ವಿಲನ್‌ ಆಟಕ್ಕೆ ದೊಡ್ಮನೆ ಮಂದಿ ವಿಲವಿಲ! – ಅಶ್ವಿನಿಗೆ ಟಾಸ್ಕ್‌.. ಮಾಳು ಕೂದಲಿಗೆ ಕತ್ತರಿ!

ವಿಲನ್‌ ಆಟಕ್ಕೆ ದೊಡ್ಮನೆ ಮಂದಿ ವಿಲವಿಲ! – ಅಶ್ವಿನಿಗೆ ಟಾಸ್ಕ್‌.. ಮಾಳು ಕೂದಲಿಗೆ ಕತ್ತರಿ!

ಬಿಗ್‌ಬಾಸ್‌ ಮನೆಗೆ ವಿಲನ್‌ ಎಂಟ್ರಿ ಕೊಟ್ಟಾದ್ಮೇಲೆ ಎಲ್ಲವೂ ಬದಲಾಗಿದೆ. ಯಾರೂ ಊಹಿಸಿರದ ಟ್ವಿಸ್ಟ್‌ ಸಿಗುತ್ತಿದೆ. ವಿಲನ್‌ಗೆ ಆಟ ಆದ್ರೆ, ಇತ್ತ ಸ್ಪರ್ಧಿಗಳಿಗೆ ಪ್ರಾಣ ಸಂಕಟ. ಗಿಲ್ಲಿ-ಕಾವ್ಯ ಫ್ರೆಂಡ್‌ಶಿಪ್‌ ಕಟ್‌ ಮಾಡಿದ್ರು. ಕಾವ್ಯ ಹೇರ್‌ಕಲರ್‌ ಚೇಂಜ್‌ ಆಯ್ತು. ಇದೀಗ ಮಾಳು ಕೂದಲಿಗೆ ಕತ್ತರಿ ಬಿದ್ದಿದೆ. ಮಾಳು ಹೊಸ ಅವತಾರ ಕಂಡು ಎಲ್ಲರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಫ್ಯಾನ್ಸ್‌ಗೆ ಖುಷಿ ಸುದ್ದಿ! – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಮ್ಯಾಚ್‌ ನಡೆಸಲು ಗ್ರೀನ್‌ ಸಿಗ್ನಲ್!

ಬಿಗ್‌ಬಾಸ್‌ ಮನೆಯಲ್ಲೀಗ ವಿಲನ್‌ನದ್ದೇ ಕಾರುಬಾರು. ಕ್ಷಣಕ್ಕೊಂದು ಟ್ವಿಸ್ಟ್‌ ನೀಡಿ, ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಾರೆ. ಈಗಾಗಲೇ ರಜತ್ ಮತ್ತು ಅಶ್ವಿನಿ ಗೌಡ ಅವರಿಗೆ ವಿಲನ್ ಒಂದು ಚಾಲೆಂಜ್ ನೀಡಿದರು. ಆ ಚಾಲೆಂಜ್‌ ಕಂಪ್ಲೀಟ್‌ ಮಾಡಿದರೆ ಪಾಂಯಿಟ್ಸ್‌ ಸಿಗುತ್ತದೆ. ಮೊನ್ನೆಯ ಟಾಸ್ಕ್‌ನಲ್ಲಿ ಕಾವ್ಯ ಕಣ್ಣಿರು ಹಾಕುವಂತೆ ಮಾಡಬೇಕು ಎಂದು ಗಿಲ್ಲಿಗೆ ಟಾಸ್ಕ್‌ ನೀಡಿದ್ರು. ಅದಾದ ಬಳಿಕ ಗಿಲ್ಲಿ ಕಿಚ್ಚನ ಚಪ್ಪಾಳೆ ಫೋಟೋವನ್ನ ತೆಗೆದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು ಎಂದು ಟಾಸ್ಕ್‌ ನೀಡಿದ್ರು. ಇದ್ರಲ್ಲಿ ಗಿಲ್ಲಿ ಪಾಸ್‌ ಆಗಿದ್ದಾರೆ. ನಿನ್ನೆ ಕಾವ್ಯ ಅವರಿಗೆ ಕೂದಲಿಗೆ ಬಣ್ಣ ಹಾಕಿಸಿಕೊಂಡರೆ, ರಜತ್‌ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಮಾಳು ಸರದಿ. ಮಾಳು ಕೂದಲಿಗೆ ಕತ್ತರಿ ಬಿದ್ದಿದೆ.

ಇದೀಗ ವಿಲನ್‌ ಹೊಸ ಟಾಸ್ಕ್‌ ಕೊಟ್ಟಿದ್ದಾರೆ. ಚಿತ್ರದಲ್ಲಿ ತೋರಿಸುವಂತೆ ಹೇರ್‌ ಸ್ಟೈಲ್‌ ಮಾಡಿಸಿಕೊಳ್ಳಬೇಕಿದೆ.ಈ ವೇಳೆ ಗಿಲ್ಲಿ ಸಖತ್‌ ಉರಿಸಿದ್ದಾರೆ. ಮಾಳು ಅವರನ್ನ ನೋಡಿ ಸಖತ್‌ ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ. ಮಾಳು ಅವರು ಫೋಟೋ ಏನಾದರೂ ಮುಂಚೆ ನೋಡಿದ್ದರೆ ಸತ್ಯ ಒಪ್ತಾ ಇರಲಿಲ್ಲ. ತುಂಬಾ ಕೂದಲು ಉದ್ದ ಇರೋರು ಇದ್ರು ಅಂತ ಧ್ರುವಂತ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

Shwetha M