ಅಭಿಷೇಕ್ ಬೆನ್ನು ಬಿದ್ದ PAK ಫ್ಯಾನ್ಸ್ – ಯಂಗ್ ಬ್ಯಾಟರ್ ನಂ.1 TREND
ಭಾರತದಲ್ಲೀಗ ವೈಭವ್ ದೇ ವೈಭವ

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟಿ-20ಐ ಸರಣಿಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಇವತ್ತು ಕಟಕ್ನಲ್ಲಿ ಮೊದಲ ಪಂದ್ಯ ನಡೆಯಲಿದ್ದು ಆಲ್ಮೊಸ್ಟ್ ಭಾರತೀಯರ ಕಣ್ಣೆಲ್ಲಾ ಅಭಿಷೇಕ್ ಶರ್ಮಾ ಮೇಲೇ ಇರುತ್ತೆ. ಅವ್ರ ಬ್ಯಾಟಿಂಗ್ ಖದರ್ ನೋಡೋಕೆ ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿದೆ. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ನಮ್ಮ ಯಂಗ್ಗನ್ ಅಭಿಷೇಕ್ ಶರ್ಮಾ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದ್ದಾರೆ. ಅಲ್ಲಿನ ಸ್ಟಾರ್ ಕ್ರಿಕೆಟರ್ಗಳನ್ನೂ ಹಿಂದಿಕ್ಕಿ ನಂಬರ್ 1 ಪ್ಲೇಸ್ನಲ್ಲಿದ್ದಾರೆ.
ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶಮಿ ಅಬ್ಬರ – ಆಯ್ಕೆ ಸಮತಿಗೆ ಮತ್ತೊಂದು ಬಿಗ್ ಮೆಸೇಜ್ ಕೊಟ್ಟ ವೇಗಿ
ಟೀಮ್ ಇಂಡಿಯಾ ಟಿ-20ಐ ಫಾರ್ಮೆಟ್ನಲ್ಲಿ ಅಭಿಷೇಕ್ ಶರ್ಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಭಾರತದ ಓಪನರ್ ಆಗಿ ಕಣಕ್ಕಿಳಿಯೋ ಲೆಫ್ಟ್ ಹ್ಯಾಂಡ್ ಬ್ಯಾಟರ್ ಸಿಕ್ಸ್, ಫೋರ್ಗಳ ಮೂಲಕವೇ ಎದುರಾಳಿ ಬೌಲರ್ಗಳ ಬೆವರಿಳಿಸ್ತಿದ್ದಾರೆ. ಭಾರತದ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಡ್ತಿರೋ ಅಭಿಷೇಕ್ ಶರ್ಮಾ ಮೇಲೇಯೇ ಎಲ್ಲರ ಕಣ್ಣಿದೆ. ಅಚ್ಚರಿಯ ವಿಚಾರ ಏನಂದ್ರೆ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಗೂಗಲ್ನಲ್ಲಿ ಅಭಿಷೇಕ್ ಶರ್ಮಾರನ್ನೇ ಸರ್ಚ್ ಮಾಡಲಾಗಿದೆ. ಅಂದ್ರೆ 2025ರಲ್ಲಿ ಗೂಗಲ್ನಲ್ಲಿ ಯಾವ್ಯಾವ ದೇಶದಲ್ಲಿ ಈ ವರ್ಷ ಯಾವ ಆಟಗಾರರನ್ನ ಅತೀ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ ಅನ್ನೋ ರಿಪೋರ್ಟ್ ಹೊರ ಬಿದ್ದಿದ್ದು ಪಾಕಿಸ್ತಾನದಲ್ಲಿ ಅಭಿಷೇಕ್ರದ್ದೇ ಹವಾ ಅನ್ನೋದು ಗೊತ್ತಾಗಿದೆ.
ಪಾಕಿಸ್ತಾನಿಗಳ ನಿದ್ದೆಗೆಡಿಸಿದ ಅಭಿಷೇಕ್ ಶರ್ಮಾ!
