ಮೆಸ್ಸಿ ನೋಡೋಕೆ ದುಡ್ಡು ಕೊಟ್ಟು ಮೋಸ ಹೋದ ಫ್ಯಾನ್ಸ್ -ಸ್ಪೇಡಿಯಂ ಮೇಲೆ ಬಾಟಲ್, ಚೇರ್ ತೂರಾಟ!

ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದಿದ್ದು, ಕೊಲ್ಕಾತ್ತಾದಲ್ಲಿ ಅಭಿಮಾನಿಗಳ ಸಾರಗವೇ ಸೇರಿದೆ. ಭಾರತದ ಫುಟ್ಬಾಲ್ ತವರು ಎಂದೇ ಗುರುತಿಸಿಕೊಂಡಿರುವ ಕೋಲ್ಕತಾಗೆ ಆಗಮಿಸಿರುವ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ನೆರೆದಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಮೆಸ್ಸಿ ಮೈದಾನದಿಂದ ಹೊಗಿದ್ರಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಸ್ಟೇಡಿಯಂನಲ್ಲಿ ದಾಂಧಲೆ ನಡೆಸಿದ್ದಾರೆ.
14 ವರ್ಷಗಳ ಬಳಿಕ ಭಾರತಕ್ಕೆ ಬಂದ ಮೆಸ್ಸಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಮೆಸ್ಸಿ ಕೇವಲ 10 ನಿಮಿಷಗಳೊಳಗೆ ಸಾಲ್ಟ್ ಲೇಕ್ ಸ್ಟೇಡಿಯಂನಿಂದ ನಿರ್ಗಮಿಸಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ ಸ್ಟೇಡಿಯಂ ತೊರೆಯುತ್ತಿದ್ದಂತೆಯೇ ಪ್ಲಾಸ್ಟಿಕ್ ಬಾಟೆಲ್ಗಳನ್ನು ಸ್ಟೇಡಿಯಂಗೆ ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮ್ಯಾಚ್ ಪಿಕ್ಸಿಂಗ್ – ಘಟಾನುಘಟಿ ಆಟಗಾರರೇ ಸಸ್ಪೆಂಡ್
ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸಾಲ್ಟ್ ಲೇಕ್ ಮೈದಾನದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಯಾವಾಗ ಮೆಸ್ಸಿ ಸ್ಟೇಡಿಯಂ ಬಿಟ್ಟು ಹೋದ್ರೋ, ಅಲ್ಲಿವರೆಗೂ ತಾಳ್ಮೆಯಲ್ಲಿದ್ದ ಜನ ರೊಚ್ಚಿಗೆದ್ದರು. ದುಬಾರಿ ಬೆಲೆ ಕೊಟ್ಟು ಟಿಕೆಟ್ ತಗೊಂಡಿದ್ವಿ, ನಮಗೇನು ಸಿಕ್ತು?” ಅಂತ ಕೂಗಾಡಿ, ಕೈಗೆ ಸಿಕ್ಕ ವಾಟರ್ ಬಾಟಲ್, ಪ್ಲಾಸ್ಟಿಕ್ ಚೇರ್ಗಳನ್ನ ಗ್ರೌಂಡ್ಗೆ ಎಸೆದ್ರು. ಅಷ್ಟೇ ಅಲ್ಲ, ಬ್ಯಾರಿಕೇಡ್ ಮುರಿದು ಗ್ರೌಂಡ್ ಒಳಗಡೆ ನುಗ್ಗಿ ಟೆಂಟ್ಗಳನ್ನೆಲ್ಲಾ ಪೀಸ್ ಪೀಸ್ ಮಾಡಿದ್ರು. ಸುಮಾರು ಒಂದು ಗಂಟೆ ಕಾಲ ಪೋಲೀಸರಿಗೂ ಇವರನ್ನ ಕಂಟ್ರೋಲ್ ಮಾಡೋಕೆ ಆಗ್ಲಿಲ್ಲ.
“ಅಭಿಮಾನಿಗಳ ಭಾವನೆ ಜೊತೆ ಯಾಕೆ ಆಟ ಆಡ್ತಿದ್ದೀರಾ? ಜನರಿಂದ ದುಡ್ಡು ಮಾಡೋಕೆ ಇಂಥ ಕೆಲಸ ಮಾಡ್ತೀರಾ?” ಅಂತ ಅವರು ಕೋಪಗೊಂಡಿದ್ದಾರೆ. ಇಷ್ಟೊಂದು ದುಬಾರಿ ಟಿಕೆಟ್ ಇಟ್ಟು ಯಾಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಅಂತ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ತಕ್ಷಣವೇ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಒಟ್ಟಿನಲ್ಲಿ ಮೆಸ್ಸಿ ಬಂದ್ರು ಹೋದ್ರು, ಆದರೆ ಕೋಲ್ಕತ್ತಾ ಫ್ಯಾನ್ಸ್ಗೆ ಮಾತ್ರ ಕಹಿ ನೆನಪು ಉಳೀತು.

ನೋಡಿರಿ

