ನನ್ನ ಗಂಡ ಅಂಥವನಲ್ಲ.. ಆದ್ರೆ ಟೀಂ IND ಆಟಗಾರರು ಬ್ಯಾಡ್ ಬಾಯ್ಸ್ – ರವೀಂದ್ರ ಜಡೇಜಾ ಹೆಂಡತಿಯ ಶಾಕಿಂಗ್ ಹೇಳಿಕೆ!

ತನ್ನ ಗಂಡನನ್ನು ಹೊಗಳುವ ಬರದಲ್ಲಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜ ಒಂದು ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ. ಇವರು ಟೀಮ್ ಇಂಡಿಯಾದ ಆಟಗಾರರ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ಕಾರ್ಯಕ್ರಮವೊಂದರ ಮಾತನಾಡಿದ ರಿವಾಬಾ, ನನ್ನ ಗಂಡ ರವೀಂದ್ರ ಜಡೇಜಾ ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಗೆ ಕ್ರಿಕೆಟ್ ಆಡಲು ಹೋಗುತ್ತಾರೆ. ಅಲ್ಲಿಗೆ ಹೋದಾಗ ಅವರು ಯಾವುದೇ ತಪ್ಪು ಮಾಡುತ್ತಿಲ್ಲ. ತುಂಬಾ ಒಳ್ಳೆಯವರು. ಆದರೆ ವಿದೇಶಿ ಪ್ರವಾಸದ ವೇಳೆ ಟೀಮ್ ಇಂಡಿಯಾದ ಇತರೆ ಆಟಗಾರರು ಕೆಟ್ಟ ಪ್ರವೃತ್ತಿಗಳಲ್ಲಿತೊಡಗುತ್ತಾರೆ ಅಂತ ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸಿಎಂ ವಾರ್ನಿಂಗ್‌ಗೂ ಯತೀಂದ್ರ ಡೋಂಟ್‌ಕೇರ್! – ಮತ್ತೆ ಡಿಕೆಶಿಗೆ ಪಂಚ್ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!
ಗುಜರಾತ್‌ನ ಶಿಕ್ಷಣ ಸಚಿವೆಯಾಗಿರುವ ರಿವಾಬಾ ಜಡೇಜಾ, ಇತ್ತೀಚೆಗೆ ತಮ್ಮ ಭಾಷಣದ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ. ರಿವಾಬಾ ಜಡೇಜಾ ಅವರು ತಮ್ಮ ಪತಿಗೆ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಅವರು ಬಯಸಿದರೆ ಅದನ್ನು ಮಾಡಬಹುದು. ಆದರೆ ಅವರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದರಿಂದ ಅವರು ಹಾಗೆ ಮಾಡಲ್ಲ. ಆದರೆ ಭಾರತ ತಂಡದಲ್ಲಿರುವ ಇತರೆ ಆಟಗಾರರು ಕೆಟ್ಟ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಭಾರತೀಯ ತಂಡದಲ್ಲಿನ ಆಟಗಾರರ ಇಮೇಜ್ ಮತ್ತು ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
“मेरे पति (रवींद्र जडेजा , क्रिकेटर)को लंदन , दुबई, ऑस्ट्रेलिया जैसे अनेकों देशों में खेलने के लिए जाना होता है फिर भी आज दिन तक उन्होंने कभी व्यसन नहीं किया क्योंकि वो अपनी जवाबदारी को समझते हैं @Rivaba4BJP जी , शिक्षा मंत्री गुजरात सरकार #Rivabajadeja #ravindrajadeja pic.twitter.com/OyuiPFPvVa
— राणसिंह राजपुरोहित (@ransinghBJP) December 10, 2025
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದರು. ತಮ್ಮ ಸಮೀಪದ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ರಿವಾಬಾ ಜಡೇಜಾ ಟೀಮ್ ಇಂಡಿಯಾ ಆಟಗಾರರು ಯಾವ ರೀತಿಯ ಕೆಟ್ಟ ಕೆಲಸ ಮಾಡುತ್ತಾರೆ ಅನ್ನೋದ್ದನ್ನ ಹೇಳಿಲ್ಲ. ತನ್ನ ಪತ್ನಿ ತುಂಬಾ ಒಳ್ಳೆಯವರು, ಇತರೆ ಆಟಗಾರರು ಕೆಟ್ಟವರು ಎಂಬಾರ್ಥದಲ್ಲಿ ರಿವಾಬಾ ಜಡೇಜಾ ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದ್ದು, ಜಡೇಜಾ ಪತ್ನಿ ವಿರುದ್ಧದ ಇತರೆ ಕ್ರಿಕೆಟಿಗರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೋಡಿರಿ

