1 ವರ್ಷ.. 25,760 ಕೋಟಿ ನಷ್ಟ!? – ಇನ್ಮುಂದೆ JIO Hotstar ನಲ್ಲಿ ಕ್ರಿಕೆಟ್ ಪ್ರಸಾರ ಆಗಲ್ವಾ?

1 ವರ್ಷ.. 25,760 ಕೋಟಿ ನಷ್ಟ!? – ಇನ್ಮುಂದೆ JIO Hotstar ನಲ್ಲಿ ಕ್ರಿಕೆಟ್ ಪ್ರಸಾರ ಆಗಲ್ವಾ?

ಕ್ರಿಕೆಟ್ ಅಂದ್ರೆ ಲಾಭ.. ಇಲ್ಲಿ ನಷ್ಟನೇ ಇಲ್ಲ ಅನ್ನೋ ಮಾತಿಗೆ. ಕ್ರಿಕೆಟ್‌ನಲ್ಲಿ ಏನಿದ್ರೂ ಸಾವಿರಾರು ಕೋಟಿ ವ್ಯಾವಹಾರ.. ಒಂದು ಕೋಟಿ ಹಾಕಿ ನೂರು ಕೋಟಿ ಮಾಡ್ತಾರೆ ಅತ ಹೇಳ್ತಾರೆ. ಆದ್ರೆ ಶಾಕಿಂಗ್ ವಿಷ್ಯ ಏನಪ್ಪ ಅಂದ್ರೆ ಈ ಕ್ರಿಕೆಟ್‌ನಲ್ಲೂ ಬಿಗ್ ಲಾಸ್ ಆಗಿದೆ. ಅದು ಅಂಬಾನಿ ಒಡೆತನದ ಜಿಯೋ ಹಾಟ್‌ಸ್ಟಾರ್ ಕಂಪನಿಗೆ. ಅದು ಕೂಡ ಐಸಿಸಿಯಿಂದ.. ಹೌದು ಇದು ನಂಬೋಕೆ ಕಷ್ಟ ಆದ್ರೂ ಕೂಡ ಸತ್ಯ.. ಐಸಿಸಿ ಕ್ರಿಕೆಟ್‌ನ ಪ್ರಸಾರ ಮಾಡಿದ್ರೆ ಸಾವಿರಾರು ಕೋಟಿ ಲಾಭ ಮಾಡಬಹುದು ಅನ್ನೋ ಆಸೆಯಲ್ಲಿದ್ದ ಅಂಬಾನಿ ಒಡೆತನದ ಜಿಯೋ ಹಾಟ್‌ಸ್ಟಾರ್‌ಗೆ ಒಂದೇ ವರ್ಷದದಲ್ಲಿ 20 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಅಂತೆ. ಅದ್ದಕ್ಕಾಗಿಯೇ ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ಐಸಿಸಿಗೆ ಬಿಗ್ ಶಾಕ್ ನೀಡಿದ್ದಾರೆ.

ಐಸಿಸಿ ಆಗಲಿ, ಬಿಸಿಸಿಐನ ಮ್ಯಾಚ್‌ಗಳನ್ನ ನಾವು ಡಿಜಟಲ್‌ನಲ್ಲಿ ನಂ1 ಆಗಿರೋ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡುತ್ತಾ ಎಂಜಾಯ್ ಮಾಡ್ತಾ ಇದ್ವಿ.. ಐಸಿಸಿ ಪಂದ್ಯಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬರ್ತಾ ಇತ್ತು. ಆದ್ರೆ ಈಗ ವೀಕ್ಷಕರಿಗೆ ಜಿಯೋ ಹಾಟ್‌ಸ್ಟಾರ್ ಬಿಗ್ ಶಾಕ್ ಕೊಡುವುದ್ದಕ್ಕೆ ಮುಂದಾಗಿದೆ. ಕೇವಲ ವೀಕ್ಷಕರಿಗೆ ಮಾತ್ರವಲ್ಲ ಐಸಿಸಿಗೂ ಕೂಡ ಅಂಬಾನಿ ಶಾಕ್ ನೀಡಿದ್ದಾರೆ. ಅದು ಕೂಡ ಟಿ20 ವರ್ಡ್‌ಕಪ್ ಹತ್ತಿರ ಬರುವ ಸಮಯದಲ್ಲೇ..  ಟಿ20 ವಿಶ್ವಕಪ್‌ಗೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನೆರಡು ತಿಂಗಳು ಅಂದ್ರೆ 2026 ಫೆಬ್ರವರಿ 7 ರಿಂದ ಮಾರ್ಚ್‌ 7 ರತನಕ ಟಿ20 ವಿಶ್ವಕಪ್‌ ನಡೆಯಲಿದೆ. ಈ ಒಂದು ತಿಂಗಳು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ.. ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಮ್ಯಾಚ್‌ಗಳನ್ನ ನೋಡಿ ಎಂಜಾಯ್ ಮಾಡೋಕೆ ಕ್ರಿಕೆಟ್ ಫ್ಯಾನ್ಸ್ ಕಾಯುತ್ತಿದ್ದಾರೆ. ಆದ್ರೆ ವಿಶ್ವಕಪ್‌ಗೆ ಎರಡು  ತಿಂಗಳು ಬಾಕಿಯಿರುವಾಗಲೇ ಐಸಿಸಿಗೆ ಆಘಾತ ಎದುರಾಗಿದೆ. ಹೌದು  ಐಸಿಸಿ ಟೂರ್ನಿಗಳ ಪಂದ್ಯಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕು ಹೊಂದಿದ್ದ ಜಿಯೋ ಹಾಟ್‌ಸ್ಟಾರ್‌ ಆರ್ಥಿಕ ನಷ್ಟದಿಂದಾಗಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಒಂದು ವೇಳೆ ಸಂಪೂರ್ಣವಾಗಿ ಹಿಂದೆ ಸರಿದ್ರೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಇನ್ಮುಂದೆ ಐಸಿಸಿ ಪಂದ್ಯಗಳು ಪ್ರಸಾರ ಆಗುವುದಿಲ್ಲ.

