ಯುವಕನ ಪಾಲಿಗೆ ಯಮನಾದ ಫಾರಿನ್‌ ಗಿಳಿ! – ಪ್ರಾಣ ಉಳಿಸಲು ಹೋದಾತ ದುರಂತ ಅಂತ್ಯ!

ಯುವಕನ ಪಾಲಿಗೆ ಯಮನಾದ ಫಾರಿನ್‌ ಗಿಳಿ! – ಪ್ರಾಣ ಉಳಿಸಲು ಹೋದಾತ ದುರಂತ ಅಂತ್ಯ!

ಗಿಳಿಯನ್ನ ರಕ್ಷಿಸಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಅರುಣ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ರೀಲ್ಸ್‌ಗಾಗಿ ಮೊಸಳೆ ಬಾಲ ಎಳೆದ ಯುವಕರು! – ಆಮೇಲೆ ಏನಾಯ್ತು ಗೊತ್ತಾ?

ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರಿನ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ಅರುಣ್‌ ಕುಮಾರ್‌ ನೆಲೆಸಿದ್ದಾರೆ. ಅರುಣ್‌ ವಿದೇಶದಿಂದ 2 ಲಕ್ಷ ರೂಪಾಯಿ ಮೌಲ್ಯದ ಗಿಳಿಯೊಂದನ್ನ ತಂದಿದ್ದರು. ತಮ್ಮ ಮಗುವಂತೆ ಇದನ್ನ ಸಾಕುತ್ತಿದ್ದರು. ಈ ಗಿಳಿ ಮನೆಯಿಂದ ಹೊರಗೆ ಹಾರಿದೆ. ಬಳಿಕ ಹೈಟೆನ್ಷನ್ ವೈರ್​ ಕಂಬದ ಮೇಲೆ ಕುಳಿತಿದೆ. ತಮ್ಮ ಮುದ್ದಿನ ಗಿಳಿಯ ಪ್ರಾಣ ಉಳಿಸಲು ಅರುಣ್‌ ಹೋಗಿದ್ದಾರೆ. ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್​​ ಮೂಲಕ ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್‌ ವೈರ್‌ಗೆ ಪೈಪ್‌ ತಗುಲಿ ಶಾಕ್‌ ಹೊಡೆದಿದೆ. ಇದ್ರಿಂದಾಗಿ ಅರುಣ್ ಕಾಪೌಂಡ್​​ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಗಿರಿನಗರ ಪೊಲೀಸ ಠಾಣೆಯಲ್ಲಿ ಈ ದುರಂತ ನಡೆದಿದ್ದು, ಸ್ಥಳಕ್ಕೆ ಬೆಸ್ಕಾಂ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 66 ಸಾವಿರ ಕೆವಿ ಸಾಮರ್ಥ್ಯದ ವೈರ್​ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಗ್ರ ತನಿಖೆ ನಡೆಯುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Shwetha M