ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ಅರ್ಪಿಸಿದ ಸ್ಯಾಂಡಲ್‌ವುಡ್‌ನ ಕನಸಿನ ರಾಣಿ! – ಮಾಲಾಶ್ರೀ ಕೊಟ್ಟ ಚಿನ್ನದ ಕಿರೀಟ ಬೆಲೆ ಇಷ್ಟೊಂದಾ?

ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ಅರ್ಪಿಸಿದ ಸ್ಯಾಂಡಲ್‌ವುಡ್‌ನ ಕನಸಿನ ರಾಣಿ! – ಮಾಲಾಶ್ರೀ ಕೊಟ್ಟ ಚಿನ್ನದ ಕಿರೀಟ ಬೆಲೆ ಇಷ್ಟೊಂದಾ?

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳ ಜೊತೆ ಭೇಟಿ ನೀಡಿರುವ ಕನಸಿನ ರಾಣಿ ದೇವರಿಗೆ ಬಂಗಾರದ ಕಿರೀಟ ಅರ್ಪಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಅದೃಷ್ಟ ಪರೀಕ್ಷೆಗಿಳಿದ ದಾಸ! – ಡೆವಿಲ್‌ ಸಿನಿಮಾಗೆ ರಿಷಬ್‌ ಶೆಟ್ಟಿ ವಿಶ್!‌  

ನಟಿ ಮಾಲಾಶ್ರೀ ಶಿರಡಿ ಸಾಯಿಬಾಬಾ ಭಕ್ತೆ. ತಮ್ಮ ಮೊದಲ ಸಿನಿಮಾ ನಂಜುಂಡಿ ಕಲ್ಯಾಣ ಶುರುಮಾಡುವ ಮುನ್ನವೂ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಸಾಯಿಬಾಬಾ ದರ್ಶನ ಪಡೆದು ಸಿನಿಮಾ ಕಾರ್ಯ ಆರಂಭಿಸಿದ್ರು. ಮಾಲಾಶ್ರೀ ಅವರ ಈ ಸಕ್ಸಸ್ ಹಿಂದೆ ಶಿರಡಿ ಸಾಯಿಬಾಬಾ ಅವರ ಆರ್ಶೀವಾದ ಅಚಲವಾಗಿದೆ. ಈ ಹಿನ್ನೆಲೆ ತಮ್ಮ ಪುತ್ರಿಯ ಮೊದಲ ಸಿನಿಮಾ ಶುರು ಮಾಡುವಾಗಲೂ ಬಾಬಾ ಆರ್ಶೀವಾದವನ್ನ ಪಡೆದಿದ್ದಾರೆ. ಅಷ್ಟೇ ಅಲ್ಲ ದೇವರಿಗೆ ಚಿನ್ನದ ಕಿರೀಟ ಅರ್ಪಿಸಿದ್ದಾರೆ.

ಮಗಳು ಆರಾಧನಾ ರಾಮ್ ಹಾಗೂ ಪುತ್ರ ಆರ್ಯನ್ ಜೊತೆ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ಬಂಗಾರದ ಕಿರೀಟವನ್ನ ಅರ್ಪಿಸಿದ್ದಾರೆ. ಇನ್ನು ಇದೇ ವೇಳೆ ಸಾಯಿಬಾಬಾ ಮೇಲಿನ ಭಕ್ತಿಯನ್ನ ನಟಿ ಮಾಲಾಶ್ರೀ ವಿವರಿಸಿದ್ದಾರೆ. ನಾನು ಮೊದಲಿನಿಂದಲೂ ಬಾಬಾಗೆ ಏನಾದ್ರೂ ಕೊಡಬೇಕು ಅಂದುಕೊಂಡಿದ್ದೆ. ಬಾಬಾ ನಿಜಕ್ಕೂ ನನಗೆ ತೀರಾ ಹತ್ತಿರದವರಿದ್ದಂತೆ. ಬಾಬಾ ನಾನು ಕೇಳಿದ ಎಲ್ಲವನ್ನೂ ಕರುಣಿಸಿದ್ದಾರೆ. ಹೀಗಾಗಿ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆಯನ್ನು ಅವರಿಗೆ ನೀಡಲು ಬಯಸಿದ್ದೇನೆ. ಇದರಿಂದ ಬಾಬಾ ಕೂಡ ಖುಷಿಪಡುತ್ತಾರೆ ಎಂದು ಭಾವಿಸಿದ್ದೇನೆ. ನಿಜ ಹೇಳಬೇಕು ಅಂದ್ರೆ ನನ್ನ ಮಗಳು ಆರಾಧನಾ ಕೂಡ ಶಿರಡಿಯಿಂದಲೇ ತನ್ನ ಕೆರಿಯರ್‌ ಶುರು ಮಾಡಿದ್ದು. ಅವಳು ಕೂಡ ತನ್ನ ಮೊದಲ ಸಿನಿಮಾದಲ್ಲಿ ನಟಿಸುವ ಮುನ್ನ ಶಿರಡಿಗೆ ಬಂದು ಆಶೀರ್ವಾದ ಪಡೆದಿದ್ದಳು. ಬಾಬಾ ಅವರ ಮಹಿಮೆ ಏನೆಂದು ಎಲ್ಲರಿಗೂ ಗೊತ್ತಿದೆ. ನಾನು ಬಾಬಾ ಮಂದಿರದ ಆಡಳಿತ ಮಂಡಳಿಗೆ ಹಾಗೂ ವೈಯಕ್ತಿಕವಾಗಿ ಸಾಯಿಬಾಬಾಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಆದ್ರೆ ಚಿನ್ನದ ಕಿರೀಟದ ಬೆಲೆ ಎಷ್ಟು ಎಂಬ ಗುಟ್ಟನ್ನ ನಟಿ ರಿವೀಲ್‌ ಮಾಡಿಲ್ಲ.

Shwetha M