ಭಾರತದ ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ – UNESCO ಪಟ್ಟಿಗೆ ಸೇರಿದ ಬೆಳಕಿನ ಹಬ್ಬ

ಭಾರತದ ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ – UNESCO ಪಟ್ಟಿಗೆ ಸೇರಿದ ಬೆಳಕಿನ ಹಬ್ಬ

ಬೆಳಕಿನ ಹಬ್ಬ ದೀಪಾವಳಿ. ಭಾರತೀಯರ ಸಂಪ್ರದಾಯದ ಪ್ರತೀಕ, ಭಾರತೀಯರ ಸಂಭ್ರಮದ ಪ್ರತೀಕ ಈ ದೀಪಾವಳಿ. ಇದೀಗ ದೀಪಾವಳಿ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರೆತಿದೆ.

ಇದನ್ನೂ ಓದಿ:ಮದುವೆ ಆಗ್ತಿಲ್ಲ, ನಮ್ಮ ಬಾಳಿಗೆ ಮಠವೇ ಗತಿ – ಬ್ಯಾಚುಲರ್ ಮಠ ಕಟ್ಟಿಸಿಕೊಡಿ ಎಂದು ಪಂಚಾಯ್ತಿಗೆ ನೊಂದ ಜೀವಗಳ ಅರ್ಜಿ

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ಪರಂಪರೆ ಪಟ್ಟಿಗೆ ಭಾರತದ ಬೆಳಕಿನ ಹಬ್ಬ ದೀಪಾವಳಿ ಸೇರ್ಪಡೆಗೊಂಡಿದೆ. ದೀಪಾವಳಿಯನ್ನು ಯುನೆಸ್ಕೋದ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗಿದೆ. ಡಿಸೆಂಬರ್ 10 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಯುನೆಸ್ಕೋದ ಅಂತರರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಯುನೆಸ್ಕೋ ತನ್ನ ನಿರ್ಧಾರದಲ್ಲಿ ದೀಪಾವಳಿಯು ಭರವಸೆ, ನವೀಕರಣ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾಕಾರಗೊಳಿಸುತ್ತದೆ ಎಂದು ಹೇಳಿದೆ. ದೀಪ ತಯಾರಿಕೆ, ರಂಗೋಲಿ ರಚನೆ, ಹಬ್ಬದ ವಿಶೇಷ ಆಹಾರಗಳು, ಸಮುದಾಯ ಆಚರಣೆಗಳು ಸೇರಿದಂತೆ ಕಲಾತ್ಮಕ ಮತ್ತು ಕರಕುಶಲ ಸಂಪ್ರದಾಯಗಳನ್ನು ಎತ್ತಿ ತೋರಿಸಿದೆ. ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದಂತೆ ಲಕ್ಷಾಂತರ ಧರ್ಮೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಇದು ಜಾಗತಿಕ ಮಹತ್ವದ ಹಂಚಿಕೆಯ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ ಎಂದು ಯುನೆಸ್ಕೋ ಗಮನಿಸಿದೆ.

ಯುನೆಸ್ಕೋದ ಈ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ. ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಈ ಮನ್ನಣೆಯಿಂದ ರೋಮಾಂಚನಗೊಂಡಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಮಗೆ ದೀಪಾವಳಿ ಹಬ್ಬ, ನಮ್ಮ ಸಂಸ್ಕೃತಿ ಮತ್ತು ನೀತಿಗೆ ಬಹಳ ನಿಕಟ ಸಂಬಂಧ ಹೊಂದಿದೆ. ಇದು ನಮ್ಮ ನಾಗರಿಕತೆಯ ಆತ್ಮ. ಇದು ಜ್ಞಾನೋದಯ ಮತ್ತು ಸದಾಚಾರವನ್ನು ನಿರೂಪಿಸುತ್ತದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

Sulekha