ಮನೆಯಲ್ಲಿ ಗೂಬೆಯ ಪ್ರತಿಮೆ ಫೋಟೋ ಇಟ್ಟುಕೊಳ್ಳಬಹುದಾ? – ಇಟ್ಟರೇ ಹೇಗೆ ಇಡಬೇಕು ಗೊತ್ತಾ?

ಮನೆ ಎಷ್ಟು ಚೆನ್ನಾಗಿ ಕಟ್ಟುತ್ತೇವೆ ಅನ್ನೋದ್ದಕ್ಕಿಂತ ಹೆಚ್ಚಾಗಿ ವಾಸ್ತು ನಿಯಮಗಳನ್ನು ಹೇಗೆ ಪಾಲಿಸುತ್ತೇವೆ ಅನ್ನೋದು ಮುಖ್ಯ. ಮನೆಯ ಶೋಕೇಸ್ ತುಂಬಿಸೋಕೆ ನಾನಾ ರೀತಿಯ ಪ್ರತಿಮೆಗಳು, ಫ್ಯಾನ್ಸಿ ಐಟಂಗಳು, ಗಾಜಿನ ವಸ್ತುಗಳನ್ನ ತರುತ್ತಾರೆ. ಇದಕ್ಕೆ ಪ್ರಾಣಿ ಪಕ್ಷಿಗಳ ಫೋಟೋ – ಪ್ರತಿಮೆಗಳು ಹೊರತಾಗಿಲ್ಲ. ಆದರೆ ಮನೆಯ ಅಂದವನ್ನು ಹೆಚ್ಚಿಸಲು ತರುವ ಇಂತಹ ಶೋ ಫೀಸ್ ಗಳಿಂದ ಒಳ್ಳೆದಾಗುತ್ತದೆಯೇ ಅಥವಾ ಕೆಡಕು ಆಗುತ್ತದೆಯೇ ಎಂದು ಹಿಂದುಮುಂದು ಯೋಚಿಸದೇ ತಂದು ಇಟ್ಟುಬಿಡುತ್ತೇವೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ತರುವ ಪ್ರತಿಯೊಂದು ವಸ್ತುಗಳನ್ನು ಇಡಲು ಸೂಕ್ತ ಸ್ಥಳವಿದ್ದು, ಅವುಗಳನ್ನು ತಪ್ಪಾದ ಸ್ಥಳದಲ್ಲಿ ಇಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ ಎಂದು ಹೇಳಲಾಗುತ್ತದೆ. ಕೆಲವರು ಮನೆಯಲ್ಲಿ ಗೂಬೆ ಫೋಟೋಗಳನ್ನ ಇಡುತ್ತಾರೆ. ಹಾಗಿದ್ರೆ ಮನೆಯಲ್ಲಿ ಗೂಬೆ ಪ್ರತಿಮೆ ಅಥವಾ ಫೋಟೋವನ್ನು ಇಡಬಹುದಾ..? ಇಟ್ಟರೆ ವಾಸ್ತು ಪ್ರಕಾರ ಎಲ್ಲಿಡಬೇಕು ಅನ್ನೋದ್ದನ್ನ ನೋಡೋಣ.
ಮನೆಯಲ್ಲಿ ಗೂಬೆ ಇಡಬಹುದೇ..?
ಮನೆಯಲ್ಲಿ ಗೂಬೆಯ ಪ್ರತಿಮೆಯನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಸಂಪತ್ತು, ಪ್ರಗತಿ, ಸಂತೋಷವನ್ನು ತರುತ್ತದೆ. ಗೂಬೆಯು ಸಂಪತ್ತಿನ ಸಂಕೇತವಾಗಿರುವುದರಿಂದ, ಮನೆಯಲ್ಲಿನ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ.
ಈ ದಿಕ್ಕು ಸೂಕ್ತ
ವಾಸ್ತು ಶಾಸ್ತ್ರದ ಪ್ರಕಾರ ಗೂಬೆ ಮೂರ್ತಿ ಇಡಲು ಮನೆಯ ವಾಯುವ್ಯ ದಿಕ್ಕು ಅತ್ಯಂತ ಸೂಕ್ತವಾಗಿದ್ದು, ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಿದಂತೆ ಇದು ನೋಡಿಕೊಳ್ಳಲಿದ್ದು, ಮುಖ್ಯ ಬಾಗಿಲಿಗೆ ಗೂಬೆ ಮುಖ ಇರುವಂತೆ ಆ ಮೂರ್ತಿಯನ್ನು ಇಡಿ.
ಇದು ನಿಮ್ಮ ಮನೆಗೆ ಯಾವುದೇ ತರಹದೇ ದೃಷ್ಟಿ ಆಗದಂತೆ ಜೊತೆಗೆ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.
ಪ್ರತಿಮೆ ಹೀಗಿರಲಿ
ಲಕ್ಷ್ಮಿ ದೇವಿಯ ವಾಹನ ಆಗಿರುವ ಗೂಬೆಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಸ್ಥಾನವಿದ್ದು, ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಶುಭ ಫಲಗಳು ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೀವೂ ನಿಮ್ಮ ಮನೆಯಲ್ಲಿ ಗೂಬೆಯ ಪ್ರತಿಮೆ ಅಥವಾ ಫೋಟೋ ಇಟ್ಟುಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದರೆ ಮಹಾಲಕ್ಷ್ಮಿಯೊಂದಿಗೆ ಇರುವ ಗೂಬೆಯ ಚಿತ್ರವನ್ನು ಇಟ್ಟುಕೊಳ್ಳಬಹುದು. ಆದರೆ ಎಂದಿಗೂ ಒಂಟಿ ಗೂಬೆಯ ಚಿತ್ರ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಲ್ಲ.
ಇನ್ನು ಇದರ ಹೊರತಾಗಿ ನೀವು ಕೆಲಸ ಮಾಡುವ ಕಚೇರಿ ಅಥವಾ ಅಂಗಡಿಗಳಲ್ಲಿ ನೀವು ಕೂರುವ ಟೇಬಲ್ ಬಳಿ ಗೂಬೆಯ ಮೂರ್ತಿ ಇಟ್ಟರೆ ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಇದರ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಲಿದ್ದು, ಹಣಕಾಸಿನ ಸಮಸ್ಯೆಗಳು ನಿವಾರಣೆಗೊಳ್ಳಲಿದೆ.

ನೋಡಿರಿ

