DIAMOND ಸಂಜು.. DUCK ಗಿಲ್ – T20I ಗೆ ಅನ್ ಫಿಟ್ ಶುಭ್ ಮನ್
ಗಂಭೀರ್ ಆಟ ತಂಡವನ್ನೇ ಮುಗಿಸುತ್ತಾ?

ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ-20ಐನಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿದೆ. ಈ ಮೂಲಕ 1-1ರಿಂದ ಸರಣಿ ಟೈ ಆಗಿದೆ. ಇನ್ನೂ ಮೂರು ಮ್ಯಾಚ್ಗಳು ಬಾಕಿ ಇದ್ದು ಇನ್ನೆರಡು ಪಂದ್ಯ ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ. ಆದ್ರೆ ಇಲ್ಲಿರುವಂಥ ದೊಡ್ಡ ಪ್ರಶ್ನೆ ಅಂದ್ರೆ ಶುಭ್ಮನ್ಗಿಲ್ರನ್ನ ಇನ್ನೂ ಯಾಕೆ ತಂಡದಲ್ಲಿ ಇಟ್ಕೊಂಡಿದ್ದೀರಿ ಅನ್ನೋದು. ಸಂಜು ಸ್ಯಾಮ್ಸನ್ಗೆ ಯಾಕೆ ಇಷ್ಟು ದೊಡ್ಡ ಮೋಸ ಅನ್ನೋದು. ಗಿಲ್ ಮೇಲಿನ ಬಿಸಿಸಿಐ ಕುರುಡು ಪ್ರೇಮಕ್ಕಾಗಿ ಸಂಜುರನ್ನ ಬಲಿಪಶು ಮಾಡಿದ್ದಾರೆ.
ಇದನ್ನೂ ಓದಿ : ಆರ್ಸಿಬಿ ಫ್ಯಾನ್ಸ್ಗೆ ಖುಷಿ ಸುದ್ದಿ! – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಮ್ಯಾಚ್ ನಡೆಸಲು ಗ್ರೀನ್ ಸಿಗ್ನಲ್!
ಭಾರತ ಟಿ-20ಐ ತಂಡದಲ್ಲಿ ಸಾಕಷ್ಟು ವೇರಿಯೇಷನ್ಸ್ ಆಗ್ತಿದೆ. ಅದ್ರಲ್ಲಿ ಮೇಜರ್ ಡವಲಪ್ಮೆಂಟ್ ಅಂದ್ರೆ ಸಂಜು ಸ್ಯಾಮ್ಸನ್ ಬೆಂಚ್ ಕಾಯಿಸ್ತಿರೋದು. ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಚಾನ್ಸ್ ಸಿಗ್ತಿದೆ. ಬಟ್ ಇಲ್ಲಿ ಒಂದನ್ನ ಕ್ಲಿಯರ್ ಮಾಡ್ಬೇಕು. ಸಂಜುಗೆ ಚಾನ್ಸ್ ತಪ್ಪಿದ್ದು ಜಿತೇಶ್ ಶರ್ಮಾರಿಂದ ಅಲ್ಲ. ಶುಭ್ಮನ್ ಗಿಲ್ ರೀ ಎಂಟ್ರಿಯಿಂದ. ಭಾರತದ ಪರ ಟಿ-20ಐನಲ್ಲಿ ಬೆಸ್ಟ್ ಓಪನರ್ ಆಗಿದ್ದ ಸಂಜು ಈಗ ಬೆಂಚ್ ಬಿಸಿ ಮಾಡ್ತಿರೋದಕ್ಕೆ ಕಾರಣವೇ ಶುಭ್ಮನ್ ಗಿಲ್. ಶತಾಯ ಗತಾಯ ಗಿಲ್ರನ್ನ ಆಡಿಸ್ಲೇಬೇಕು ಅಂತಾ ಹಠಕ್ಕೆ ಬಿದ್ದಿರೋ ಬಿಸಿಸಿಐ ಪ್ರತಿಭಾವಂತ ಪ್ಲೇಯರ್ಗಳನ್ನ ಮೂಲೆಗುಂಪು ಮಾಡಿದೆ. ಅದ್ರಲ್ಲೂ ಪ್ರಮುಖವಾಗಿ ಸ್ಟೈಲಿಶ್, ಕ್ಲಾಸಿಂಗ್ ಌಂಡ್ ಕೂಲ್ ಬ್ಯಾಟರ್ ಸಂಜು ಸ್ಯಾಮ್ಸನ್ ಕ್ರಿಕೆಟ್ ಕರಿಯರ್ರೇ ಈಗ ಪ್ರಶ್ನಾರ್ಥವಾಗಿದೆ.
