ಜೈಲಿನಲ್ಲಿದ್ದುಕೊಂಡೇ ಅದೃಷ್ಟ ಪರೀಕ್ಷೆಗಿಳಿದ ದಾಸ! – ಡೆವಿಲ್‌ ಸಿನಿಮಾಗೆ ರಿಷಬ್‌ ಶೆಟ್ಟಿ ವಿಶ್!‌  

ಜೈಲಿನಲ್ಲಿದ್ದುಕೊಂಡೇ ಅದೃಷ್ಟ ಪರೀಕ್ಷೆಗಿಳಿದ ದಾಸ! – ಡೆವಿಲ್‌ ಸಿನಿಮಾಗೆ ರಿಷಬ್‌ ಶೆಟ್ಟಿ ವಿಶ್!‌  

ನಟ ದರ್ಶನ್‌ ಜೈಲಿನಲ್ಲಿದ್ರೆ, ಇತ್ತ ಅವರ ಬಹುನಿರೀಕ್ಷಿತ ಡೆವಿಲ್‌ ಸಿನಿಮಾ ರಿಲೀಸ್‌ ಆಗ್ತಿದೆ. ದಾಸನ ಸಿನಿಮಾ ರಿಲೀಸ್‌ ಆಗ್ತಿರೋ ಖುಷಿ ಒಂದ್ಕಡೆಯಾದ್ರೆ, ಮತ್ತೊಂದು ಕಡೆ ದರ್ಶನ್‌ ಜೈಲಿನಲ್ಲಿರೋದು ಡಿಬಾಸ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದಾಸ ಜೈಲಿನಲ್ಲಿ ಇದ್ರೆ ಏನಂತೆ.. ಸಿನಿಮಾವನ್ನ ನಾವು ಗೆಲ್ಲಿಸ್ತೀವಿ ಎಂದು ದರ್ಶನ್‌ ಸ್ನೇಹಿತರು, ಫ್ಯಾನ್ಸ್‌ ಪಣತೊಟ್ಟಿದ್ದಾರೆ. ಇದೀಗ ಡೆವಿಲ್‌ಗೆ ಡಿವೈನ್‌ ಸ್ಟಾರ್‌ ವಿಶ್‌ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ – UNESCO ಪಟ್ಟಿಗೆ ಸೇರಿದ ಬೆಳಕಿನ ಹಬ್ಬ

ದರ್ಶನ್‌ ಅಭಿನಯದ ಡೆವಿಲ್ ಕ್ರೇಜ್‌ ಸಿಕ್ಕಾಪಟ್ಟೆ ಇದೆ. ದರ್ಶನ್‌ ಜೈಲಿನಿಂದ ಹೊರಗೆ ಇರ್ತಿದ್ರೆ, ಫ್ಯಾನ್ಸ್‌ ಸೆಲೆಬ್ರೇಷನ್‌ ಬೇರೆ ಲೆವೆಲ್‌ನಲ್ಲೇ ಇರ್ತಿತ್ತು. ಇದೀಗ ಕಡೆಗೂ ಫ್ಯಾನ್ಸ್‌ ಕಾಯ್ತಿದ್ದ ಸಿನಿಮಾ ನಾಳೆ ತೆರೆಗೆ ಬರಲಿದೆ. ಡೆವಿಲ್‌ ಸಿನಿಮಾ 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗ್ತಿದೆ. ಇದೀಗ ದರ್ಶನ್‌ ಸಿನಿಮಾಗೆ ರಿಷಭ್‌ ಶೆಟ್ಟಿ ವಿಶ್‌ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿರುವ ರಿಷಬ್‌ ಶೆಟ್ಟಿ, ಬ್ಲಾಕ್​​ಬಸ್ಟರ್ ರಿಲೀಸ್​ಗೆ ದರ್ಶನ್ ಸರ್ ಹಾಗೂ ಡೆವಿಲ್ ಟೀಮ್​ಗೆ ಶುಭಾಶಯಗಳು ಎಂದು ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ. ಈ ವೇಳೆ ಡೆವಿಲ್ ಸಿನಿಮಾದ ಪೋಸ್ಟರ್ ಕೂಡಾ ಅವರು ಶೇರ್ ಮಾಡಿದ್ದಾರೆ. ಜೊತೆಗೆ ಅಜನೀಶ್ ಲೋಕನಾಥ್ ಅವರನ್ನು ಕೂಡ ರಿಷಬ್ ಟ್ಯಾಗ್ ಮಾಡಿದ್ದಾರೆ.

ಇನ್ನು ಅಜನೀಶ್‌ ಲೋಕನಾಥ್‌ ಜೊತೆ ರಿಷಬ್​ಗೆ ಒಳ್ಳೆಯ ಬಾಂಧವ್ಯ ಇದೆ. ಕಾಂತಾರ  ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಡೆವಿಲ್  ಸಿನಿಮಾಗೆ ವಿಶ್ ಮಾಡಲು ಇದು ಕೂಡ ಕಾರಣ.

Shwetha M