ಡೆವಿಲ್ ಗೆಲ್ಲಿಸಲು ವಿಜಿ ಥಿಯೇಟರ್ ರೌಂಡ್ಸ್ – ದರ್ಶನ್ ಸಿನಿಮಾ ಬ್ಲಾಕ್ ಬಸ್ಟರ್ ಎಂದ್ರು ಧನ್ವೀರ್, ದಿನಕರ್ ತೂಗುದೀಪ

ಡೆವಿಲ್ ಗೆಲ್ಲಿಸಲು ವಿಜಿ ಥಿಯೇಟರ್ ರೌಂಡ್ಸ್ – ದರ್ಶನ್ ಸಿನಿಮಾ ಬ್ಲಾಕ್ ಬಸ್ಟರ್ ಎಂದ್ರು ಧನ್ವೀರ್, ದಿನಕರ್ ತೂಗುದೀಪ

ದರ್ಶನ್ ಅಭಿನಯದ ಡೆವಿಲ್ ಸಿನಿಮಾಗೆ ಭರ್ಜರಿ ಸ್ವಾಗತ ಸಿಕ್ಕಿದೆ. ದಾಸನ ಅಭಿಮಾನಿಗಳು ಥಿಯೇಟರ್ ಮುಂದೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಜೊತೆಗೆ ದಚ್ಚು ಪತ್ನಿ ವಿಜಯಲಕ್ಷ್ಮೀ ಡೆವಿಲ್ ನೋಡಲು ಓಡೋಡಿ ಬಂದಿದ್ದಾರೆ. ಇವರಿಗೆ ಸಿನಿಮಾ ನಾಯಕಿ ಸಾಥ್ ನೀಡಿದ್ದಾರೆ.

ಇದನ್ನೂ ಓದಿ:ಡಿ ಬಾಸ್ ಡೆವಿಲ್ Day – ದರ್ಶನ್ ಫ್ಯಾನ್ಸ್‌ಗೆ ಇವತ್ತೇ ದೀಪಾವಳಿ ಹಬ್ಬ

ರಾಜ್ಯಾದ್ಯಂತ 500ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಡೆವಿಲ್ ದರ್ಬಾರ್ ಶುರುವಾಗಿದೆ. ದರ್ಶನ್​ ಅಭಿಮಾನಿಗಳ ಜೊತೆ ಮೊದಲ ಬಾರಿಗೆ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದಾರೆ ಪತ್ನಿ ವಿಜಯಲಕ್ಷ್ಮಿ. ಅಮ್ಮನ ಜೊತೆ ಮಗ ವಿನೀಶ್ ಕೂಡಾ ಡೆವಿಲ್ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಜೊತೆಗೆ ಅಪ್ಪನ ಅಭಿಮಾನಿಗಳ ಅಭಿಮಾನವನ್ನು ಮಗ ಕಣ್ತುಂಬಿಕೊಂಡಿದ್ದಾರೆ. ಡೆವಿಲ್ ಚಿತ್ರದ ನಾಯಕಿ ರಚನಾ ರೈ ಕೂಡಾ ಸಿನಿಮಾ ನೋಡಲು ಬೆಳಗ್ಗೆಯೇ ಥಿಯೇಟರ್‌ಗೆ ಓಡೋಡಿ ಬಂದಿದ್ದಾರೆ.

ವಿಜಯಲಕ್ಷ್ಮಿ ಅವರು ಬೆಳಗ್ಗೆಯೇ ಡೆವಿಲ್ ಸಿನಿಮಾದ ಟಿಕೆಟ್​ಗೆ ಪೂಜೆ ಮಾಡಿದ್ದಾರೆ. ದೇವರ ಮುಂದೆ ಡೆವಿಲ್ ಸಿನಿಮಾ ಟಿಕೆಟ್ ಹಿಡಿದಿರುವ ಫೋಟೋವನ್ನು ಅವರು ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ದಾಸನ ಅಭಿಮಾನಿಗಳು ಅತ್ತಿಗೆಯನ್ನು ಕೊಂಡಾಡುತ್ತಿದ್ದಾರೆ.

ಡೆವಿಲ್ ಶೋ ಸಂಪೂರ್ಣ ಫ್ಯಾನ್ಸ್ ಶೋ ಆಗಿದೆ. ಜೊತೆಗೆ ದಚ್ಚು ಗೆಳೆಯ ನಟ ಧನ್ವೀರ್ ಗೌಡ ಡೆವಿಲ್ ಚಿತ್ರ ನೋಡಿದ್ದಾರೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿಕೊಂಡು ಧನ್ವೀರ್ ಸಿನಿಮಾ ನೋಡಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡಾ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ದರ್ಶನ್ ಸಿನಿಮಾ ಬ್ಲಾಕ್ ಬಸ್ಟರ್ ಗ್ಯಾರಂಟಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಅಲ್ಲದೇ, ಅವರು ಎರಡು ವಾರಗಳ ಹಿಂದೆ ದರ್ಶನ್ ಭೇಟಿ ಮಾಡಿದಾಗ ಆಡಿದ ಮಾತನ್ನು ನೆನಪಿಸಿಕೊಂಡರು. ‘ನನ್ನ ಸೆಲೆಬ್ರಿಟೀಸ್ ನೋಡ್ಕೋತಾರೆ ಎಂಬ ಕಾನ್ಫಿಡೆನ್ಸ್​ನಲ್ಲಿ ಇದ್ದಾನೆ. ಅವನು ಕುಗ್ಗಿಲ್ಲ’ ಎಂದಿದ್ದಾರೆ ದಿನಕರ್. ಡಿ ಬಾಸ್ ಬಗ್ಗೆ ಮಾಹಿತಿ ಸಿಕ್ಕಿದ ಖುಷಿಯಲ್ಲಿ ಫ್ಯಾನ್ಸ್ ತೇಲಾಡುತ್ತಿದ್ದಾರೆ.

Sulekha