ಮೆಸ್ಸಿ ಕಾರ್ಯಕ್ರಮದ ವ್ಯವಸ್ಥಾಪಕ ಸತಾದ್ರು ದತ್ತಾ ಅರೆಸ್ಟ್ – ಫ್ಯಾನ್ಸ್ ಕ್ಷಮೆ ಕೇಳಿದ ಸಿಎಂ ಮಮತಾ ಬ್ಯಾನರ್ಜಿ

ಮೆಸ್ಸಿ ಕಾರ್ಯಕ್ರಮದ ವ್ಯವಸ್ಥಾಪಕ ಸತಾದ್ರು ದತ್ತಾ ಅರೆಸ್ಟ್ – ಫ್ಯಾನ್ಸ್  ಕ್ಷಮೆ ಕೇಳಿದ ಸಿಎಂ ಮಮತಾ ಬ್ಯಾನರ್ಜಿ

ಗೋಟ್​ ಟೂರ್​ ಆಫ್​ ಇಂಡಿಯಾ” ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ವೇಳೆ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭುಗಿಲೆದ್ದ ಫ್ಯಾನ್ಸ್​ಗಳ ಆಕ್ರೋಶದ ಬೆನ್ನಲ್ಲೇ, ಫುಟ್ಬಾಲ್ ಐಕಾನ್ ಮತ್ತು ಮೆಸ್ಸಿ ಕಾರ್ಯಕ್ರಮ ವ್ಯವಸ್ಥಾಪಕ ಸತಾದ್ರು ದತ್ತಾ ಅವರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಬಹಿರಂಗ ಪಡಿಸಿದ್ದಾರೆ.

ಇಂದು ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿ ಅವರನ್ನು ಹತ್ತಿರದಿಂದ ನೋಡಲೆಂದು ಸಾವಿರಾರು ಜನರು ಹೆಚ್ಚಿನ ಬೆಲೆಯ ಟಿಕೆಟ್​ಗಳನ್ನು ಖರೀದಿಸಿ ಮೈದಾನಕ್ಕೆ ಆಗಮಿಸಿ ಗಂಟೆಗಟ್ಟಲೇ ಕಾದುಕುಳಿತಿದ್ದರು. ನಂತರ ಮೆಸ್ಸಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಸುತ್ತುವರೆದಿದ್ದ ಕಾರಣ ಅವರನ್ನು ಸ್ಪಷ್ಟವಾಗಿ ನೋಡಲು ಮೈದಾನದಲ್ಲಿ ನರೆದಿದ್ದ ಫ್ಯಾನ್ಸ್​ಗಳಿಗೆ ಸಾಧ್ಯವಾಗಲಿಲ್ಲ. 10 ನಿಮಿಷಗಳ ಬಳಿಕ ಮೆಸ್ಸಿ ಮೈದಾನ ತೊರೆದಿದ್ದಾರೆ. ಇದರಿಂದ ಕುಪಿತರಾದ ಫ್ಯಾನ್ಸ್​ ಮೈದಾನದಲ್ಲಿನ ಚೇರ್​ಗಳನ್ನು ನೆಲಕ್ಕೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮೈದಾನದೊಳಗೆ ಅಳವಡಿಸಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿದ್ದಾರೆ.

ಇದನ್ನೂ ಓದಿ: ಜ.6ಕ್ಕೆ ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ! – ಇಕ್ಬಾಲ್‌ ಹುಸೇನ್‌ ಸ್ಪೋಟಕ ಹೇಳಿಕೆ

ಕೆಲವರು ಸಾವಿರಾರು ರೂಪಾಯಿ ಹಣ ಕೊಟ್ಟು ಟಿಕೆಟ್​ ಪಡೆದು ಮೈದಾನಕ್ಕೆ ಆಗಮಿಸಿದರೂ ಅವರನ್ನು ನೋಡಲು ಆಗಿಲ್ಲ. ಅಸಮರ್ಪಕ ನಿರ್ವಹಣೆಗಾಗಿ ಫ್ಯಾನ್ಸ್​ ಅಸಮಾಮಾಧನ ಹೊರಹಾಕಿದರು. ಈ ಘಟನೆ ಬೆನ್ನಲ್ಲೆ ಪಶ್ಚಿಮ ಬಂಗಾಳ ಗೌರ್ನರ್​ ‘ಆನಂದ ಬೋಸ್​’ ಕೂಡಲೇ ಇವೆಂಟ್​ ಮ್ಯಾನೆಜರ್​ ಅವರನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದಾರೆ. ಆದೇಶದಂತೆ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಡಿಜಿಪಿ ರಾಜೀವ್​ ಕುಮಾರ್​ ​ಮಾಧ್ಯಮಕ್ಕೆ ಮಾಹಿತಿ ನೀಡಿದರು. ಅಲ್ಲದೇ ಆಯೋಜಕರು ಟಿಕೆಟ್​ ಹಣವನ್ನು ಹಿಂತಿರುಗಿಸುವಂತೆ ಅವರು ಸೂಚಿಸಿದ್ದಾಗಿ ಸುದ್ಧಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

 ಕ್ರೀಡಾಂಗಣದ ಗದ್ದಲದ ಕುರಿತು ಮಮತಾ ಬ್ಯಾನರ್ಜಿ ತನಿಖಾ ಸಮಿತಿ ರಚಿಸಿದ್ದಾರೆ. ಅಲ್ಲದೇ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಅವ್ಯವಸ್ಥೆಯ ಬಗ್ಗೆ ಕ್ಷಮೆಯನ್ನು ಕೇಳಿದ್ದಾರೆ. “ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯನ್ನು ವೀಕ್ಷಿಸಲು ಮೈದಾನದಲ್ಲಿ ಸೇರಿದ್ದರು. ಈ ದುರದೃಷ್ಟಕರ ಘಟನೆಗಾಗಿ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ  ಎಂದು ಬ್ಯಾನರ್ಜಿ ಹೇಳಿದರು.

Kishor KV