2025ನೇ ವರ್ಷದಲ್ಲಿ ಪಾಕಿಸ್ತಾನದಲ್ಲಿ ಗೂಗಲ್ನಲ್ಲಿ ಹೆಚ್ಚು ಟ್ರೆಂಡಿಂಗ್ ಆದ ಆಟಗಾರರ ಲಿಸ್ಟ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ನಂಬರ್-1 ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ರಿಝ್ವಾನ್ನಂತಹ ಆಟಗಾರರೆನ್ನಾ ಸೈಡ್ ಹೊಡ್ದು ಅಭಿಷೇಕ್ ಶರ್ಮಾ ಪಾಕಿಸ್ತಾನದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಪಾಕಿಸ್ತಾನದ ಗೂಗಲ್ ಸರ್ಚ್ ಟ್ರೆಂಡಿಂಗ್ ಪಟ್ಟಿಯ ಟಾಪ್-10 ನಲ್ಲಿ ಅಲ್ಲಿನ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಕೂಡ ಕಾಣಿಸಿಕೊಂಡಿಲ್ಲ. ಬಟ್ ಅಭಿಷೇಕ್ ಪಾಕಿಗಳ ನಿದ್ದೆಗೆಡಿಸಿದ್ದಾರೆ. ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ ಈವರೆಗೆ ಕೇವಲ 3 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ಮೊದಲ ಬಾರಿಗೆ ಕಣಕ್ಕಿಳಿದಿದ್ರು. ಮೊದಲ ಮ್ಯಾಚ್ನಲ್ಲೇ 13 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ 39 ಎಸೆತಗಳಲ್ಲಿ 74 ರನ್ ಗಳಿಸಿ ಶಾಕ್ ಕೊಟ್ಟಿದ್ರು. ಇನ್ನು ಫೈನಲ್ ಮ್ಯಾಚಲ್ಲಿ 5 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಯುವರಾಜ್ ಸಿಂಗ್ ಅವರ ಗರಡಿಯಲ್ಲಿ ಪಳಗಿದ ಅಭಿಷೇಕ್ ಶರ್ಮಾ ಏಷ್ಯಾ ಕಪ್ ನಲ್ಲಿ 44.85ರ ಸರಾಸರಿಯಲ್ಲಿ ಮತ್ತು 200ರ ಸ್ಟ್ರೈಕ್ ರೇಟ್ನಲ್ಲಿ 314 ರನ್ಗಳೊಂದಿಗೆ ಟೂರ್ನಿಯ ಟಾಪ್ ಸ್ಕೋರರ್ ಆಗಿ ಗಮನ ಸೆಳೆದಿದ್ರು. ಹೀಗಾಗೇ ಪಾಕ್ನಲ್ಲಿ ಅಭಿಯದ್ದೇ ಸದ್ದು ಸುದ್ದಿ ಎಲ್ಲವೂ. ಬಟ್ ಭಾರತದಲ್ಲಿ ವೈಭವ್ ಸೂರ್ಯವಂಶಿಯದ್ದೇ ವೈಭವ.
ಭಾರತದಲ್ಲಿ ವೈಭವ್ ಸೂರ್ಯವಂಶಿ ನಂಬರ್ 1 ಟ್ರೆಂಡಿಂಗ್!
ಇನ್ನು ಭಾರತದಲ್ಲಿ ಅತೀ ಹೆಚ್ಚು ಗೂಗಲ್ ಮಾಡಿದ ಕ್ರೀಡಾಪಟುಗಳ ಪೈಕಿ 14 ವರ್ಷದ ವೈಭವ್ ಸೂರ್ಯವಂಶಿ ಫಸ್ಟ್ ಪ್ಲೇಸ್ನಲ್ಲಿದ್ದಾರೆ. ಐಪಿಎಲ್ ನಲ್ಲಿ ರಾಜಸ್ಥಾನ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಆ ಬಳಿಕ ಭಾರತ ಅಂಡರ್ 19 ಮತ್ತು ಭಾರತ ಎ ತಂಡದಲ್ಲೂ ಮಿಂಚುತ್ತಿದ್ದಾರೆ. ಇನ್ನು ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಎರಡನೇ ಸ್ಥಾನದಲ್ಲಿ ಇದ್ದಾರೆ. ಭಾರತದಲ್ಲಿ ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ಅಭಿಷೇಕ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, ಶೇಕ್ ರಶೀದ್ 4, ಜೆಮಿಮಾ ರಾಡ್ರಿಗಸ್ 5, ಆಯುಷ್ ಮ್ಹಾತ್ರೆ 6, ಸ್ಮೃತಿ ಮಂಧಾನ 7, ಕರುಣ್ ನಾಯರ್ 8, ಉರ್ವಿಲ್ ಪಟೇಲ್ 9 ಹಾಗೇ ವಿಘ್ನೇಶ್ ಪುತ್ತೂರು 10ನೇ ಸ್ಥಾನದಲ್ಲಿದ್ದಾರೆ. ಒಟ್ನಲ್ಲಿ ಅಭಿಷೇಕ್ ಶರ್ಮಾ ಆಲ್ರೆಡಿ ಪಾಕ್ನಲ್ಲಿ ಹವಾ ಎಬ್ಬಿಸಿದ್ದಾಯ್ತು. ಈಗ ಸೌತ್ ಆಫ್ರಿಕಾ ವಿರುದ್ಧವೂ ಅಂಥದ್ದೇ ಪ್ರದರ್ಶನ ನೀಡಿ ಹರಿಣಪಡೆಯ ನಿದ್ದೆಗೆಡಿಸಬೇಕಿದೆ.

ನೋಡಿರಿ