ರಿಲಯನ್ಸ್‌ ಒಡೆತನದ ಜಿಯೋ ಹಾಟ್‌ಸ್ಟಾರ್‌ ಕಳೆದ ವರ್ಷ ಐಸಿಸಿ ಜತೆ 3 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಕಾರ 2024 ರಿಂದ 27ರವರೆಗೆ ಭಾರತದಲ್ಲಿ ನಡೆಯುವ ಪಂದ್ಯಗಳ ಪ್ರಸಾರಕ್ಕಾಗಿ ಬರೋಬ್ಬರಿ ₹27,047 ಕೋಟಿ ಅಂದ್ರೆ 3 ಬಿಲಿಯನ್‌ ಡಾಲರ್‌ ಗೆ ಡೀಲ್‌ ನಡೆದಿತ್ತು. ಆದರೆ ಇದೀಗ ಆರ್ಥಿಕ ಸಂಕಷ್ಟದ ಕಾರಣದಿಂದ 2 ವರ್ಷಕ್ಕೂ ಮೊದಲೇ ಪ್ರಸಾರದ ಹಕ್ಕನ್ನು ತ್ಯಜಿಸಲು ನಿರ್ಧರಿಸಿದೆ ಅನ್ನೋ ವರದಿಯಾಗಿದೆ.

ಇದನ್ನೂ ಓದಿ: ನೀವು ಗಂಡಸಲ್ವಾ?.. ಏ ಥೂ.. ಕ*ಚಡಾ! – ನಾಮಿನೇಟ್‌ ಮಾಡಿದ ರಜತ್‌ಗೆ ಅಶ್ವಿನಿ ಬೈಯ್ಯೋದು ಹೀಗಾ!?

ಒಂದು ವೇಳೆ ಈ ನ್ಯೂಸ್ ನಿಜವಾಗಿ ಜಿಯೋ ಹಾಟ್‌ಸ್ಟಾರ್‌ ಪ್ರಸಾರ ಹಕ್ಕು ತ್ಯಜಿಸಿದರೆ ಫೆ. 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಹೊಸ ಪಾಲುದಾರರನ್ನು ಐಸಿಸಿ ಹುಡುಕಬೇಕಿದೆ. ಜಿಯೋ ಹಾಟ್‌ಸ್ಟಾರ್‌ಗೆ ಐಸಿಸಿ ಪಂದ್ಯಗಳಿಂದ ಲಾಭ ಬರ್ತಿಲ್ಲ, ನಾವು ಪ್ರಸಾರ ಹಕ್ಕಿನಿಂದ ಹಿಂದೆ ಸರಿಯುವುದಾಗಿ ಐಸಿಸಿಗೆ ತಿಳಿಸಿದಿಯಂತೆ. ಹೀಗಾಗಿ ಐಸಿಸಿ 2026-29ರ ಅವಧಿಗೆ ಭಾರತದಲ್ಲಿ ಮಾಧ್ಯಮ ಹಕ್ಕು ಪಡೆಯುವರಿಗೆ ಹುಡುಕಾಟ ನಡೆಸುತ್ತಿದ್ದು, 21 ಸಾವಿರ ಕೋಟಿಗೆ  ಡೀಲ್‌ಗೆ ಮುಂದಾಗಿದೆ.ಸೋನಿ ಫಿಕ್ಚರ್ಸ್‌ ,  ನೆಟ್‌ ಫ್ಲಿಕ್ಸ್ ಅಮೆಜಾನ್‌ ಪ್ರೈಮ್‌ ನಂತಹ ಆನ್‌ಲೈನ್‌ ವೇದಿಕೆಯತ್ತ ಐಸಿಸಿ ಒಲವು ತೋರಿದೆ. ಆದರೆ ದೊಡ್ಡ ಪ್ರಮಾಣದ ಒಪ್ಪಂದವಾಗಿರುವುದುರಿಂದ ಯಾರೂ ಕೂಡ ಮುಂದೆ ಬರ್ತಿಲ್ಲ.. ಯಾಕಂದ್ರೆ ಜಿಯೋ ಹಾಟ್‌ಸ್ಟಾರ್‌ನವರಿಗೆ ಲಾಭ ಆಗಿಲ್ಲ ಅಂದ್ರೆ ನಮಗೆ ಹೇಗೆ ಲಾಭ ಆಗುತ್ತೆ ಅಂತ ಇತರೆ ಡಿಜಿಟಲ್ ಆ್ಯಪ್‌ಗಳು ಲೆಕ್ಕಾಚಾರ ಹಾಕುತ್ತಿವೆ.

