ಫೇಸ್‌ಬುಕ್ ಸುಂದರಿಗೆ ಮರುಳಾಗಿ ಮಂಡ್ಯದಿಂದ ಮಡಿಕೇರಿಗೆ ಬಂದ! –ಅಯ್ಯಯ್ಯೋ.. ಯುವಕನ ಸ್ಥಿತಿ ಏನಾಯ್ತು ಗೊತ್ತಾ?

ಈಗೀಗ ಫೇಸ್‌ಬುಕ್‌ನಲ್ಲಿ ಪರಿಚಯವಾಗೋದು, ಪ್ರೀತಿ ಹುಟ್ಟೋದು ಕಾಮನ್. ಫೇಸ್‌ಬುಕ್‌ನಲ್ಲಿ ಪ್ರೀತಿ ನಾಟಕವಾಡಿ, ಬಳಿಕ ಮೋಸ ಮಾಡಿರುವ ಘಟನೆ ಬೆಳಕಿಗೆ ಬರುತ್ತಲೇ ಇದೆ. ಇದೀಗ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿ ಭೇಟಿಗಾಗಿ ಮಂಡ್ಯದಿಂದ ಮಡಿಕೇರಿಗೆ ಬಂದಿದ್ದ ಯುವಕ ಅಕ್ಷರಶಃ ನರಕ ನೋಡಿದ್ದಾನೆ.
ಇದನ್ನೂ ಓದಿ: ಡಿಸಿ ಕಚೇರಿಗೆ ಬಾ*ಬ್ ಬೆದರಿಕೆ ಹಾಕಿದ ಬಾಲಕಿ! – ಅಪ್ರಾಪ್ತೆ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!
ಅಷ್ಟಕ್ಕೂ ಆಗಿದ್ದೇನು?
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಕೆಲ ಸಮಯದ ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ತಾನು ಪ್ರೀತಿಸಿದಾಕೆಯನ್ನ ಭೇಟಿಯಾಗಬೇಕು ಎಂದು ಯುವಕ ಶುಕ್ರವಾರ ಸಂಜೆ ಮಡಿಕೇರಿಗೆ ಬಂದಿದ್ದಾನೆ. ಯುವಕ ಮಡಿಕೇಡಿಗೆ ಬರ್ತಿದ್ದಂತೆ ಯುವತಿ ಇನ್ನೊಂದು ಮುಖ ಗೊತ್ತಾಗಿದೆ. ಒಂಟಿಯಾಗಿ ಬಂದಿದ್ದ ಮಹದೇವ್‌ನನ್ನು ಕೂಡಿ ಹಾಕಿ ಯುವತಿ ಆಂಡ್ ಗ್ಯಾಂಗ್ ಚಿತ್ರಹಿಂಸೆ ನೀಡಿದ್ದಾರೆ.
ಮಹದೇವ್‌ನನ್ನ ಮಂಗಳಾದೇವಿ ನಗರದ ಮನೆಯೊಂದರಲ್ಲಿ ಯುವತಿ ಆಂಡ್ ಗ್ಯಾಂಗ್ ಕೂಡಿ ಹಾಕಿದ್ದಾರೆ. ಬಳಿಕ ಆತನ ವಳಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಅಲ್ಲಿಂದಲೂ ಮೂವರಿಂದ ತಪ್ಪಿಸಿಕೊಂಡ ಮಹದೇವ್, ಮಡಿಕೇರಿ ನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಹದೇವ್ ಹೇಳಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಮಹದೇವ್ ಹಲ್ಲೆಗೆ ಬಳಸಲಾಗದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೊಂದು ಹನಿಟ್ರ್ಯಾಪ್ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

