ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನ ಇಟ್ಟುಕೊಳ್ಳಿ – ಹಣಕ್ಕೆ ಕೊರತೆಯೇ ಬರಲ್ಲ

ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನ ಇಟ್ಟುಕೊಳ್ಳಿ – ಹಣಕ್ಕೆ ಕೊರತೆಯೇ ಬರಲ್ಲ

ನಮ್ಮ ಜೊತೆಯಲ್ಲಿರುವ  ವಸ್ತು ಅಂದ್ರೆ  ಪರ್ಸ್ ..  ಪರ್ಸ್ ನಲ್ಲಿ ಇಟ್ಟುಕೊಳ್ಳುವ ಕೆಲ ವಸ್ತುಗಳಿಂದ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ವಾಸ್ತುವಿನಲ್ಲಿ ಅದೃಷ್ಟವನ್ನು ಆಕರ್ಷಿಸುವ ವಸ್ತುಗಳನ್ನು ಪರ್ಸ್ ಅಲ್ಲಿ ಇಟ್ಟುಕೊಳ್ಳುವಂತೆಯೂ ವಾಸ್ತುವಿನಲ್ಲಿಯೂ ವಿವರಿಸಲಾಗಿದೆ. ಹಾಗಾದರೆ ಆ ವಸ್ತುಗಳು ಯಾವುವು…? ಅವುಗಳನ್ನು ಇಟ್ಟುಕೊಳ್ಳುವುದರಿಂದ ಏನೆಲ್ಲಾ ಉಪಯೋಗ ಆಗಲಿದೆ..?

ಶ್ರೀಯಂತ್ರ

ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. ಶ್ರೀಯಂತ್ರವನ್ನು ಪರ್ಸ್ ಅಲ್ಲಿ ಇಟ್ಟುಕೊಂಡರೆ ದುಷ್ಟ ಕಣ್ಣಿನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಜೊತೆಗೆ ಪರ್ಸ್ ಖಾಲಿ ಆಗುವುದನ್ನು ತಡೆಯುತ್ತದೆ

ಮಂತ್ರಾಕ್ಷತೆ

ನಿಮ್ಮ ಪರ್ಸ್‌ನಲ್ಲಿ ಹಣದ ಪ್ರಮಾಣ ಜಾಸ್ತಿ ಆಗಬೇಕು, ಆರ್ಥಿಕ ವ್ಯಯ ಆಗಬಾರದು ಎಂಬ ಇಚ್ಛೆ ಇದ್ದರೆ ದೇವರ ಮಂತ್ರಾಕ್ಷತೆಯನ್ನು ಇಟ್ಟುಕೊಳ್ಳಿ. ಇದರಿಂದ ನಿಮಗೆ ವಿಶೇಷ ಪ್ರಯೋಜನಗಳು ಸಿಗಲಿದ್ದು, ಲಕ್ಷ್ಮಿ ದೇವಿಯ ಆಶೀರ್ವಾದ ದೊರೆತು ಮನೆಯಲ್ಲಿ ಸಂಪತ್ತಿನ ಬೆಳವಣಿಗೆಯಾಗುತ್ತದೆ. ಇನ್ನು ಇದರೊಂದಿಗೆ ಪರ್ಸ್‌ನಲ್ಲಿ ಹರಳೆಣ್ಣೆಯ ಸಣ್ಣ ಪ್ಯಾಕೆಟ್ ಅನ್ನು ಇಟ್ಟುಕೊಳ್ಳುವುದರಿಂದ ಮತ್ತಷ್ಟು ಆರ್ಥಿಕ ಪ್ರಯೋಜನಗಳು ನಿಮ್ಮ ಪಾಲಿಗೆ ಬರಲಿದ್ದು, ವಾಸ್ತು ಶಾಸ್ತ್ರದ ಪ್ರಕಾರ, ಹರಳೆಣ್ಣೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದರಿಂದಾಗಿ ನಿಮ್ಮ ಹಣವನ್ನು ವ್ಯರ್ಥ ಆಗುವುದನ್ನು ಇದು ತಡೆಯುತ್ತದೆ.

ತಪ್ಪಿಯೂ ಹರಿದ ನೋಟು ಇಡಬೇಡಿ

ಅಶುಭಕರವಾದಂತಹ ವಸ್ತುಗಳು ಪೈಕಿ ಹರಿದ ನೋಟುಗಳು ಒಂದಾಗಿದ್ದು, ನಿಮ್ಮ ಪರ್ಸ್ ಅಲ್ಲಿ ಇಡುವುದರಿಂದ ಅಥವಾ ಬೇರೆ ಯಾರಾದರೂ ಕೊಟ್ಟಾಗ ಅದನ್ನು ನೀವೇ ಇಟ್ಟುಕೊಳ್ಳುವುದರಿಂದ ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಲಿದ್ದು, ನಿಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹರಿದ ನೋಟುಗಳಿಗೆ ನಿಮ್ಮ ಯಶಸ್ಸನ್ನು ತಡೆಯುವ ಶಕ್ತಿ ಇದೆ. ಅಲ್ಲದೇ ಪರ್ಸ್ ನಲ್ಲಿ ಹರಿದು ಹೋದಂತಹ ನೋಟುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷೀ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಕೂಡ ಬರಬಹುದು.

ಲಕ್ಷ್ಮೀ ದೇವಿಯ ಫೋಟೋ

ಯಾರಾದರೂ ಹಣದ ಸಮಸ್ಯೆ ಎದುರಿಸುತ್ತಿದ್ದರೆ ಅಂತವರು ತಮ್ಮ ಪರ್ಸ್‌ನಲ್ಲಿ ಲಕ್ಷ್ಮಿ ದೇವಿಯ ಫೋಟೋ ಫೋಟೋವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ.

Kishor KV