ಮದುವೆಗೂ ವಿಲನ್‌ ಆದ ಸೋಶಿಯಲ್‌ ಮೀಡಿಯಾ! – 40 ದಿನದಲ್ಲಿ 150 ವಿವಾಹ ರದ್ದು!

ಮದುವೆಗೂ ವಿಲನ್‌ ಆದ ಸೋಶಿಯಲ್‌ ಮೀಡಿಯಾ! – 40 ದಿನದಲ್ಲಿ 150 ವಿವಾಹ ರದ್ದು!

ಇದು ಡಿಜಿಟಲ್‌ ಯುಗ. ತಿನ್ನೋ ಆಹಾರ, ಹಾಕೋ ಬಟ್ಟೆ ಎಲ್ಲವನ್ನ ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಬೋದು. ಇನ್ನು ಸೋಶಿಯಲ್‌ ಮೀಡಿಯಾ ಬಂದ್ಮೇಲಂತೂ ಜನ ಮೂರ್ಹೊತ್ತು ಅದ್ರಲ್ಲೇ ಕಾಲ ಕಳಿತಾ ಇದ್ದಾರೆ. ಕೂತಿದ್ದು, ನಿಂತಿದ್ದು, ಎಲ್ಲವನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಬಿಡ್ತಾರೆ. ಇದೀಗ ಶಾಕಿಂಗ್‌ ವಿಚಾರವೊಂದು ರಿವೀಲ್‌ ಆಗಿದೆ. ಕಳೆದ 40 ದಿನಗಳಲ್ಲಿ 150ಕ್ಕೂ ಹೆಚ್ಚು ಮದುವೆ ರದ್ದಾಗಿದೆ. ಅದಕ್ಕೆ ಮೂಲಕ ಕಾರಣ ಸೋಶಿಯಲ್‌ ಮೀಡಿಯಾ.

ಇದನ್ನೂ ಓದಿ: ಅಭಿಮಾನಿಗಳ ಹೃದಯಗಳಲ್ಲಿ ಡೆವಿಲ್ ಗರ್ಜಿಸಲಿ!‌ – ಮಗನ ಸಿನಿಮಾ ಬಗ್ಗೆ ಸುಮಲತಾ ಅಂಬರೀಶ್ ಪೋಸ್ಟ್!

ಈಗ ಮದುವೆ ಸೀಸನ್‌. ದೇಶದಾದ್ಯಂತ ಸಾವಿರಾರು ಮದುವೆ ನಡೆಯುತ್ತಿದೆ.  ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟರ್‌ ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ನಿಶ್ಚಯವಾಗಿತ್ತು ಕಡೇ ಕ್ಷಣದಲ್ಲಿ ಮದುವೆ ರದ್ದಾಗಿತ್ತು. ಇದೀಗ ಮದುವೆ ಕುರಿತು ಶಾಕಿಂಗ್‌ ವಿಚಾರವೊಂದು ರಿವೀಲ್‌ ಆಗಿದೆ. ಇಂಧೋರ್ ಒಂದರಲ್ಲಿಯೇ ಬರೀ 40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್ ಆಗಿದೆ.

