ಭಾರತದ ಗೆಲುವಿನ ಜೊತೆ ದಾಖಲೆಗಳ ಸರಮಾಲೆ – ತಿಲಕ್, ಬುಮ್ರಾ, ಪಾಂಡ್ಯ. ಜಿತೇಶ್ ಮೈಲುಗಲ್ಲು

ಭಾರತದ ಗೆಲುವಿನ ಜೊತೆ ದಾಖಲೆಗಳ ಸರಮಾಲೆ – ತಿಲಕ್, ಬುಮ್ರಾ, ಪಾಂಡ್ಯ. ಜಿತೇಶ್ ಮೈಲುಗಲ್ಲು

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟಿ-20ಐ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ ಗೆದ್ದಿದೆ. ಐದು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದು ಲೀಡ್ ಸಾಧಿಸಿದೆ. ಎರಡನೇ ಪಂದ್ಯ ಡಿಸೆಂಬರ್ 11 ರಂದು ಅಂದ್ರೆ ಗುರುವಾರ ಮುಲ್ಲನ್​ಪುರದಲ್ಲಿ ನಡೆಯಲಿದೆ. ಇನ್ನು ಮೊದಲ ಪಂದ್ಯದಲ್ಲಿ ಭಾರತದ ಪರ ಹಲವು ಆಟಗಾರರು ದಾಖಲೆಗಳನ್ನೂ ನಿರ್ಮಿಸಿದ್ದಾರೆ.

ಇದನ್ನೂ ಓದಿ : ಪಾಂಡ್ಯ FIRE.. ಬೌಲರ್ಸ್ POWER – ಫಸ್ಟ್ ಮ್ಯಾಚಲ್ಲೇ ಪಲ್ಟಿ ಹೊಡೆದ SA

ಸೌತ್ ಆಫ್ರಿಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತದ ಪರ ಹಾರ್ದಿಕ್ ಪಾಂಡ್ಯ ಮಾತ್ರನೇ ಬ್ಯಾಟಿಂಗ್ ನಲ್ಲಿ ಕ್ಲಿಕ್ ಆಗಿದ್ದು. ಟಾಪ್ ಆರ್ಡರ್ ಬ್ಯಾಟರ್ ಗಳೆಲ್ಲಾ ಕೈಕೊಟ್ಟಾಗ ಏಕಾಂಗಿಯಾಗಿ ನಿಂತು ರನ್ಸ್ ಸ್ಕೋರ್ ಮಾಡಿದ್ರು. ಈ ಮೂಲಕ  ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 175 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 12.3 ಓವರ್‌ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಯ್ತು. 101 ರನ್ ಗಳ ಅಂತರದಲ್ಲಿ ಭಾರತ ಪಂದ್ಯ ಗೆದ್ದಿತು. ವಿಶೇಷ ಅಂದ್ರೆ ಈ ಪಂದ್ಯದಲ್ಲಿ ಹಲವು ದಾಖಲೆಗಳೂ ನಿರ್ಮಾಣವಾಗಿದೆ.

ಟಿ-20ಐನಲ್ಲಿ 1,000 ರನ್ ಗಳಿಸಿದ ಅತ್ಯಂತ ಕಿರಿಯ ಭಾರತೀಯ!

ತಿಲಕ್ ವರ್ಮಾ ಮೊದಲ ಟಿ20ಐನಲ್ಲಿ 32 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 26 ರನ್ ಗಳಿಸಿದರು. ಹೀಗಿದ್ರೂ ಕೇವಲ 23 ವರ್ಷ ಮತ್ತು 31 ದಿನಗಳ ವಯಸ್ಸಿನಲ್ಲಿ ಟಿ20ಐನಲ್ಲಿ 1,000 ರನ್ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಅಭಿಷೇಕ್ ಶರ್ಮಾ ನವೆಂಬರ್ 8, 2025 ರಂದು ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಟ್‌ನ್‌ನಲ್ಲಿ 25 ವರ್ಷ ಮತ್ತು 65 ದಿನಗಳಲ್ಲಿ ಮೆನ್ ಇನ್ ಬ್ಲೂ ಪರ 1,000 ನೇ ಟಿ20ಐ ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು. ಒಟ್ಟಾರೆಯಾಗಿ, ತಿಲಕ್ ಈಗ 37 ಟಿ20ಐಗಳಲ್ಲಿ ಕಾಣಿಸಿಕೊಂಡಿದ್ದಾರೆ, 46.45 ಸರಾಸರಿ ಮತ್ತು 143.74 ಸ್ಟೈಕ್ ರೇಟ್‌ನಲ್ಲಿ 1,022 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿವೆ.

