ಡೆವಿಲ್‌ಗೆ ಅಭಿಮಾನಿಗಳ ಕ್ಷೀರಾಭಿಷೇಕ – ದಚ್ಚು ಫ್ಯಾನ್ಸ್‌ ಅಬ್ಬರ.. ಟೆಕೆಟ್ ಸೋಲ್ಡ್‌ ಔಟ್

ಡೆವಿಲ್‌ಗೆ ಅಭಿಮಾನಿಗಳ ಕ್ಷೀರಾಭಿಷೇಕ – ದಚ್ಚು ಫ್ಯಾನ್ಸ್‌ ಅಬ್ಬರ..  ಟೆಕೆಟ್ ಸೋಲ್ಡ್‌ ಔಟ್

ಸ್ಯಾಂಡಲ್‌ವುಡ್‌ ನ ಬಹುನಿರೀಕ್ಷಿತ ಡೆವಿಲ್‌ ಸಿನಿಮಾ ತೆರೆಗೆ ಅಪ್ಪಳಿಸಿದೆ. ತೆರೆಮೇಲೆ ದಾಸನ ಕಂಡು ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ಸಿನಿಮಾ ಥಿಯೇಟರ್‌ಗಳ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್‌ ಪೋಸ್ಟರ್‌ಗೆ ಫ್ಯಾನ್ಸ್‌ ಕ್ಷೀರಾಭಿಷೇಕ ಮಾಡಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: ಅಶ್ವಿನಿ ಗೌಡ ಮತ್ತು ಗಿಲ್ಲಿ ಬೊಂಬಾಟ್ ಜೋಡಿ – ಅಶ್ವಿನಿ ಮೇಡಂ ಜುಟ್ಟು ಗಿಲ್ಲಿ ಕೈಯಲ್ಲಿ..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲಿನಲ್ಲಿದ್ರೆ, ಇತ್ತ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. 1000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.  ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿದ್ದು,  ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿ, ಚಿತ್ರಮಂದಿರಗಳಲ್ಲಿ ಸಿನಿಮಾನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಡೆವಿಲ್‌ ಅಬ್ಬರ ಜೋರಾಗಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಹಬ್ಬದ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ದರ್ಶನ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ ಫ್ಯಾನ್ಸ್‌. ದರ್ಶನ್‌ ಅಭಿಮಾನಿಗಳ ಅಬ್ಬರಕ್ಕೆ ಥಿಯೇಟರ್‌ಗಳು ಶೇಕ್‌ ಶೇಕ್‌ ಆಗಿದೆ.

ಇನ್ನು ಕೆ ಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ ಜೆಸಿ ರಸ್ತೆಯ ಊರ್ವಶಿ, ಜೆಪಿ ನಗರದ ಸಿದ್ದೇಶ್ವರ , ನವರಂಗ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಡೆವಿಲ್ ತೆರೆಗೆ ಬಂದಿದೆ. ಥಿಯೇಟರ್​ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಿ ಡೆವಿಲ್ ಸಿನಿಮಾ ಪ್ರದರ್ಶನ ಕಂಡಿದೆ. ಚಿತ್ರದುರ್ಗದ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಬೃಹತ್‌ ಗಾತ್ರದ ಕಟೌಟ್ ಗಳನ್ನ ಕಟ್ಟಲಾಗಿದೆ.

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲಿನಲ್ಲಿದ್ದರೂ, ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆ ಭಾರೀ ಜೋರಾಗಿದೆ. ಚಿತ್ರವು ಭರ್ಜರಿ ಪ್ರದರ್ಶನಗಳೊಂದಿಗೆ ತೆರೆಕಂಡು, ಕನ್ನಡ ಚಿತ್ರರಂಗದಲ್ಲಿ ವರ್ಷದ ಅತಿದೊಡ್ಡ ರಿಲೀಸ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಪ್ರಕಾಶ್ ವೀರ್ ನಿರ್ದೇಶನದ ಈ ಆಕ್ಷನ್–ಡ್ರಾಮಾದಲ್ಲಿ ದರ್ಶನ್ ಜೊತೆ ರಚನಾ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ರೋಜರ್ ನಾರಾಯಣನ್, ಶೋಭರಾಜ್ ಮತ್ತು ಶ್ರೀನಿವಾಸ್ ಪ್ರಭು ಮೊದಲಾದ ಕಲಾವಿದರು ಗಣನೀಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ದೃಶ್ಯ ವೈಭವ ತುಂಬಿದೆ. ಶ್ರೀ ಜೈಮಾತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ದಿ ಡೆವಿಲ್, ಕೇವಲ ಮತ್ತೊಂದು ವಾರದ ಬಿಡುಗಡೆಯಲ್ಲ — ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ದೊಡ್ಡ ಸಂಭ್ರಮವನ್ನು ಶುರುವಾಗಿದೆ. ವಿತರಕರು ಸುಪ್ರೀತ್ ಮತ್ತು ಬಿ.ಕೆ. ಗಂಗಾಧರ್ ರಾಜ್ಯದೆಲ್ಲೆಡೆ ಭರ್ಜರಿ ತೆರೆಯಿಳಿಕೆಗೆ ವ್ಯವಸ್ಥೆ ಮಾಡಿದ್ದು, ಪ್ರೇಕ್ಷಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಶೋಗಳನ್ನು ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್ 6ರಿಂದ ಆರಂಭವಾದ ಮುಂಗಡ ಬುಕ್ಕಿಂಗ್‌ಗಳು ದಾಖಲೆ ಬರೆದಿವೆ. ಕೇವಲ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದರೆ, 30,000ಕ್ಕೂ ಹೆಚ್ಚು ಟಿಕೆಟ್‌ಗಳು ನೇರವಾಗಿ ಕೌಂಟರ್‌ನಲ್ಲಿ ಖರೀದಿಸಲ್ಪಟ್ಟಿವೆ. ಬಿಡುಗಡೆಯ ಮುನ್ನವೇ ಎರಡು ಲಕ್ಷ ಟಿಕೆಟ್‌ಗಳು ಮಾರಾಟವಾದ ಸುದ್ದಿ ಚಿತ್ರ ತಂಡದಲ್ಲಿ ಹೊಸ ಹುರುಪು ತಂದಿದೆ. ಹಲವೆಡೆ ಶೋಗಳು ಹೌಸ್‌ಫುಲ್ ಆಗುತ್ತಿದ್ದು, ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಂಗ್ರಹಿಸುವ ನಿರೀಕ್ಷೆಯಿದೆ.

Shwetha M