ಇಂಡಿಗೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – 10 ಸಾವಿರ ರೂ. ವೋಚರ್ ಗಿಫ್ಟ್‌ ನೀಡಿದ ವಿಮಾನಯಾನ ಸಂಸ್ಥೆ!

ಇಂಡಿಗೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – 10 ಸಾವಿರ ರೂ. ವೋಚರ್ ಗಿಫ್ಟ್‌ ನೀಡಿದ ವಿಮಾನಯಾನ ಸಂಸ್ಥೆ!

ಭಾರತದ ದೊಡ್ಡ ವಿಮಾನಯಾನ ಕಂಪನಿ ಇಂಡಿಗೋ ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ ತನ್ನ ಪಯಣವನ್ನು ರದ್ದು ಮಾಡಿ, ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿಮಾನ ರದ್ದಾಗಿರುವ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಗ್ಗೆ ಇಂಡಿಗೋ ವಿರುದ್ಧ ಕೇಂದ್ರ ಸರ್ಕಾರ ಸೇರಿದಂತೆ ಪ್ರಯಾಣಿಕರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇಂಡಿಗೋ ವಿಮಾನ ಬಿಕ್ಕಟ್ಟು ಈಗ ಕೊಂಚ ಬಗೆಹರಿದಂತೆ ಕಾಣುತ್ತಿದೆ. ಈ ಬೆನ್ನಲ್ಲೇ ಇಂಡಿಗೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

ಇದನ್ನೂ ಓದಿ: ರಾಜ್ಯದ ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್!‌ –  ಸರ್ಕಾರಿ ಇಲಾಖೆಗಳಲ್ಲಿ 2% ಉದ್ಯೋಗ ಮೀಸಲಾತಿ ಘೋಷಿಸಿದ ಸಿಎಂ!  

ಸಿಬ್ಬಂದಿ ಕೊರತೆಯ ಬಿಕ್ಕಟ್ಟಿನಿಂದ ಡಿಸೆಂಬರ್ 3ರಿಂದ 5ರ ನಡುವೆ ಸಾವಿರಾರು ಇಂಡಿಗೋ ವಿಮಾನಗಳು  ರದ್ದಾಗಿದ್ದವು. ಉಂಟಾದ ವಿಮಾನ ನಿಲ್ದಾಣದ ದಟ್ಟಣೆಯ ನಡುವೆ ಗಂಟೆಗಟ್ಟಲೆ ಸಿಲುಕಿಕೊಂಡ ಹಾಗೂ ತೀವ್ರ ರೀತಿಯಲ್ಲಿ ತೊಂದರೆ ಅನುಭವಿಸಿದ್ದರು. ಇದೀಗ ಇಂಡಿಗೋ ಗ್ರಾಹಕರಿಗೆ 10,000 ರೂ. ಪ್ರಯಾಣ ವೋಚರ್‌ಗಳನ್ನು ನೀಡುವುದಾಗಿ ಇಂಡಿಗೋ ಘೋಷಿಸಿದೆ. ಮುಂದಿನ 12 ತಿಂಗಳುಗಳಲ್ಲಿ ಯಾವುದೇ ಇಂಡಿಗೋ ವಿಮಾನಕ್ಕೆ ಆ ವೋಚರ್‌ಗಳನ್ನು ಬಳಸಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಇಂಡಿಗೋ ಅಧಿಕೃತ ಆದೇಶ ಹೊರಡಿಸಿದೆ. ಇಂಡಿಗೋ ಸಂಸ್ಥೆ ಹೇಳಿಕೆಯಲ್ಲಿ ಡಿಸೆಂಬರ್ 3, 4, 5ರಂದು ಪ್ರಯಾಣಿಸುತ್ತಿದ್ದ ನಮ್ಮ ಗ್ರಾಹಕರಲ್ಲಿ ಕೆಲವರು ಕೆಲವು ವಿಮಾನ ನಿಲ್ದಾಣಗಳಲ್ಲಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಅವರಲ್ಲಿ ಹಲವರು ತೀವ್ರವಾಗಿ ಪರಿಣಾಮ ಎದುರಿಸಿದ್ದರು ಎಂಬುದನ್ನು ಇಂಡಿಗೋ ವಿಷಾದದಿಂದ ಒಪ್ಪಿಕೊಳ್ಳುತ್ತದೆ ಮತ್ತು ಕ್ಷಮೆಯನ್ನೂ ಕೋರುತ್ತದೆ. ಅಂತಹ ತೀವ್ರ ಪರಿಣಾಮ ಬೀರಿದ ಗ್ರಾಹಕರಿಗೆ ನಾವು 10,000 ರೂ. ಮೌಲ್ಯದ ಪ್ರಯಾಣ ವೋಚರ್‌ಗಳನ್ನು ನೀಡುತ್ತೇವೆ ಎಂದು ತಿಳಿಸಿದೆ.

ಮುಂದಿನ 12 ತಿಂಗಳೊಳಗೆ ಯಾವುದೇ ಇಂಡಿಗೋ ಪ್ರಯಾಣಕ್ಕೆ ಈ ವೋಚರ್‌ಗಳನ್ನು ಬಳಸಬಹುದು. ಇಂಡಿಗೋದಲ್ಲಿ ನಿಮಗೆ ಮತ್ತೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಆದರೆ, ಇಂಡಿಗೋ ಹೇಳಿರುವ ಆ ತೀವ್ರವಾಗಿ ಪರಿಣಾಮ ಎದುರಿಸಿದ ಪ್ರಯಾಣಿಕರು ಯಾರು? ಇದರ ಮಾನದಂಡವೇನು? ಅಂತಹ ಗ್ರಾಹಕರನ್ನು ಹೇಗೆ ಗುರುತಿಸಲಾಗುತ್ತದೆ? ಎಂಬುದನ್ನು ಇಂಡಿಗೋ ಸ್ಪಷ್ಟಪಡಿಸಿಲ್ಲ. ಈಗಾಗಲೇ ರದ್ದಾದ ವಿಮಾನಗಳಿಗೆ ಅಗತ್ಯವಾದ ಮರುಪಾವತಿಯನ್ನು ಇಂಡಿಗೋ ಪ್ರಯಾಣಿಕರಿಗೆ ಮಾಡಿದೆ.

Shwetha M