ಹಿಂದೆ ಮದುವೆ ಮುರಿದು ಬೀಳಲು ವರದಕ್ಷಿಣೆ, ಆರ್ಥಿಕ ಸ್ಥಿತಿ ಕಾರಣವಾಗಿತ್ತು. ಆದ್ರೀಗ ಇನ್ಸ್ಟಾಗ್ರಾಮ್, ಎಕ್ಸ್, ಫೇಸ್ಬುಕ್ ಗಳು ಕಾರಣವಾಗ್ತಿದೆ. ಇಂಧೋರ್ ನಲ್ಲಿ ಕಳೆದ 40 ದಿನಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮದುವೆ ನಡೆದಿದೆ. ಆದ್ರೆ 150 ಮದುವೆ ಮುರಿದು ಬಿದ್ದಿದೆ ಎಂಬ ಶಾಕಿಂಗ್‌ ವಿಚಾರ ರಿವೀಲ್‌ ಆಗಿದೆ. ಬಹುತೇಕ ಮದುವೆ ಮುರಿದು ಬೀಳಲು ಸೋಶಿಯಲ್ ಮೀಡಿಯಾ ಕಾರಣ ಎನ್ನುವ ಸತ್ಯ ಹೊರಬಿದ್ದಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಹಳೆ ಪೋಸ್ಟ್, ಕಮೆಂಟ್ ಗಳು ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗ್ತಿದೆ. ಮೆಹಂದಿ ಕಾರ್ಯಕ್ರಮ ಮುಗಿದ್ಮೇಲೆ, ಮದುವೆ ಮಂಟಪದಲ್ಲಿ ಮದುವೆ ರದ್ದಾದ ಅನೇಕ ಪ್ರಕರಣಗಳು ಇಂಧೋರ್ ನಲ್ಲಿ ಬೆಳಕಿಗೆ ಬಂದಿವೆ. ಒಂದು ಪ್ರಕರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ವೇಳೆ ಸೋಶಿಯಲ್ ಮೀಡಿಯಾ ಹಳೆ ಪೋಸ್ಟ್ ಬಗ್ಗೆ ಗಲಾಟೆಯಾಗಿದೆ. ಮದುವೆ ನಿಲ್ಲಿಸಿ ಹುಡುಗ ಗುಜರಾತ್ ಗೆ ವಾಪಸ್ ಆಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ವಧು ಪರಾರಿಯಾಗಿದ್ದಾಳೆ. ಆಕೆಗೆ ಬೇರೆ ಸಂಬಂಧವಿತ್ತು ಎಂಬುದು ಕೊನೆಯಲ್ಲಿ ಬಹಿರಂಗವಾಗಿದೆ. ವರದಿ ಪ್ರಕಾರ, ಶೇಕಡಾ 62ರಷ್ಟು ಮದುವೆ ಸೋಶಿಯಲ್ ಮೀಡಿಯಾದಿಂದ ರದ್ದಾಗಿದೆ. ಶೇಡಕಾ 17ರಷ್ಟು ಮದುವೆ, ಕುಟುಂಬದ ಸಮಸ್ಯೆ, ನಿಧನದಿಂದ ರದ್ದಾಗಿದೆ. ಶೇಕಡಾ 13ರಷ್ಟು ಮದುವೆ ವಿವಾದಗಳಿಂದ ರದ್ದಾದ್ರೆ ಶೇಕಡಾ 8ರಷ್ಟು ಮದುವೆ ರದ್ದಾಗಲು ಬೇರೆ ಕಾರಣಗಳಿವೆ.

ಇಂಧೋರ್ ನಲ್ಲಿ ಒಂದಲ್ಲ ಎರಡಲ್ಲ 150 ಮದುವೆ ರದ್ದಾಗಿರೋದು ಬರೀ ವಧು ಹಾಗೂ ವರನ ಕುಟುಂಬಕ್ಕೆ ಮಾತ್ರ ನಷ್ಟತಂದಿಲ್ಲ. ವೆಡ್ಡಿಂಗ್ ಪ್ಲಾನರ್, ಹೋಟೆಲ್ಗಳು, ಪಾರ್ಕ್, ಅಡುಗೆ ತಯಾರಕರು, ಬ್ಯಾಂಡ್ಗಳು,ಡೆಕೋರೇಟರ್, ಮೇಕಪ್ ಆರ್ಟಿಸ್ಟ್ ಸೇರಿದಂತೆ ಮದುವೆ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಈ ಮದುವೆಯಿಂದ ಸುಮಾರು 25 ಕೋಟಿ ರೂಪಾಯಿ ನಷ್ಟವಾಗಿದೆ.

Shwetha M