. ಇನ್ನು ಎರಡನೇ ಮ್ಯಾಚಲ್ಲಂತೂ ಧೋನಿ ಹೆಸರು ಮತ್ತೆ ಮುನ್ನಲೆಗೆ ಬರುವಂಥ ಕೆಲಸ ಮಾಡಿದ್ದಾರೆ.
ಶರವೇಗದಲ್ಲಿ ಡಿ ಕಾಕ್ ರನ್ ಔಟ್ ಮಾಡಿದ ಜಿತೇಶ್!
ಜಿತೇಶ್ ಶರ್ಮಾ ಒನ್ ಆಫ್ ದಿ ಬೆಸ್ಟ್ ವಿಕೆಟ್ ಕೀಪರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಎರಡನೇ ಟಿ-20ಐ ಮ್ಯಾಚಲ್ಲಿ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಹೊಡೆದು ಶತಕದತ್ತ ಹೆಜ್ಜೆ ಇಟ್ಟಿದ್ರು. ಈ ವೇಳೆ, ವರುಣ್ ಚಕ್ರವರ್ತಿ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲಿ ಚೆಂಡು ಬ್ಯಾಟ್ನ ಅಂಚಿಗೆ ತಗುಲಿ ಕೀಪರ್ ಕಡೆಗೆ ಹೋಯ್ತು. ಬಟ್ ಡಿಕಾಕ್ ಕ್ರೀಸ್ನಿಂದ ಹೊರಗಿದ್ರು. ಈ ವೇಳೆ ಜಿತೇಶ್ ಬಾಲ್ ಹಿಡಿದು ಮಿಂಚಿನ ವೇಗದಲ್ಲಿ ಬೇಲ್ ಎಗರಿಸಿದ್ರು. ಡಿ ಕಾಕ್ ಕ್ರೀಸ್ಗೆ ತಲುಪೋ ಮೊದ್ಲೇ ಬೇಲ್ಸ್ ಬಿದ್ದ ಕಾರಣ ಅಂಪೈರ್ ಔಟ್ ಕೊಟ್ರು. ಜಿತೇಶ್ರ ಇದೇ ಚುರುಕಾದ ವಿಕೆಟ್ ಕೀಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಧೋನಿಯನ್ನ ನೆನಪಿಸುತ್ತಿದೆ ಎಂದು ಕೆಲವರು ಪೋಸ್ಟ್ಗಳನ್ನ ಹಾಕ್ತಿದ್ದಾರೆ. ಐಪಿಎಲ್ ಫ್ರಾಂಚೈಸಿಗಳೂ ಕೂಡ ಜಿತೇಶ್ ಇದ್ದಾಗ ಫಿಯರ್ ಯಾಕೆ ಅಂತಾ ಬರ್ಕೊಂಡಿದ್ದಾರೆ. ಌಂಡ್ ಬ್ಯಾಟಿಂಗ್ನಲ್ಲೂ ಜಿತೇಶ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ 5 ಬಾಲಲ್ಲಿ 10 ರನ್ ಸೆಕೆಂಡ್ ಮ್ಯಾಚಲ್ಲಿ 17 ಬಾಲಲ್ಲಿ 27 ರನ್ಸ್.. ತಿಲಕ್ ವರ್ಮಾ ಬಿಟ್ರೆ ಸೆಕೆಂಡ್ ಹೈಯೆಸ್ಟ್ ಸ್ಕೋರರ್. ಹೀಗಾಗೇ ಸೋಶಿಯಲ್ ಮೀಡಿಯಾದಲ್ಲಿ ಧೋನಿ ಹೆಸರು ಮತ್ತೆ ರಾರಾಜಿಸ್ತಿದೆ.
ವಿಕೆಟ್ ಕೀಪರ್ ಆಗಿ ಧೋನಿ ಆಲ್ವೇಸ್ ಕಿಂಗ್!
ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್ನಲ್ಲಿ ವಿಶ್ವಕ್ರಿಕೆಟ್ನಲ್ಲೇ ಚಮತ್ಕಾರ ಮಾಡಿದ್ದಾರೆ. ಅತೀ ಹೆಚ್ಚು ಅಂತಾರಾಷ್ಟ್ರೀಯ ಸ್ಟಂಪಿಂಗ್ಗಳ ಪಟ್ಟಿಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಟೆಸ್ಟ್, ಏಕದಿನ ಹಾಗೇ ಟಿ20ಐ ಪಂದ್ಯಗಳೂ ಸೇರಿ ಒಟ್ಟು 195 ಸ್ಟಂಪ್ಔಟ್ ಮಾಡಿದ್ದಾರೆ. ಮೂರೂ ಮಾದರಿಲ್ಲಿ ಕ್ಯಾಚ್ಗಳು, ಸ್ಟಂಪಿಂಗ್ ಎಲ್ಲಾ ಸೇರಿ 829 ಔಟ್ಗಳನ್ನ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ಸಾರ್ವಕಾಲಿಕ ಮೂರನೇ ಅತೀ ಹೆಚ್ಚು ಡಿಸ್ಮಿಸಲ್ಸ್ ಮಾಡಿದ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಧೋನಿ ಬ್ಯಾಟಿಂಗ್, ಕ್ಯಾಪ್ಟನ್ ಆಗಿ ಅಷ್ಟೇ ಅಲ್ದೇ ವಿಕೆಟ್ ಕೀಪರ್ ಆಗಿಯೂ ಜಗತ್ತಿನಲ್ಲಿ ಸದ್ದು ಮಾಡಿದ್ದಾರೆ. ಪ್ರಸ್ತುತ ಜಿತೇಶ್ ಶರ್ಮಾ ಪರ್ಫಾಮೆನ್ಸ್ ಕೂಡ ಧೋನಿಯನ್ನ ನೆನಪಿಸುವಂತಿದೆ.

ನೋಡಿರಿ