ಟಿ-20ಐನಲ್ಲಿ 100 ವಿಕೆಟ್ ಗಳ ಸಾಧನೆ ಮಾಡಿದ ಬುಮ್ರಾ!

ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಡೆವಾಲ್ಡ್ ಬ್ರೆವಿಸ್ ಅವರನ್ನು 22 ರನ್‌ಗಳಿಗೆ ಔಟ್ ಮಾಡುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. ಅರ್ಶೀಪ್ ಸಿಂಗ್ ನಂತರ ಟಿ20ಐನಲ್ಲಿ 100 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯದಲ್ಲಿ ಬುಮ್ರಾ ಮೂರು ಓವರ್ ಬೌಲಿಂಗ್ ಮಾಡಿ 17ಕ್ಕೆ 2 ವಿಕೆಟ್ ಪಡೆದರು. ಒಟ್ಟಾರೆಯಾಗಿ 81 T201 ಪಂದ್ಯಗಳನ್ನು ಆಡಿರುವ ಬುಮ್ರಾ 17.92 ಸರಾಸರಿ, 6.35 ರ ಎಕಾನಮಿಯಲ್ಲಿ 101 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿ20ಐನಲ್ಲಿ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್ ಕೀಪರ್‌ ಜಿತೇಶ್

ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮೊದಲ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಪಡೆದು ಸ್ಟಂಪ್‌ಗಳ ಹಿಂದೆ ಉತ್ತಮ ಪ್ರದರ್ಶನ ನೀಡಿದರು. ಈ ಪ್ರದರ್ಶನದೊಂದಿಗೆ, ಅವರು ಟಿ20ಐನಲ್ಲಿ ಅತಿ ಹೆಚ್ಚು ಔಟ್ ಮಾಡಿದ ಭಾರತೀಯ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನಕ್ಕೇರಿದರು, 2018 ರಲ್ಲಿ ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಔಟ್ಗಳೊಂದಿಗೆ ಎಂಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. 2022 ರಲ್ಲಿ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಔಟ್ ಗಳಲ್ಲಿ ಭಾಗಿಯಾದ ದಿನೇಶ್ ಕಾರ್ತಿಕ್ ಅವರ ಸಾಲಿಗೆ ಜಿತೇಶ್ ಈಗ ಸೇರ್ಪಡೆಯಾಗಿದ್ದಾರೆ.

ಹಾರ್ದಿಕ್ ಪಾಂಡ್ಯ 100 ಟಿ20ಐ ಸಿಕ್ಸರ್‌ ಗಳ ಸಾಧನೆ

ಹಾರ್ದಿಕ್ ಪಾಂಡ್ಯ ಅಜೇಯ 59 ರನ್ ಗಳಿಸುವ ಮೂಲಕ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅವರ ಒಟ್ಟಾರೆ ವ್ಯತ್ತಿಜೀವನದ ಸಿಕ್ಸರ್‌ಗಳ ಸಂಖ್ಯೆಯನ್ನು 100ಕ್ಕೆ ಏರಿಸಿದರು. ಇದರೊಂದಿಗೆ, ಈ ಮೈಲಿಗಲ್ಲು ತಲುಪಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಶರ್ಮಾ ಪ್ರಸ್ತುತ 205 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 155 ಸಿಕ್ಸಗರ್‌ಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 124 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಟಿ20ಐಗಳಿಂದ ನಿವೃತ್ತರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಅತ್ಯಂತ ಕಡಿಮೆ T201 ಸ್ಕೋರ್ ಗೆ ಆಲೌಟ್

176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 74 ರನ್‌ಗಳಿಗೆ ಆಲೌಟ್ ಆಗಿ 101 ರನ್‌ಗಳ ಸೋಲನ್ನು ಅನುಭವಿಸಿತು. ಇದು ಟಿ20ಐಗಳಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತವಾಗಿತ್ತು. 2022 ರ ಜೂನ್ 17 ರಂದು ರಾಜ್‌ಕೋಟ್‌ನಲ್ಲಿ ಮೆನ್ ಇನ್ ಬ್ಲೂ ವಿರುದ್ಧ 87 ರನ್‌ಗಳಿಗೆ ಆಲೌಟ್ ಆದಾಗ ಅವರ ಹಿಂದಿನ ಕನಿಷ್ಠ ಮೊತ್ತವಾಗಿತ್ತು.

Shantha Kumari