ಸ್ನಾನಕ್ಕೆ ಹೋದಾಗ ದುರಂತ ಅಂತ್ಯ – ತಾಯಿ ಮಗುವಿನ ಪ್ರಾಣ ತೆಗೆಯಿತು ಗ್ಯಾಸ್ ಗೀಸರ್

ಸ್ನಾನಕ್ಕೆ ಹೋದಾಗ ದುರಂತ ಅಂತ್ಯ –  ತಾಯಿ ಮಗುವಿನ ಪ್ರಾಣ ತೆಗೆಯಿತು ಗ್ಯಾಸ್ ಗೀಸರ್

ಮನುಷ್ಯನ ಪ್ರಾಣ  ಹೇಗೆ ಹೋಗುತ್ತೆ ಅಂತ ಹೇಳುವುದ್ದಕ್ಕೆ ಆಗಲ್ಲ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ಸಾಕಾಗಲ್ಲ. ಒಂದು ಸಣ್ಣ ತಪ್ಪು ಕೂಡ ಪ್ರಾಣವನ್ನ ತೆೆಗೆದು ಬಿಡುತ್ತೆ.. ಈ ಘಟನೆ ಕೂಡ ಹಾಗೇ ಆಗಿದೆ ನೋಡಿ..  ಗ್ಯಾಸ್ ಗೀಸರ್ ಸೋರಿಕೆ ಎರಡು ಪ್ರಾಣ ಹೋಗಿದೆ. ಅದು ಕೂಡ  ತಾಯಿ ಮತ್ತು ಮಗುವಿನ ಪ್ರಾಣ.. ರಾಜಧಾನಿ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಈ ಒಂದು ಘನಘೋರ ಘಟನೆ ನಡೆದಿದೆ. ಮೃತರನ್ನು 26 ವರ್ಷದ ಚಾಂದಿನಿ ಹಾಗೇ 4 ವರ್ಷದ ಯುವಿ ಎಂದು ಗುರುತಿಸಲಾಗಿದೆ. ನಿನ್ನೆ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ – ಯತೀಂದ್ರಗೆ ಕೌಂಟರ್ ಕೊಟ್ಟ ಡಿ ಕೆ ಶಿವಕುಮಾರ್

ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಸೋರಿಕೆ ಆಗಿದೆ. ಆದ ತಾಯಿ ಮತ್ತು ಮಗು ಅಸ್ವಸ್ಥರಾಗಿದ್ದಾರೆ.. ಇವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯಿಂದ ಚಾಂದಿನಿ ಪತಿ ಕಿರಣ್‌ಗೆ ಫೋನ್‌ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್‌ ಮಾಡಿರಲಿಲ್ಲ. ಇದರಿಂದ ಕಿರಣ್‌ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು. ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.  ಗ್ಯಾಸ್ ಗೀಸರ್‌ನಿಂದ ಸಾಕಷ್ಟುಜೀವ ಹಾನಿಯಾಗುತ್ತಿದ್ದು, ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.

 

Kishor KV