ಹಬೆಯಾಡುವ ಬಾತ್​ ಟಬ್.. ರಕ್ತಸಿಕ್ತ ದೇಹ.. ಯಶ್‌ ರಗಡ್‌ ಲುಕ್‌! – ರಾಕಿಬಾಯ್ ಹೊಸ ಲುಕ್ ರಿವೀಲ್

ಹಬೆಯಾಡುವ ಬಾತ್​ ಟಬ್.. ರಕ್ತಸಿಕ್ತ ದೇಹ.. ಯಶ್‌ ರಗಡ್‌ ಲುಕ್‌! – ರಾಕಿಬಾಯ್ ಹೊಸ ಲುಕ್ ರಿವೀಲ್

ರಾಕಿಂಗ್‌ ಸ್ಟಾರ್‌ ಯಶ್‌ ತೆರೆ ಮೇಲೆ ಕಾಣಿಸಿಕೊಳ್ಳದೇ ಮೂರು ವರ್ಷ ಕಳೆದಿದೆ. ಯಶ್‌ ಅವರನ್ನ ತೆರೆಮೇಲೆ ನೋಡೋದು ಯಾವಾಗ? ಟಾಕ್ಸಿಕ್‌ ಸಿನಿಮಾ ರಿಲೀಸ್‌ ಯಾವಾಗ ಅಂತ ಅಂತ ಫ್ಯಾನ್ಸ್‌ ಕೇಳ್ತಾನೆ ಇದ್ರು. ಇದೀಗ ಟಾಕ್ಸಿಕ್‌ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ಇದೀಗ ಯಶ್ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ.

ಇದನ್ನೂ ಓದಿ:  8ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು! – IndiGoಗೆ ವಿಪ್ ಜಾರಿ.. ವೇಳಾಪಟ್ಟಿಯಲ್ಲಿ ಶೇ. 5 ರಷ್ಟು ಕಡಿತ!

2026ರ ಮಾರ್ಚ್ 19ರಂದು ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಯಶ್ ಹಾಗೂ ಗೀತು ಮೋಹನ್‍ದಾಸ್ ಕಥೆ ಬರೆದು, ಗೀತು ಮೋಹನ್ ದಾಸ್ ನಿರ್ದೇಶನ ಮಾಡಿರುವ ಟಾಕ್ಸಿಕ್ ಸಿನಿಮಾ ಭಾರೀ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಇದೀಗ ಟಾಕ್ಸಿಕ್ ಚಿತ್ರತಂಡದಿಂದ ಭರ್ಜರಿ ಅಪ್‍ಡೇಟ್ ಸಿಕ್ಕಿದೆ. ಟಾಕ್ಸಿಕ್‌ ಸಿನಿಮಾದ ಹೊಸ ಪೋಸ್ಟರ್‌ವೊಂದು ರಿಲೀಸ್‌ ಆಗಿದೆ. ಯಶ್ ಅವರ ಹೊಸ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಕ್ತಸಿಕ್ತ ದೇಹ, ಬೆನ್ನಮೇಲೆ ವಿಭಿನ್ನ ಟ್ಯಾಟೂ, ಎದುರಾಳಿಗಳ ಜೊತೆ ಸೆಣಸಾಡಿದ ರೀತಿ ಬಿಂಬಿತವಾದ ಯಶ್ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಜೊತೆಗೆ ಸಿನಿಮಾ ತೆರೆಗೆ ಬರೋಕೆ ಭರ್ತಿ 100 ದಿನಗಳು ಬಾಕಿ ಎಂದು ನೆನೆಪಿಸಿದೆ ಚಿತ್ರತಂಡ.

ಟಾಕ್ಸಿಕ್ ಸಿನಿಮಾ ತಂಡದಿಂದ ಯಶ್ ಅವರ ಹುಟ್ಟುಹಬ್ಬದ ವಿಶೇಷ ಸ್ಪೆಷಲ್ ಗಿಫ್ಟ್ ಸಿಕ್ಕಿತ್ತು. ಈ ಬಾರಿ 2026ರ ಜನವರಿ 8ರಂದು ರಾಕಿಭಾಯ್ ಹುಟ್ಟುಹಬ್ಬವಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಏನಾದ್ರೂ ಫ್ಯಾನ್ಸ್ ಖುಷಿಪಡುವ ರೀತಿಯಲ್ಲಿ ಭರ್ಜರಿ ಗಿಫ್ಟ್ ಸಿಗಲಿದ್ಯಾ ಅನ್ನುವ ನಿರೀಕ್ಷೆಗಳು ಜಾಸ್ತಿ ಆಗಿವೆ. ಆ ಬಗ್ಗೆ ಇನ್ನೂ ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ. ಸದ್ಯಕ್ಕೆ 2026ರ ಮಾರ್ಚ್ 19ಕ್ಕೆ ನಾನು ಬರ್ತಿದ್ದೀನಿ ಅಂತಾ ರಾಕಿಂಗ್‍ಸ್ಟಾರ್ ಸಂದೇಶ ರವಾನಿಸಿದ್ದಾರೆ. ಇನ್ನು ಈ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Shwetha M