ಅಭಿಮಾನಿಗಳ ಹೃದಯಗಳಲ್ಲಿ ಡೆವಿಲ್ ಗರ್ಜಿಸಲಿ!‌ – ಮಗನ ಸಿನಿಮಾ ಬಗ್ಗೆ ಸುಮಲತಾ ಅಂಬರೀಶ್ ಪೋಸ್ಟ್!

ಅಭಿಮಾನಿಗಳ ಹೃದಯಗಳಲ್ಲಿ ಡೆವಿಲ್ ಗರ್ಜಿಸಲಿ!‌ – ಮಗನ ಸಿನಿಮಾ ಬಗ್ಗೆ ಸುಮಲತಾ ಅಂಬರೀಶ್ ಪೋಸ್ಟ್!

ನಟ ದರ್ಶನ್‌ ಅನುಪಸ್ಥಿಯಲ್ಲೇ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ರಾಜ್ಯಾದ್ಯಂತ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ದಾಸನನ್ನ ತೆರೆ ಮೇಲೆ ಕಂಡು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಸಿನಿಮಾ ಸ್ಟಾರ್ಸ್‌ ಕೂಡ ದಾಸನ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದೀಗ ಸುಮಲತಾ ಅಂಬರೀಶ್‌ ತಮ್ಮ ಮೊದಲ ಮಗನ ಸಿನಿಮಾಗೆ ಶುಭಕೋರಿದ್ದಾರೆ.

ಇದನ್ನೂ ಓದಿ: ನನ್ನ ಗಂಡ ಅಂಥವನಲ್ಲ.. ಆದ್ರೆ ಟೀಂ IND ಆಟಗಾರರು ಬ್ಯಾಡ್ ಬಾಯ್ಸ್ – ರವೀಂದ್ರ ಜಡೇಜಾ ಹೆಂಡತಿಯ ಶಾಕಿಂಗ್ ಹೇಳಿಕೆ!

ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಉತ್ತಮ ಬಾಂಧವ್ಯ ಇದೆ. ದರ್ಶನ್​ನ ಮಗ ಎಂದು ಸುಮಲತಾ ಪರಿಗಣಿಸಿದ್ದರು.ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ನನ್ನ ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ ಎಂದು ಹೇಳಿಕೆ ನೀಡಿದ್ದರು. ಸುಮಲತಾ ಅಂಬರೀಶ್ ಮೊದಲ ಮಗನಿಗೆ ವಿಶ್‌ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹಾಗೂ ಡೆವಿಲ್‌ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು! ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮತ್ತು ಅಭಿಮಾನಿಗಳ ಹೃದಯಗಳಲ್ಲಿ ಗರ್ಜಿಸಲಿ! ಬ್ಲಾಕ್ಬಸ್ಟರ್ ಯಶಸ್ಸು ಇಲ್ಲಿದೆ! ಎಂದು ಡೆವಿಲ್‌ ಪೋಸ್ಟರ್‌ ಜೊತೆ ವಿಶ್‌ ಮಾಡಿದ್ದಾರೆ.

ಅಂದ್ಹಾಗೆ ಡೆವಿಲ್‌ ಸಿನಿಮಾಗೆ ಹಿಂದೆಯೂ ಸುಮಲತಾ ಅಂಬರೀಶ್‌ ಶುಭಹಾರೈಸಿದ್ರು. ರಿಲೀಸ್‌ ಗೂ ಮುನ್ನ ಡೆವಿಲ್ ಸಿನಿಮಾ ತಂಡದವರು ಪ್ರಚಾರ ಸರಿಯಾಗಿಯೇ ಮಾಡುತ್ತಿದ್ದಾರೆ ಎನಿಸುತ್ತದೆ. ಯಾವತ್ತೂ ನಾನು ಸಿನಿಮಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಂಡಿರಲ್ಲ. ಸತ್ಯ ಎನ್ನೋದು ಶಾಶ್ವತವಾಗಿ ಮುಚ್ಚಿಡಲು ಆಗಲ್ಲ. ಚಿತ್ರ ಕೂಡ ಗೆಲ್ಲಲಿ. ಅಭಿಮಾನಿಗಳು ಸಿನಿಮಾ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಆ ಸಿನಿಮಾ ಖಂಡಿತವಾಗಿಯೂ ಯಶಸ್ವಿ ಆಗಬೇಕು ಎಂಬುದು ನನ್ನ ಹಾರೈಕೆ ಎಂದಿದ್ದರು. ಇದೀಗ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ.

Shwetha M