ಜಿಯೋ ಹಾಟ್‌ಸ್ಟಾರ್‌ಗೆ ಬಿಗ್ ಲಾಸ್

ಒಳ್ಳೆಯ ಲಾಭ ಮಾಡಬಹುದು ಅಂಕ ಜಿಯೋ ಹಾಟ್‌ಸ್ಟಾರ್‌ ಲೆಕ್ಕಚಾರ ಹಾಕಿ ICCಜೊತೆ ಪ್ರಸಾರ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ವರದಿಗಳ ಪ್ರಕಾರ, 2024ರ ಟಿ20 ವಿಶ್ವಕಪ್‌, 2025ರ ಚಾಂಪಿಯನ್ಸ್‌ ಟ್ರೋಫಿಗಳಿಂದ ಜಿಯೋ ಹಾಟ್‌ಸ್ಟಾರ್‌ಗೆ ಲಾಭಕ್ಕಿಂತ  ನಷ್ಟವೇ ಹೆಚ್ಚಾಗಿದಿಯಂತೆ.. ಅಂದಾಜಿನ ಪ್ರಕಾರ  ಒಂದೇ ವರ್ಷದಲ್ಲಿ ₹12,319 ಕೋಟಿಯಿಂದ ₹25,760 ಕೋಟಿಗೆ ನಷ್ಟ ಆಗಿದೆ ಅಂತ ಹೇಳಲಾಗ್ತಿದೆ. ಆ ಆ್ಯಪ್‌ ಕಂಪನಿಗಳಿಗೆ ಕ್ರಿಕೆಟ್‌ ಪ್ರಸಾರ ಮಾಡಿದ್ರೆ ದುಡ್ಡು ಬರುವುದು ಅಡ್ವಟೈಸ್ಮೆಂಟ್ ನಿಂದ. ಆದ್ರೆ ಅಡ್ವಟೈಸ್ಮೆಂಟ್ ಕಂಪನಿಗಳು ಹೆಚ್ಚು ಹಣವನ್ನ ಇದ್ರ ಮೇಲೆ ಹೂಡಿಕೆ ಮಾಡಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ  ಕೇಂದ್ರ ಸರ್ಕಾರ ಆನ್‌ಲೈನ್ ಮನಿ ಗೇಮಿಂಗ್‌ ನಿಷೇಧಿಸಿದ್ದರಿಂದ ಜಿಯೋ ಹಾಟ್‌ಸ್ಟಾರ್‌ ಲಾಭಕ್ಕೆ ಬ್ರೇಕ್ ಬಿತ್ತು.. ಆನ್‌ಲೈನ್ ಗೇಮಿಂಗ್ ಕಂಪನಿಗಳು ಕ್ರಿಕೆಟ್‌ನಲ್ಲಿ ಅಡ್ವಟೈಸ್ಮೆಂಟ್ ನೀಡುವುದ್ದಕ್ಕೆ ಸಾವಿರಾರು ಕೋಟಿ ಸುರಿಯುತ್ತಿದ್ದವು. ಆದ್ರೆ ಅದ್ದನ್ನ ನಿಷೇಧ ಮಾಡಿದ್ದಕ್ಕೆ ಜಿಯೋ ಹಾಟ್‌ಸ್ಟಾರ್‌ ಬಿಗ್ ಲಾಸ್ ಆಗಿದೆ ಅಂತನೇ ಹೇಳಬಹುದು.. ಹೀಗಾಗಿ ಮುಂದಿನ ದಿನಗಳಲ್ಲಿ ಐಸಿಸಿ ಪಂದ್ಯಗಳು ಯಾವುದರಲ್ಲಿ ಪ್ರಸಾರ ಆಗುತ್ತೆ ಅನ್ನೋದ್ದನ್ನ ಕಾದು ನೋಡಬೇಕಿದೆ.

Kishor KV