ಗಂಟಲಿನಲ್ಲಿ ಸಿಲುಕಿದ ಮೀನಿನ ಮುಳ್ಳಿನಂತಾದ ಗಿಲ್!
2024ರ ಟಿ-20 ವಿಶ್ವಕಪ್ ಬಳಿಕ ಸಂಜು ಸ್ಯಾಮ್ಸನ್ ಭಾರತದ ಪರ ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸ್ತಿದ್ರು. ಒಂದೇ ವರ್ಷದಲ್ಲಿ 3 ಶತಕಗಳನ್ನೂ ಬಾರಿಸಿದ್ರು. ಅಭಿ ಮತ್ತು ಸಂಜು ಪಾರ್ಟ್ನರ್ಶಿಪ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿತ್ತು. ಆದ್ರೆ ಗಿಲ್ ತಂಡಕ್ಕೆ ಬಂದ್ಮೇಲೆ ಸಂಜು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದ್ದಾರೆ. 2024ರ ವಿಶ್ವಕಪ್ನಲ್ಲೂ ರೋಹಿತ್ ಶರ್ಮಾ ಗಿಲ್ರನ್ನ ದೂರ ಇಟ್ಟೇ ಟ್ರೋಫಿ ಗೆದ್ದಿದ್ರು. ಆ ನಂತ್ರ ಮತ್ತೆ ಒಂದು ವರ್ಷ ಟಿ-20ಐ ಬಾಗಿಲು ಕ್ಲೋಸ್ ಆಗಿತ್ತು. ಆದ್ರೆ ಗಂಭೀರ್ ಮತ್ತು ಅಗರ್ಕರ್ಗೆ ಅದೇನ್ ಪ್ರೀತಿ ಇತ್ತೋ ಏನೋ ಏಷ್ಯಾಕಪ್ ಟೂರ್ನಿ ಮೂಲಕ ಗಿಲ್ಗೆ ಮತ್ತೆ ರೆಡ್ ಕಾರ್ಪೆಟ್ ಹಾಕಿದ್ರು. ಅದೂ ಕೂಡ ಈ ಸಲ ವೈಸ್ ಕ್ಯಾಪ್ಟನ್ಸಿ ಪಟ್ಟ ನೀಡಿಯೇ ಪ್ಲೇಯಿಂಗ್ 11 ಸ್ಥಾನ ಭದ್ರ ಮಾಡಿ ಕರ್ಕೊಂಡು ಬಂದ್ರು. ಆದ್ರೆ ಗಿಲ್ ಕಮ್ ಬ್ಯಾಕ್ ಮಾಡಿದ್ದು ತಂಡಕ್ಕೆ ಗಂಟಲಲ್ಲಿ ಸಿಲುಕಿದ ಮೀನಿನ ಮುಳ್ಳಿನಂತಾಗಿದ್ದಾರೆ. ಒಳಗೂ ಹೋಗ್ತಿಲ್ಲ. ಹೊರಗೂ ಬರ್ತಿಲ್ಲ. ಹೀಗಿದ್ರೂ ತಂಡದಿಂದ ಗಿಲ್ ಹೊರ ಬೀಳ್ತಿಲ್ಲ. ಅಷ್ಟಕ್ಕೂ ಇಲ್ಲಿ ಗಿಲ್ ಆಡ್ತಿಲ್ಲ ಅನ್ನೋ ಸಿಟ್ಟಿಗಿಂತ ಸಂಜುಗೆ ಚಾನ್ಸ್ ಸಿಗ್ತಿಲ್ವನ್ನ ಅನ್ನೋ ನೋವೇ ಜಾಸ್ತಿ ಇದೆ. ಯಾಕಂದ್ರೆ ಸಂಜು ಗಿಲ್ಗಿಂತ ನೂರು ಪಟ್ಟು ಬೆಟರ್ ಇದ್ದಾರೆ. ಸೂರ್ಯ ಕೂಡ ದಿನೇ ದಿನೆ ತಂಡಕ್ಕೆ ಭಾರತ ಆಗ್ತಿದ್ದಾರೆ. ಮ್ಯಾಚ್ ಟೈಮಲ್ಲಿ ಕನ್ನಡ ಕಾಮೆಂಟೇಟರ್ಸ್ ಕೂಡ ಇದನ್ನೇ ಹೇಳ್ತಿದ್ರು. ಸ್ಕೂಲ್ಗಳಲ್ಲಿ ನಡೆಯೋ ಕಾಂಪಿಟೇಷನ್ಗಳಲ್ಲೇ ಇಷ್ಟು ಸಲ ಫೇಲ್ಯೂರ್ ಆದ್ರೆ ಚಾನ್ಸ್ ಕೊಡಲ್ಲ. ಬಟ್ ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ ಹೇಗೆ ಚಾನ್ಸ್ ಕೊಡ್ತಿದ್ದಾರೆ ಅಂತಾ. ಹಾಗೇ ಜಗತ್ತಿನ ಯಾವುದೇ ಟೀಮ್ನಲ್ಲೂ ಕೂಡ ಕ್ಯಾಪ್ಟನ್ ಆಗಿದ್ರೂ ಇಷ್ಟೊಂದು ಚಾನ್ಸ್ ಕೊಡ್ತಿರ್ಲಿಲ್ವೇನೋ ಅಂತಿದ್ರು. ಸೋ ಇಲ್ಲಿ ಮಾಜಿ ಕ್ರಿಕೆಟಿಗರಿಗೂ ಕೂಡ ಗಿಲ್ ಮತ್ತು ಸೂರ್ಯನ್ನ ಆಡಿಸ್ತಿರೋದೇ ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ ಗಿಲ್ಗಿಂತ ಸಂಜು ದಿ ಬೆಸ್ಟ್ ಆಪ್ಶನ್ ಆಗಿದ್ದಾರೆ.
ಗಿಲ್ ಗಿಂತ ಸಂಜು ರೆಕಾರ್ಡ್ಸ್ ಸೂಪರ್!
ಏಷ್ಯಾಕಪ್ ಮೂಲಕ ಭಾರತ ತಂಡದ ಪರ ಆರಂಭಿಕನಾಗಿ ಆಡ್ತಿರೋ ಶುಭ್ಮನ್ ಗಿಲ್ ನಿನ್ನೆವರೆಗೂ 14 ಇನ್ನಿಂಗ್ಸ್ ಆಡಿದ್ದಾರೆ. ಬಟ್ 14 ಇನ್ನಿಂಗ್ಸ್ಗಳಲ್ಲೂ 143.71 ಸ್ಟ್ರೈಕ್ ರೇಟ್ನಲ್ಲಿ 263 ರನ್ಗಳನ್ನು ಗಳಿಸಿದ್ದಾರೆ. ಇದನ್ನು ಕಳೆದ ವರ್ಷದ ಸಂಜು ಸ್ಯಾಮ್ಸನ್ ಅವರ ಅಂಕಿಅಂಶಗಳೊಂದಿಗೆ ಕಂಪೇರ್ ಮಾಡಿದ್ರೆ ಸಂಜು 13 ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 436 ರನ್ಗಳು ಮತ್ತು 180.16 ಸ್ಟ್ರೈಕ್ ರೇಟ್ ನಲ್ಲಿ ರನ್ಸ್ ಕಲೆ ಹಾಕಿದ್ರು. 3 ಶತಕಗಳೂ ಇದ್ವು. ಬಟ್ ಗಿಲ್ ಒಂದೇ ಒಂದು ಅರ್ಧಶತಕ ಬಾರಿಸೋಕೂ ಸಾಧ್ಯವಾಗಿಲ್ಲ. ಹೀಗಾಗೇ ಗಿಲ್ ಈಸಿಯಾಗಿ ವಿಕೆಟ್ ಒಪ್ಪಿಸಿ ಹೋಗುವಾಗೆಲ್ಲಾ ಡಗೌಟ್ನಲ್ಲಿ ಅವಕಾಶವಂಚಿತನಾಗಿ ಕುಳಿತಿರೋ ಸಂಜುರನ್ನ ನೋಡಿ ಎಲ್ಲರ ಹಾರ್ಟ್ ಬ್ರೇಕ್ ಆಗ್ತಿದೆ. ಹೀಗಾಗೇ ಗಿಲ್ರನ್ನ ಟಿ-20ಐನಿಂದ ಹೊರಗಿಡೋದೇ ಒಳ್ಳೇದು. ಅದಕ್ಕೆ ಒಂದಷ್ಟು ಕಾರಣಗಳೂ ಇವೆ.
ಗಿಲ್ ಗೆ ಗೇಟ್ ಪಾಸ್ ಕೊಡಿ!
