ಈ ವಾರ ಅಭಿಷೇಕ್ ಎಲಿಮಿನೇಟ್! – ಕ್ಯಾಪ್ಟನ್ ಆದ್ರೂ ದೊಡ್ಮನೆಯಿಂದ ಔಟ್!

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಕಳೆದ ವಾರ ಜಾಹ್ನವಿ ಎಲಿಮಿನೇಟ್ ಆಗಿದ್ರು. ಈ ವಾರ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಅಭಿಷೇಕ್ ಶ್ರೀಕಾಂತ್ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ಮಾರಾಮಾರಿ! – ಸಹ ಕೈದಿಗೆ ಥಳಿಸಿದ ನಟ ದರ್ಶನ್!
ಅಭಿಷೇಕ್ ಬಿಗ್ ಬಾಸ್ ಮನೆಗೆ ಜಂಟಿಯಾಗಿ ಎಂಟ್ರಿಕೊಟ್ಟಿದ್ದರು. ನಟಿ ಅಶ್ವಿನಿ ಜೊತೆಗೆ ದೊಡ್ಮನೆಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಟಾಸ್ಕ್ನಲ್ಲೂ ಅಭಿಚೇಕ್ ಹೇಳಿಕೊಳ್ಳುವಷ್ಟು ಸೌಂಡ್ ಮಾಡಿರಲಿಲ್ಲ. ತಮ್ಮ ಎನರ್ಜಿಯನ್ನು ಫ್ಲರ್ಟ್ ಮಾಡುವುದರಲ್ಲೇ ಕಳೆಯುತ್ತಿದ್ದರು. ಅಭಿಷೇಕ್ ಅವರು ಹುಡುಗಿಯರ ಜೊತೆ ಮಾತನಾಡೋದು ಅವರ ಜೊತೆ ಸುತ್ತಾಡೋದು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೂಡ ಇತ್ತು. ಪ್ರತಿ ಎಪಿಸೋಡ್ಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಅಭಿಷೇಕ್ ಹಾಗೂ ಅಶ್ವಿನಿ ಹರಟೆ ಹೊಡೆಯುತ್ತಾ ಕುಳಿತುರುವುದಕ್ಕೂ ಟ್ರೋಲ್ ಕೂಡ ಆಗಿದ್ದರು. ಇದ್ರಿಂದಾಗಿ ಅಭಿಷೇಕ್ಗೆ ಹಿನ್ನಡೆಯಾಗಿದೆ.
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಮಾತುಗಳು ಹೆಚ್ಚಾಗಿ ಸದ್ದು ಮಾಡುತ್ತೆ ಅನ್ನೋದು ಗೊತ್ತಿರೋ ವಿಚಾರ. ಅಭಿಷೇಕ್ ಅವರು ಗಿಲ್ಲಿ ವಿರುದ್ಧ ಮಾತನಾಡಿದ್ದೂ ಇದೆ. ಟಾಸ್ಕ್ ಮುಗಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಸ್ಪಂದನಾ ಮತ್ತು ಅಭಿಷೇಕ್ ಮಾತನಾಡುತ್ತಿರುತ್ತಾರೆ. ಗಿಲ್ಲಿಗೆ ತನ್ನ ತಂಡದಲ್ಲಿ ರಕ್ಷಿತಾ ಆಟವಾಡೋದು ಬೇಕಿರಲಿಲ್ಲ. ವಂಶದ ಕುಡಿ ಅಂತ ಕರೀತಾನೆ, ಆದ್ರೆ ಆಟಕ್ಕೆ ರಕ್ಷಿತಾ ಬೇಡ. ಎಲ್ಲವೂ ಇಲ್ಲಿ ಬದಲಾಗುತ್ತಿರುತ್ತದೆ. ರಕ್ಷಿತಾ ಅವರನ್ನು ಆಟಕ್ಕೆ ಗಿಲ್ಲಿ ಕರದೇ ಇರಲಿಲ್ಲ. ಅಂತಿಮವಾಗಿ ಅಶ್ವಿನಿ ಅವರೇ ಕರೆದರು ಎಂದು ಅಭಿಷೇಕ್ ಹೇಳಿದ್ದರು.
ಈ ವಾರ ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದರು. ಹೀಗಾಗಿ ಈ ವಾರ ಅತೀ ಕಡಿಮೆ ಮತ ವೋಟ್ ಪಡೆದ ಅಭಿಷೇಕ್ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

ನೋಡಿರಿ

