ತಾವೇ ತೋಡಿದ ಗುಂಡಿಯಲ್ಲಿ ಬಿದ್ದ ಬುರುಡೆ ಗ್ಯಾಂಗ್! – 6 ಜನರ ಪಿತೂರಿ.. ಕೇಸ್‌ಗೆ ಮೇಜರ್‌ ಟ್ವಿಸ್ಟ್!‌  

ತಾವೇ ತೋಡಿದ ಗುಂಡಿಯಲ್ಲಿ ಬಿದ್ದ ಬುರುಡೆ ಗ್ಯಾಂಗ್! – 6 ಜನರ ಪಿತೂರಿ.. ಕೇಸ್‌ಗೆ ಮೇಜರ್‌ ಟ್ವಿಸ್ಟ್!‌  

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದಿದ್ದ ಚಿನ್ನಯ್ಯನ ಹಿಂದಿರುವ ಗ್ಯಾಂಗ್​ನ ಅಸಲಿ ಮುಖವಾಡ ಕಳಚಿದೆ. ತಾವೇ ತೋಡಿಕೊಂಡ ಗುಂಡಿಯಲ್ಲಿ ಬುರುಡೆ ಗ್ಯಾಂಗ್ ಬಿದ್ದಿದೆ. ಇದೀಗ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿದೆ. ಹಣದ ಆಮಿಷದಿಂದ ಚಿನ್ನಯ್ಯ ದೂರು ನೀಡಿದ್ದಾನೆ ಎಂಬ ವಿಚಾರ ರಿವೀಲ್‌ ಆಗಿದೆ.

ಇದನ್ನೂ ಓದಿ: ಸೆರೆವಾಸದಲ್ಲಿರುವ ದಾಸನಿಗೆ ಟಿವಿ ಭಾಗ್ಯ! – ದರ್ಶನ್‌ಗಾಗಿ ಹೊಸ ಟಿವಿ ಖರೀದಿಸಿದ ಜೈಲಾಧಿಕಾರಿಗಳು!

ಕಳೆದ ಕೆಲ ತಿಂಗಳ ಹಿಂದೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ತಬುರುಡೆ ಹಿಡಿದುಕೊಂಡು ಬಂದು ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿದ್ದ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿತ್ತು. ಇದೀಗ ಪ್ರಕರಣ ತನಿಖೆ ಪೂರ್ಣಗೊಂಡಿದ್ದು, ಎಸ್ಐಟಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. 3,923 ಪುಟಗಳ ಪ್ರಾಥಮಿಕ ವರದಿಯನ್ನು ಬೆಳ್ತಂಗಡಿಯ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಕಳೆದ ನವೆಂಬರ್ 21ರಂದು ಎಸ್ಐಟಿ ವರದಿ ಸಲ್ಲಿಸಿದ್ದು, ಒಟ್ಟು 6 ಜನರ ವಿರುದ್ಧ ಷಡ್ಯಂತ್ರ ಆರೋಪ ಮಾಡಲಾಗಿದೆ. ಹಣದ ಆಮಿಷದಿಂದ ಮಾಸ್ಕ್‌ ಮ್ಯಾನ್ ಚಿನ್ನಯ್ಯ ಸುಳ್ಳು ದೂರು ನೀಡಿರುವುದು ಸಾಬೀತಾಗಿದೆ. ಈ ಮೂಲಕ ತಾವು ತೋಡಿರುವ ಗುಂಡಿಗೆ ಬುರುಡೆ ಗ್ಯಾಂಗ್‌ ಬಿದ್ದಿದೆ.

ವರದಿಯಲ್ಲಿ ಏನೇನಿದೆ?

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಹಾಗೂ ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ದೂರುದಾರ ಚಿನ್ನಯ್ಯ ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳಿದ್ದಾನೆ. ಹಣವನ್ನು ಪಡೆದು ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಅಪರಿಚಿತ ಶವ ಹೂತಿದ್ದೇನೆಂದು ಸುಳ್ಳು ಹೇಳಿಸಿ ಆರೋಪಿಗಳು ವಿಡಿಯೋ ರೆಕಾರ್ಡ್‌ ಮಾಡಿದ್ದರು.

ವಿಠಲ ಗೌಡನಿಗೆ ಚಿನ್ನಯ್ಯ ಮೊದಲಿನಿಂದಲೂ ಪರಿಚಯ ಹೊಂದಿದ್ದ. ಈ ಪರಿಚಯದ ಆಧಾರದ ಮೇಲೆ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲ ಗೌಡ ಕರೆದುಕೊಂಡು ಹೋಗಿ ಒಳಸಂಚು ನಡೆಸಲಾಗಿದೆ. ಈ ಸಂಚಿನ ಸಭೆಯಲ್ಲಿ ಗಿರೀಶ್‌ ಮಟ್ಟಣ್ಣನವರ್, ಜಯಂತ್, ವಿಠ್ಠಲ ಗೌಡ ಭಾಗಿಯಾಗಿ ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ಮಾಡಲಾಯಿತು.

ಈ ಪ್ಲ್ಯಾನ್‌ ಪ್ರಕಾರ ನೂರಾರು ಶವ ಹೂತಿರುವುದಾಗಿ ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್‌ ಮಾಡಿಸಲಾಗಿತ್ತು. ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನಂತರ ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು. ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಚಿನ್ನಯ್ಯ ಸುಳ್ಳು ಹೇಳಿದ್ದಾನೆ. ತಲೆ ಬುರುಡೆಯೊಂದನ್ನು ತಂದು ತಾನೇ ಹೂತಿದ್ದ ತಲೆ ಬುರುಡೆ ಎಂದು ಅಸತ್ಯ ನುಡಿದಿದ್ದಾನೆ. ಹಣದ ಆಮಿಷ ಹಾಗೂ ಬೆದರಿಕೆಗೆ ಒಳಪಟ್ಟು ಅಪರಿಚಿತ ಶವ ಅದರಲ್ಲೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಶವಗಳನ್ನು ಹೂತಿರೋದಾಗಿ ಸುಳ್ಳು ಹೇಳಿದ್ದಾನೆ.

ಸುಳ್ಳು ದೂರು ನೀಡಿದ್ದು ಅಲ್ಲದೇ ನ್ಯಾಯಾಧೀಶರ ಮುಂದೆಯೂ ಕಥೆ ಕಟ್ಟಿದ್ದಾನೆ. ಚಿನ್ನಯ್ಯ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಕಾರಣಕ್ಕೆ ಚಿನ್ನಯ್ಯನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನಕ್ಕೊಳಪಡಿಸಲಾಗಿದೆ.

Shwetha M