ಮದುವೆ ಆಗ್ತಿಲ್ಲ, ನಮ್ಮ ಬಾಳಿಗೆ ಮಠವೇ ಗತಿ – ಬ್ಯಾಚುಲರ್ ಮಠ ಕಟ್ಟಿಸಿಕೊಡಿ ಎಂದು ಪಂಚಾಯ್ತಿಗೆ ನೊಂದ ಜೀವಗಳ ಅರ್ಜಿ

ನಮ್ಮ ದೇಶವ ಯುವಕರ ದೊಡ್ಡ ಸಮಸ್ಯೆ ಅಂದ್ರೆ ಮದುವೆ. ಈ ಸಮಸ್ಯೆ ಯಾವ ಸರ್ಕಾರ ಬಂದ್ರೂ ಬಗೆಹರಿಯಲ್ಲ ಅನ್ಸುತ್ತೆ.. ಮೊದಲು ಹುಡುಗರು ಹುಡುಗಿಯನ್ನ ಒಪ್ಪುತ್ತಿರಲಿಲ್ಲ. ಹೇಗಾದ್ರೂ ಹುಡುಗಿಗೆ ಮದುವೆ ಮಾಡಿದ್ರೆ ಸಾಕು ಅಂತ ಅಂದುಕೊಳ್ಳುತ್ತಿದ್ದರು ಹೆತ್ತವರು . ಆದ್ರೆ ಈಗ ಕಾಲ ಚೇಂಜ್ ಆಗಿದೆ. ಈಗ ಹುಡುಗರು ಯಾರಾದ್ರೂ ಹುಡುಗಿ ಸಿಕ್ಕಿದ್ರೆ ಸಾಕು, ಮದುವೆ ಅಂತ ಆದ್ರೆ ಸಾಕು ಅಂತಿದ್ದಾರೆ. ಹುಡುಗನನ್ನ ಹೆತ್ತವರು ಕೂಡ ನಮ್ಮ ಮಗನಿಗೆ ಹೇಗಾದ್ರೂ ಮದುವೆ ಆದ್ರೂ ಸಾಕು ಅಂತಿದ್ದಾರೆ. ಹುಡುಗರಿಗೆ ಡಿಮ್ಯಾಂಡ್ ಕಮ್ಮಿಯಾಗಿದೆ. ಆದ್ರೆ ಹುಡುಗಿಯರಿಗೆ ಸಖತ್ ಡಿಮ್ಯಾಂಡ್ ಉಂಟು. ಮೊದಲು ಹುಡುಗಿ ವರದಕ್ಷಿಣೆ ಕೊಟ್ಟು ಮದುವೆಯಾಗಬೇಕಿತ್ತು. ಆದ್ರೆ ಈಗ ವಧುದಕ್ಷಿಣೆ ಕೊಟ್ರು ಹುಡುಗಿ ಸಿಗುತ್ತಿಲ್ಲ. ಹುಡುಗಿಯರು ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡ್ತಿದ್ದಾರೆ. ಹುಡುಗ ಚೆನ್ನಾಗಿರಬೇಕು. ಸಿಟಿಯಲ್ಲಿ ಸೆಟಲ್ ಆಗಿರಬೇಕು.. ಹುಡುಗನ ಮನೆ ಕಡೆ ಆಸ್ತಿ ಇರಬೇಕು ಅಂತ ಸಾಕಷ್ಟು ಡಿಮ್ಯಾಂಡ್ ಇಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ಹುಡುಗರು 35 ವರ್ಷ ಆದ್ರೂ ಮದುವೆಯಾಗದೇ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ರೈತರ ಮಕ್ಕಳನ್ನ ಹುಡುಗಿಯರು ಕಣ್ಣೆತ್ತು ಕೂಡ ನೋಡುತ್ತಿಲ್ಲ. ಹಳ್ಳಿ ಹುಡುಗರು ಬೇಡ್ವೇ ಬೇಡಾ ಅಂತಿದ್ದಾರೆ. ಒಂದು ಹಳ್ಳಿಗೆ ಹೋದ್ರೆ ಅಲ್ಲಿ 10 ರಿಂದ 15 ಜನ 35 ವರ್ಷದ ಹುಡುಗರು ಸಿಗ್ತಾರೆ. ನಮ್ಗೆ ಮದುವೆ ಆಗುತ್ತಿಲ್ಲ ಹುಡುಗಿ ಇದ್ರೆ ಹೇಳಿ ಅಂತಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಪೊಲೀಸರನ್ನೇ ಯಾಮಾರಿಸಿದ್ರಾ ನಟ ಧನ್ವೀರ್?
ಹೀಗೆ ಮದುವೆ ಆಗುವುದ್ದಕ್ಕೆ ಹೆಣ್ಣು ಸಿಗದೆ ಮಂಡ್ಯದಲ್ಲಿ ಹುಡುಗರು ಕಂಗೆಟ್ಟು ಹೋಗಿದ್ದಾರೆ.. ಹೀಗಾಗಿ ನಮ್ಗೆ ಮದುವೆ ಅಂತೂ ಆಗಲ್ಲ, ನಮ್ಮ ಗ್ರಾಮದಲ್ಲಿ ಒಂದು ಮಠವನ್ನ ಕಟ್ಟಿಕೊಡಿ ಎಂದು ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದ್ದಾರೆ.ಕಾದು ಕಾದು ವಯಸ್ಸು ಹೆಚ್ಚುತ್ತಿದೆ, ಮದುವೇನೂ ಆಗ್ತಿಲ್ಲ ಎಂದು ಮಂಡ್ಯ ಜಿಲ್ಲೆ ಮರಳಿಗ ಗ್ರಾಮದ ಯುವಕರು ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ಈ ಗ್ರಾಮದ ಮದುವೆಯಾಗದ ಹುಡುಗರು ಮಠಕ್ಕೆ ಬೇಡಿಕೆ ಇಟ್ಟಿದ್ದಾರೆ.
ಗ್ರಾಮದಲ್ಲಿ ಮದುವೆಯಾಗದ 30ಕ್ಕೂ ಹೆಚ್ಚು ಯುವಕರು ಪ್ರಸನ್ನ ಎಂಬ ಯುವಕನ ನೇತೃತ್ವದಲ್ಲಿ ಮಠಬೇಕು ಅಂತ ಪಂಚಾಯ್ತಿಗೆ ಅರ್ಜಿ ಬರೆದು ಸಲ್ಲಿಸಿದ್ದಾರೆ. ಈ ಯುವಕರ ಈ ವಿಚಿತ್ರ ಅರ್ಜಿ ಕಂಡು ಗ್ರಾಮ ಪಂಚಾಯ್ತಿಯ ಸದಸ್ಯರು ಹಾಗು ಅಧಿಕಾರಿ ಶಾಕ್ ಆಗಿದ್ದಾರೆ. ಹಾಗೇ ಯುವಕರು ನೀಡಿರೋ ಈ ಮನವಿಯನ್ನು ತಹಶೀಲ್ದಾರ್ ಗಮನಕ್ಕೆ ತರುವುದಾಗಿ ಪಂಚಾಯ್ತಿ PDO ತಿಳಿಸಿದ್ದಾರೆ. ಹಾಗೇ ನಮ್ಮ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಅಂತ ಈ ಯುವಕರ ಪೋಷಕರು ಕೂಡ ಕಣ್ಣೀರು ಹಾಕುತ್ತಿದ್ದಾರೆ.

ನೋಡಿರಿ