ಟಿ-20ಐ ಕ್ರಿಕೆಟ್ ನಲ್ಲಿ ಫಾರ್ಮ್ ಕಳ್ಕೊಂಡಿರೋ ಗಿಲ್
ಅಭಿಷೇಕ್ ಶರ್ಮಾ ಜೊತೆ ಒಳ್ಳೆ ಓಪನರ್ ಆಗ್ತಿಲ್ಲ
ಮೂರೂ ಮಾದರಿಯಲ್ಲಿ ಆಡಿಸೋದ್ರಿಂದ ಜಾಸ್ತಿ ಪ್ರೆಶರ್
ಟೆಸ್ಟ್, ಏಕದಿನ ಕ್ಯಾಪ್ಟನ್, ಟಿ-20ಐ ವೈಸ್ ಕ್ಯಾಪ್ಟನ್
2026 ಟಿ-20 ವಿಶ್ವಕಪ್ ಹಿನ್ನೆಲೆ ಹೊರಗಿಟ್ರೆ ಒಳ್ಳೇದು
2026ರ ಟಿ-20 ವಿಶ್ವಕಪ್ ಹತ್ತಿರವಾಗ್ತಿದ್ರೂ ಸಂಜು ಪ್ಲೇಯಿಂಗ್ 11ನಲ್ಲಿ ಆಡೋದು ಡೌಟ್ ಎನ್ನುವಂತಾಗ್ತಿದೆ. 2015 ರಲ್ಲೇ ಅಂದ್ರೆ 21 ನೇ ವಯಸ್ಸಿನಲ್ಲಿ ಟಿ-20ಐಗೆ ಪದಾರ್ಪಣೆ ಮಾಡಿದ್ರೂ ಮತ್ತೆ T20I ತಂಡದಲ್ಲಿ ಮತ್ತೊಂದು ಅವಕಾಶಕ್ಕಾಗಿ ವರ್ಷಗಳೇ ಕಾಯಬೇಕಾಯಿತು. ಐಪಿಎಲ್ನಲ್ಲಿ ರನ್ ಗಳಿಸಿದ್ರೂ ಚಾನ್ಸ್ ಸಿಕ್ತಿರಲಿಲ್ಲ. ಬಟ್ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದ ಟೈಮಲ್ಲಿ ಸ್ಯಾಮ್ಸನ್ ಸ್ಥಿರವಾಗಿ ರನ್ ಗಳಿಸಿದರು. 2024 ರ ಟಿ 20 ವಿಶ್ವಕಪ್ಗೂ ಮುನ್ನ ಸಾಕಷ್ಟು ಟಿ20 ಪಂದ್ಯಗಳನ್ನು ಆಡಿದ್ದರೂ ವಿಶ್ವಕಪ್ ಆಡೋಕೆ ಆಗಿರಲಿಲ್ಲ. ಆದ್ರೆ ಯಾವಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20ಐನಿಂದ ನಿವೃತ್ತರಾದ್ರೋ ಆ ಬಳಿಕ ಆರಂಭಿಕ ಆಟಗಾರನಾಗಿ ಕಂಟಿನ್ಯೂಯಸ್ ಸೆಲೆಕ್ಟ್ ಆಗ್ತಾ ಬಂದ್ರು. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿ ಮತ್ತು ಕೋಚ್ ಗಂಭೀರ್ ನೇತೃತ್ವದಲ್ಲಿ ಭಾರತದ ಅಗ್ರೆಸ್ಸಿವ್ ಬ್ಯಾಟರ್ ಆಗಿ ಕ್ಲಿಕ್ ಆದ್ರು. ಅಭಿಷೇಕ್ ಜೊತೆ ಡೇಂಜರಸ್ ಬ್ಯಾಟರ್ ಆದ್ರು. ಆದ್ರೆ ಯಾವಾಗ ಗಿಲ್ ಬಂದು ಟಿ-20ಐ ಓಪನರ್ ಆದ್ರೋ ಭಾರತ ಮತ್ತೆ ಒಬ್ಬ ಪ್ರತಿಭಾವಂತ ಪ್ಲೇಯರ್ನ ಮಿಸ್ ಮಾಡಿಕೊಳ್ಳುವಂತಾಯ್ತು. ಹಾಗಂತ ಗಿಲ್ ಕಂ ಬ್ಯಾಕ್ ನಿಂದ ತಂಡಕ್ಕೇನೂ ಲಾಭ ಆಗಿಲ್ಲ. ಗಿಲ್ಗಿಂತ ಸಂಜುನೇ ಡಿಸರ್ವ್ ಇದ್ದಾರೆ.

ನೋಡಿರಿ

