ಸೆರೆವಾಸದಲ್ಲಿರುವ ದಾಸನಿಗೆ ಟಿವಿ ಭಾಗ್ಯ! – ದರ್ಶನ್‌ಗಾಗಿ ಹೊಸ ಟಿವಿ ಖರೀದಿಸಿದ ಜೈಲಾಧಿಕಾರಿಗಳು!

ಅರಮನೆಯಲ್ಲಿ ಜೀವನ ಮಾಡ್ತಿದ್ದ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಸದ್ಯಕ್ಕಂತೂ ರಿಲೀಫ್ ಸಿಗೋ ಹಾಗೆ ಕಾಣ್ತಿಲ್ಲ. ಜೈಲಿನ ಹೊರಗೆ ಇದ್ರೆ ನೆಮ್ಮದಿಯಾಗ್ ಇರಬೇಕ್ ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ದಿನ ನಿತ್ಯ ನರಕ ದರ್ಶನವಾಗುತ್ತಿದೆ. ರಾಜಾತಿಥ್ಯ ನೀಡಿರುವ ವಿಡಿಯೋ ವೈರಲ್ ಆಗ್ತಿದ್ದಂತೆ ದರ್ಶನ್‌ನ ಸಾಮಾನ್ಯ ಖೈದಿಯಂತೆ ನಡೆಸಿಕೊಳ್ಳಲಾಗ್ತಿದೆ. ಇವೆಲ್ಲದ್ರ ಮಧ್ಯೆ ದಾಸನಿಗೆ ಕೊಂಚ ರಿಲೀಫ್ ಸಿಕ್ಕಿದೆ. ದರ್ಶನ್‌ಗೆ ಕಡೆಗೂ ಟಿವಿ ಭಾಗ್ಯ ಸಿಕ್ಕಿದೆ.
ಇದನ್ನೂ ಓದಿ: ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಪೊಲೀಸರನ್ನೇ ಯಾಮಾರಿಸಿದ್ರಾ ನಟ ಧನ್ವೀರ್?
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಆಂಡ್ ಟೀಂ ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ, ಜೈಲಿನಲ್ಲಿ ಇರಲು ಆಗುತ್ತಿಲ್ಲ, ದಯವಿಟ್ಟು ಟಿ.ವಿ ಕೊಡಿಸಿ ಎಂದುಕೋರ್ಟ್ ಜಡ್ಜ್ ಬಳಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೋರ್ಟ್ ಜಡ್ಜ್, ಆರೋಪಿ ದರ್ಶನ್ ಇರುವ ಬ್ಯಾರಕ್‌ಗೆ ಟಿ.ವಿ ನೀಡುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕೋರ್ಟ್ ಆದೇಶದ ಪ್ರತಿ ತಲುಪಿಲ್ಲ ಎಂದು ಇಷ್ಟು ದಿನ ಜೈಲಾಧಿಕಾರಿಗಳು ಸುಮ್ಮನಿದ್ದರು. ಕಡೆಗೂ ಈಗ ದರ್ಶನ್ ಬ್ಯಾರಕ್‌ಗೆ ಟಿವಿ ಫಿಕ್ಸ್ ಮಾಡಲು ನಿರ್ಧರಿಸಿದ್ದಾರೆ.
ಹೌದು, ಕೋರ್ಟ್ ಆದೇಶ ಪ್ರತಿ ಬಂದ ಕೂಡಲೇ ದರ್ಶನ್ ಬ್ಯಾರಕ್‌ಗೆ ಟಿವಿ ಫಿಕ್ಸ್ ಮಾಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದರು. ಇದೀಗ ಕೋರ್ಟ್ ಆದೇಶ ಪ್ರತಿ ತಲುಪಿದೆ ಎನ್ನಲಾಗ್ತಿದೆ. ಜೈಲಾಧಿಕಾರಿಗಳು ನಿನ್ನೆ ಟಿವಿ ಬುಕ್ ಮಾಡಿದ್ದು, ಇಂದು ಸಿಬ್ಬಂದಿ ದರ್ಶನ್ ಬ್ಯಾರಕ್ ಗೆ ಟಿವಿ ಫಿಕ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಟಿವಿ ಫಿಕ್ಸ್ ಆದ್ರೂ ಸೀಮಿತ ಚಾನಲ್ ಗಳು ಮಾತ್ರ ನೋಡಲು ಅವಕಾಶ ಸಿಗಲಿದೆ ಎನ್ನಲಾಗಿದೆ.

ನೋಡಿರಿ

