ಸರಣಿ ಗೆದ್ದ KL ಈಗ HERO – ರಾಹುಲ್ ಜೊತೆ RO-KO ರಾಕ್!
ODI ಕಂಪ್ಲೀಟ್ ಕ್ಯಾಪ್ಟನ್ಸಿ ಡಿಮ್ಯಾಂಡ್

ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದಿರೋ ಭಾರತ ಈಗ ಟಿ-20ಐ ಸಿರೀಸ್ನಲ್ಲಿ ಬ್ಯುಸಿಯಾಗಿದೆ. ಆದ್ರೆ ಏಕದಿನ ಸರಣಿಯ ಫೀವರ್ ಇನ್ನೂ ಹಾಗೇ ಇದೆ. ಅದಕ್ಕೆ ಕಾರಣ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರ್ಫಾಮೆನ್ಸ್.. ಟೀಂ ಇಂಡಿಯಾದ ಗೆಲುವು. ಕ್ಯಾಪ್ಟನ್ ಕೆಎಲ್ ರಾಹುಲ್ ಜರ್ನಿ, ಆಟಗಾರರ ಜೋಶ್ ಹೀಗೆ ಎಲ್ಲವೂ. ಅದ್ರಲ್ಲೂ ಈ ಸಿರೀಸ್ ಆದ್ಮೇಲೆ ರಾಹುಲ್ ಬಗೆಗಿನ ಟ್ರೆಂಡ್ ಜಾಸ್ತಿಯಾಗಿದ್ದು ಸಂಪೂರ್ಣ ನಾಯಕತ್ವ ನೀಡಿ ಅನ್ನೋ ಕೂಗು ಎದ್ದಿದೆ.
ಇದನ್ನೂ ಓದಿ : ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ – 50ಕ್ಕೂ ಹೆಚ್ಚು ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ!
ಕೆಎಲ್ ರಾಹುಲ್ ಅಂದ್ರೆ ಬರೀ ಕನ್ನಡಿಗರ ಪಾಲಿಗಷ್ಟೇ ಅಲ್ಲ. ಟೀಂ ಇಂಡಿಯಾ ಅಭಿಮಾನಿಗಳೆಲ್ರಿಗೂ ಫೇವರೆಟ್ ಪ್ಲೇಯರ್. ಯಾಕಂದ್ರೆ ಒಬ್ಬ ಕಂಪ್ಲೀಟ್ ಆಲ್ರೌಂಡರ್ ಆತ. ವಿಕೆಟ್ ಕೀಪರ್, ಓಪನರ್, ಒನ್ ಡೌನ್ ಬ್ಯಾಟರ್, ಮಿಡಲ್ ಆರ್ಡರ್, ಫಿನಿಶರ್, ಕ್ಯಾಪ್ಟನ್ ಹೀಗೆ ತಂಡದ ಎಲ್ಲಾ ವಿಭಾಗಗಳಲ್ಲೂ ತನಗೆ ಕೊಟ್ಟಿರೋ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸೋ ಪ್ಲೇಯರ್. ಅದೆಲ್ಲಕ್ಕಿಂತ ಜಾಸ್ತಿ ಏನಂದ್ರೆ ಒಬ್ಬ ಆಟಗಾರನಾಗಿಯೂ ತಾನು ಬೆಸ್ಟ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಫ್ಯಾನ್ಸ್ ಜೊತೆ ಕೋಪ್ಲೇಯರ್ಸ್ ಮನಸ್ಸನ್ನೂ ಗೆದ್ದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಭಾರತ 2 ಪಂದ್ಯಗಳನ್ನ ಗೆದ್ದು ಕೈವಶ ಮಾಡಿಕೊಂಡಿದೆ. ಹಾಗೇ ಈ ಸರಣಿಯಲ್ಲಿ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ 2 ಶತಕ, ರುತುರಾಜ್ ಗಾಯಕ್ವಾಡ್ ಒಂದು ಶತಕ ಹಾಗೇ ಯಸಸ್ವಿ ಜೈಸ್ವಾಲ್ ಒಂದು ಶತಕ ಸಿಡಿಸಿದ್ದಾರೆ. ಒಂದೇ ಸರಣಿಯಲ್ಲಿ 4 ಶತಕ ಬಂದಿದೆ. ಇನ್ನು ರಾಹುಲ್ ಮೊದಲ ಪಂದ್ಯದಲ್ಲಿ 60 ರನ್ಗಳನ್ನ ಕಲೆ ಹಾಕಿದ್ರೆ ಎರಡನೇ ಪಂದ್ಯದಲ್ಲಿ 66 ರನ್ ಗಳಿಸಿದರು. ಆಟಗಾರನಾಗಿಯೂ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ರು. ಹೀಗೆ ರಾಹುಲ್ ಪ್ರದರ್ಶನವೇ ಅಭಿಮಾನಿಗಳ ಮನ ಗೆದ್ದಿದೆ. ಹೇಗೆ ಅನ್ನೋದನ್ನ ನೋಡ್ತಾ ಹೋಗೋಣ.
ಮನಗೆದ್ದ ರಾಹುಲ್!
ಬೌಲರ್ ಗಳು ಹಳಿ ತಪ್ಪಿದಾಗ ಕ್ಯಾಪ್ಟನ್ ಆಗಿ ಸಲಹೆ
ವಿಕೆಟ್ ಕೀಪರ್ ಬ್ಯಾಟರ್ ಆಗಿ ಅದ್ಭುತ ಫೀಲ್ಡಿಂಗ್
ಇನ್ ಎಕ್ಸ್ ಪೀರಿಯನ್ಸ್ ಬೌಲರ್ಸ್ ಇಟ್ಕೊಂಡು ವಿನ್
ಬ್ಯಾಟರ್ ಆಗಿ ಮೊದಲ & ಎರಡನೇ ಪಂದ್ಯದಲ್ಲಿ ಅಬ್ಬರ
ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಕಂಫರ್ಟಬಲ್
ತಂಡದ ಎಲ್ಲಾ ಆಟಗಾರರ ಜೊತೆಯೂ ಫ್ರೆಂಡ್ಲಿ ಟಾಕ್
ಹೀಗೆ ರಾಹುಲ್ ಕ್ಯಾಪ್ಟನ್ಸಿಯಡಿ ಎಲ್ರೂ ಕೂಡ ಚೆನ್ನಾಗಿ ಪರ್ಫಾಮ್ ಮಾಡಿದ್ರು. ಹೀಗಾಗಿ ಮುಂದಿನ ವಿಶ್ವಕಪ್ವರೆಗೂ ರಾಹುಲ್ರೇ ಸಂಪೂರ್ಣ ನಾಯಕತ್ವ ನೀಡಿ ಅಂತಾ ಫ್ಯಾನ್ಸ್ ಕೂಡ ಪೋಸ್ಟ್ಗಳನ್ನ ಹಾಕ್ತಿದ್ದಾರೆ.

ನೋಡಿರಿ

