ಡಿಸಿ ಕಚೇರಿಗೆ ಬಾ*ಬ್‌ ಬೆದರಿಕೆ ಹಾಕಿದ ಬಾಲಕಿ! – ಅಪ್ರಾಪ್ತೆ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!

ಡಿಸಿ ಕಚೇರಿಗೆ ಬಾ*ಬ್‌ ಬೆದರಿಕೆ ಹಾಕಿದ ಬಾಲಕಿ! – ಅಪ್ರಾಪ್ತೆ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!

ಕೋಲಾರ ಹಾಗೂ ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂ*ಬ್‌ ಬೆದರಿಕೆಯೊಂದು ಬಂದಿದೆ. ಇದ್ರಿಂದಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಆದ್ರೀಗ ತನಿಖೆ ವೇಳೆ ಶಾಕಿಂಗ್‌ ವಿಚಾರ ಬಯಲಾಗಿದೆ. ಬಾಂಬ್‌ ಬೆದರಿಕೆ ಕಳುಹಿಸಿದ್ದು 13 ವರ್ಷದ ಬಾಲಕಿ ಎಂದು ಗೊತ್ತಾಗಿದೆ.

ಇದನ್ನೂ ಓದಿ: ಮೈಸೂರು ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ದೊಡ್ಡ ಬಿರುಕು  

ಅಷ್ಟಕ್ಕೂ ಆಗಿದ್ದೇನು?

ಶುಕ್ರವಾರ ಕೋಲಾರ ಹಾಗೂ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಒಂದೇ ಸಮಯದಲ್ಲಿ ಬಾಂ*ಬ್ ಬೆದರಿಕೆ ಇಮೇಲ್ ಬಂದಿದೆ. ಬೆಳಿಗ್ಗೆ ಸುಮಾರು 6 ಗಂಟೆಗೆ ಇಮೇಲ್ ಬಂದಿದ್ದು, ಸುಮಾರು ಮೂರು ಗಂಟೆಗಳ ಬಳಿಕ ಈ ವಿಚಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅಗ್ನಿಶಾಮಕ ದಳ ಹಾಗೂ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದೆ. ಆದ್ರೆ ತನಿಖೆ ವೇಳೆ ಯಾವುದೇ ಬಾಂ*ಬ್‌ ಪತ್ತೆ ಆಗಿರಲಿಲ್ಲ. ಆದ್ರೆ ಪೊಲೀಸರ ತನಿಖೆ ವೇಳೆ ಇಮೇಲ್‌ ಕಳುಹಿಸಿದ್ದು ಬಾಲಕಿ ಎಂಬ ವಿಚಾರ ಗೊತ್ತಾಗಿದೆ. ಆಕೆ ಇಮೇಲ್‌ ಕಳುಹಿಸಿದ್ದಕ್ಕೆ ಕಾರಣ ಏನು ಅನ್ನೋದು ಬಯಲಾಗಿದೆ.

ಬಾಲಕಿ ಬೆದರಿಕೆ ಹಾಕಿದ್ದು ಯಾಕೆ?

ಪೊಲೀಸ್ ತನಿಖೆಯ ವೇಳೆ, ಈ ಬಾ*ಬ್ ಬೆದರಿಕೆ ಇಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿಯಿಂದ ಬಂದಿರುವುದು ಗೊತ್ತಾಗಿದೆ. ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಈ ಇಮೇಲ್ ಕಳುಹಿಸಿದ್ದಾಳೆ ಎನ್ನಲಾಗಿದೆ. ಮೇಲ್‌ನಲ್ಲಿ ಬಾಲಕಿ ಮೊದಲಿಗೆ ಆರ್‌ಡಿಎಕ್ಸ್ ಎಂಬ ಪದ ಬಳಸಿದ್ದು, ನಂತರ ತನಗಾಗಿರುವ ಅನ್ಯಾಯವನ್ನು ವಿವರವಾಗಿ ಬರೆದಿದ್ದಾಳೆ. ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೋಲಾರ ಎಸ್‌ಪಿ ನಿಖಿಲ್ ಪ್ರತಿಕ್ರಿಯಿಸಿದ್ದು, ಇದು ನಿಜವಾದ ಬಾಂ*ಬ್ ಬೆದರಿಕೆ ಅಲ್ಲ. ಆದರೂ ಪ್ರೋಟೋಕಾಲ್ ಪ್ರಕಾರ ಸಂಪೂರ್ಣ ಜಿಲ್ಲಾಧಿಕಾರಿ ಕಚೇರಿಯನ್ನು ಪರಿಶೀಲನೆ ಮಾಡಲಾಗಿದೆ. ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

Shwetha M