ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ – ಯತೀಂದ್ರಗೆ ಕೌಂಟರ್ ಕೊಟ್ಟ ಡಿ ಕೆ ಶಿವಕುಮಾರ್

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ – ಯತೀಂದ್ರಗೆ ಕೌಂಟರ್ ಕೊಟ್ಟ ಡಿ ಕೆ ಶಿವಕುಮಾರ್

ರಾಜ್ಯದಲ್ಲಿ ಕೊಂಚ ತಣ್ಣಗಾಗಿದ್ದ ಪವರ್‌ ಶೇರಿಂಗ್‌ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ನಿನ್ನೆ ಸಿಎಂ ಸಿದ್ಧರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ  5 ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ನಾಯಕತ್ವ ಬದಲಾವಣೆಗೆ ಕಾರಣಗಳಿಲ್ಲ ಅಂದಿದ್ದಾರೆ. ಈ ಬೆನ್ನಲ್ಲೇ ಕೈ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಬೆನ್ನಲ್ಲೇ ಇತ್ತ ಸಿಎಂ ಸಿದ್ಧರಾಮಯ್ಯ ಕೂಡ ಪುತ್ರನಿಗೆ ವಾರ್ನಿಂಗ್‌ ಮಾಡಿದ್ರೆ, ಡಿಕೆ ಶಿವಕುಮಾರ್‌ ಕೂಡ ಕೌಂಟರ್‌ ಕೊಟ್ಟಿದ್ದಾರೆ.

ಇದನ್ನೂಓದಿ:ಗಿಲ್ ಫೇಲ್.. ಕೆಎಲ್ ಪಾಸ್.. ಸೂರ್ಯ? – T-20Iನಲ್ಲೂ SAಗೆ ಸೋಲು ಫಿಕ್ಸಾ?

ಪವರ್ ಶೇರಿಂಗ್ ಬಗ್ಗೆ ಚರ್ಚೆ ಬೇಡ ಅಂತ ಸಿಎಂ ಹಾಗೂ ಡಿಸಿಎಂ ಕದನ ವಿರಾಮ ಘೋಷಿಸಿದ್ರೂ, ಕಾಂಗ್ರೆಸ್ ನಾಯಕರು ಗಡಿ ದಾಟಿದ್ದಾರೆ. ಸಿಎಂ ಪುತ್ರ ಯತೀಂದ್ರ 5 ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ನಾಯಕತ್ವ ಬದಲಾವಣೆಗೆ ಕಾರಣಗಳಿಲ್ಲ ಎಂದು ಹೇಳೋ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿಯ ಸರ್ಕಿಟ್‌ ಹೌಸ್‌ಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಏನಿದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ, ನೀನು ಮಾತನಾಡುವುದು ಬೇಡ. ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ಇದೆ. ಯಾರೂ ಮಾತನಾಡುತ್ತಿಲ್ಲ ನೀನೊಬ್ಬನೇ ಮಾತನಾಡಿದರೆ ಬೇರೆ ಸಂದೇಶ ಹೋಗುತ್ತೆ. ಬಳಿಕ ಪದೇ ಪದೇ ಈ ರೀತಿ ಮಾತನಾಡದಂತೆ ಕಿವಿಮಾತು ಹೇಳಿದ್ದಾರೆ ಎನ್ನಲಾಗ್ತಿದೆ.

ಯತೀಂದ್ರ ಈ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಗೆ ತೆರಳುವ ಮುನ್ನ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಹಳ ಸಂತೋಷ, ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.

Shwetha M