7 ವೈಡ್ ಹಾಕಿದ ಅರ್ಶ್ದೀಪ್ ಮೇಲೆ ಕೋಚ್ ಸಿಟ್ಟು – ಗಂಭೀರ್ ಬೈಗುಳಕ್ಕೆ ಬೌಲರ್ ಥಂಡಾ

ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತು ಶರಣಾಗಿದೆ. ಇಲ್ಲಿ ಪ್ರಮುಖ ಬ್ಯಾಟರ್ಗಳು ಕೈಕೊಟ್ಟಿದ್ದು ಒಂದು ಕಾರಣವಾದರೆ, ನಮ್ಮ ಟೀಮ್ ಇಂಡಿಯಾ ಬೌಲರ್ಗಳು ಕೂಡಾ ಸೋಲಿಗೆ ಕಾರಣವಾಗಿದ್ದಾರೆ. ಅದರಲ್ಲೂ ಅರ್ಶ್ದೀಪ್ ಸಿಂಗ್ ಒಂದೇ ಓವರ್ನಲ್ಲಿ 7 ವೈಡ್ಗಳನ್ನು ಎಸೆದು ಕೋಚ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು – 51 ರನ್ಗಳಿಂದ ಗೆದ್ದ ಹರಿಣ ಪಡೆ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಕೋಚ್ ಗೌತಮ್ ಗಂಭೀರ್ ಸಿಟ್ಟು ಮಾಡಿಕೊಂಡ ಘಟನೆ ನಡೆದಿದೆ. ಒಂದೆಡೆ ವೇಗಿ ಅರ್ಶ್ದೀಪ್ ಸಿಂಗ್ ಸಂಪೂರ್ಣವಾಗಿ ತಮ್ಮ ಲಯ ಕಳೆದುಕೊಂಡಿದ್ದರೆ, ಮತ್ತೊಂದೆಡೆ ಆರ್ಶ್ದೀಪ್ ಸಿಂಗ್ ಬೌಲಿಂಗ್ ರೀತಿಗೆ ಗೌತಮ್ ಗಂಭೀರ್ ತಾಳ್ಮೆ ಕಳೆದುಕೊಂಡಿದ್ದು. ಇದಕ್ಕೆ ಕಾರಣ ಒಂದೇ ಓವರ್ನಲ್ಲಿ 13 ಎಸೆತ ಹಾಕಿದ್ದು. ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ನ 11 ನೇ ಓವರ್ನಲ್ಲಿ, ಎಡಗೈ ವೇಗದ ಬೌಲರ್ ಒಂದು, ಎರಡು ಅಥವಾ ಮೂರು ಅಲ್ಲ, ಒಂದೇ ಓವರ್ನಲ್ಲಿ ಬರೋಬ್ಬರಿ ಏಳು ವೈಡ್ಗಳನ್ನು ಎಸೆದರು. ಇದು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಿಟ್ಟಿಗೆ ಗುರಿಯಾಯಿತು. 11ನೇ ಓವರ್ ಆರ್ಶ್ದೀಪ್ ಸಿಂಗ್ ಸಂಪೂರ್ಣ ತಾಳಮೇಳ ತಪ್ಪಿದಂತೆ ಕಂಡು ಬಂದಿತ್ತು. ಆ ಓವರ್ನ ಮೊದಲ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ದೀರ್ಘ ಸಿಕ್ಸರ್ ಹೊಡೆದರು. ನಂತರ ಅವರು ಸತತ ಎರಡು ವೈಡ್ಗಳನ್ನು ಎಸೆದರು. ಮುಂದಿನ ಎಸೆತ ಯಾವುದೇ ರನ್ ಗಳಿಸಲಿಲ್ಲ, ಮತ್ತು ನಂತರ ಅವರು ಇನ್ನೂ ನಾಲ್ಕು ವೈಡ್ಗಳನ್ನು ಎಸೆದರು. ಅಷ್ಟೇ ಅಲ್ಲ, ಮೂರು ಕ್ಲೀನ್ ಎಸೆತಗಳ ನಂತರ ಅರ್ಶ್ದೀಪ್ ಮತ್ತೊಂದು ವೈಡ್ ಬೌಲಿಂಗ್ ಮಾಡಿದರು, ಇದು ಆ ಓವರ್ನ ಏಳನೇ ವೈಡ್ ಎಸೆತವಾಗಿತ್ತು. ಈ ಸಂದರ್ಭ ಡಗೌಟ್ನಲ್ಲಿ ಕುಳಿತಿದ್ದ ಕೋಚ್ ಗೌತಮ್ ಗಂಭೀರ್ ಅವರು ಅರ್ಶ್ದೀಪ್ ಪ್ರದರ್ಶನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಕೋಚ್ ಸಿಟ್ಟು ಮಾಡಿಕೊಳ್ಳುತ್ತಿದ್ದಂತೆ ಆರ್ಶ್ದೀಪ್ ಸಿಂಗ್ ಸಂಪೂರ್ಣ ನಿರಾಶರಾದರು. ಫಾರ್ಮ್ ಕಳೆದುಕೊಂಡ ಅವರಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.

ನೋಡಿರಿ

