ಕಾವು ಮನಸು ನೋಯಿಸಿದ್ದಕ್ಕೆ ಗಿಲ್ಲಿ ವಿಲವಿಲ – ರಘು ಚೆಂದ ಹೊಗಳಿದ ಚೈತ್ರಾ ಕುಂದಾಪುರ
ಬಿಗ್ಬಾಸ್ ಮನೆಯ ವಿಲನ್ ಗಿಲ್ಲಿ..!

ಬಿಗ್ಬಾಸ್ ಮನೆಯಲ್ಲಿ ಒಂದಾದ ಮನಸುಗಳು ಒಡೆದಿವೆ. ಚುಚ್ಚು ಮಾತುಗಳು, ಖಡಕ್ ನಿರ್ಧಾರಗಳು ಸ್ಪರ್ಧಿಗಳು ವಿಲ ವಿಲ ಒದ್ದಾಡುವಂತೆ ಮಾಡಿದೆ. ವಿಲನ್ ಸಾಮ್ರಾಜ್ಯದಲ್ಲಿ ಈಗ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟಾ. ಅದರಲ್ಲೂ ವಿಲನ್ ಅಬ್ಬರಕ್ಕೆ ಕಾವು ಮತ್ತು ಗಿಲ್ಲಿ ದೂರಾಗುತ್ತಿದ್ದಾರೆ ಅನ್ನೋ ವಿಚಾರ ವೀಕ್ಷಕರಿಗೆ ಬೇಸರ ತಂದಿದೆ.
ಇದನ್ನೂ ಓದಿ:ಅಶ್ವಿನಿ ಗೌಡ ಮತ್ತು ಗಿಲ್ಲಿ ಬೊಂಬಾಟ್ ಜೋಡಿ – ಅಶ್ವಿನಿ ಮೇಡಂ ಜುಟ್ಟು ಗಿಲ್ಲಿ ಕೈಯಲ್ಲಿ..!
ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿಲನ್ ಆಡಿದ್ದೇ ಆಟ. ವಿಲನ್ ಎಂಟ್ರಿಯಿಂದ ಗಿಲ್ಲಿ ಮತ್ತು ಕಾವು ಸ್ನೇಹ ಚೂರು ಚೂರಾಗಿದೆ. ಪಾಪ.. ಗಿಲ್ಲಿ ನಟ, ಕಾವು ಮನಸು ನೋಯಿಸಲು ತುಂಬಾ ಕಷ್ಟಪಟ್ಟಿದ್ದು ಬುಧವಾರದ ಎಪಿಸೋಡ್ನಲ್ಲಿ ಪ್ರಸಾರವಾಗಿದೆ. ಗಿಲ್ಲಿ ತನಗೆ ಕೊಟ್ಟ ಟಾಸ್ಕ್ ಮಾಡಲು ಒದ್ದಾಟ ನಡೆಸಿರುವುದಕ್ಕೆ ವೀಕ್ಷಕರು ಕೂಡಾ ಬೇಸರ ಮಾಡಿಕೊಂಡಿದ್ದಾರೆ. ಕಾವ್ಯ ಡಲ್ ಆಗಿರುವುದು ನೋಡಿ ಗಿಲ್ಲಿ ಊಟ ಕೂಡಾ ಮಾಡಿಲ್ಲ. ಇದರ ಮಧ್ಯೆ ಕಾವ್ಯ ಗಿಲ್ಲಿಯನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದ್ದಾರೆ. ಈ ಮನೆಯ ವಿಲನ್ ಗಿಲ್ಲಿ ನಟ ಎಂದು ಮತ್ತೊಮ್ಮೆ ಗಿಲ್ಲಿ ಮನಸಿಗೆ ಗಾಯ ಮಾಡಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ಬಾಯಿ ನಿಜಕ್ಕೂ ಬೊಂಬಾಯಿ ಅಂತಿದ್ದಾರೆ ವೀಕ್ಷಕರು. ರಾತ್ರೋರಾತ್ರಿ ಸೀಕ್ರೆಟ್ ಟಾಸ್ಕ್ ರಹಸ್ಯದ ಕಾರ್ಯಾಚರಣೆಗೆ ಇಳಿದಿದ್ದರು ಚೈತ್ರಾ. ನಂತರ ಅಲ್ಲೊಂದು ಮಾತಾಡಿ, ಇಲ್ಲೊಂದು ಮಾತಾಡಿ, ಕೊನೆಗೆ ಸುಸ್ತಾಗಿ ಹೋಗಿ ಮಲಗಿದ್ದರು. ಬೆಳಗ್ಗೆ ಎದ್ದು ತಿಂಡಿ ತಿನ್ನುವಾಗ ಚೈತ್ರಾ ಎದುರು ರಘು ತಿಂಡಿ ತಿನ್ನುತ್ತಿದ್ದರು. ಆಗ ರಘುಗೆ ಲುಕ್ ಕೊಟ್ಟ ಚೈತ್ರಾ ಕುಂದಾಪುರ ನಿಮ್ಮ ಚೆಂದ ನೋಡಿ ಉಳಿದ ಹುಡುಗರಿಗೆ ಹೊಟ್ಟೆ ಕಿಚ್ಚು ಅಂತಾ ಹೇಳಿಯೇ ಬಿಟ್ರು. ಇದನ್ನ ನೋಡಿದ ವೀಕ್ಷಕರು, ಮದುವೆಯಾದ ಮೇಲೆ ಯಾಕಮ್ಮಾ ಬೇಕಿತ್ತು ಇಂಥಾ ಮಾತು ಅಂತಾ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಅಂತೂ ಈ ವಾರ ಬಿಗ್ ಬಾಸ್ ಮನೆಯ ವಿಲನ್ ಯಾರು ಎಂದು ಡಿಸೈಡ್ ಆಗುತ್ತದೆ. ಕಾವ್ಯ ಪ್ರಕಾರ ಗಿಲ್ಲಿಯೇ ಈ ಮನೆಯ ವಿಲನ್.

ನೋಡಿರಿ

