ಜಮ್ಮು & ಕಾಶ್ಮೀರದ ಭಲಾರಾ ಅರಣ್ಯ ಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ – ಉ*ಗ್ರ*ರ ಅಡುಗು ತಾಣ ಪತ್ತೆ

ಜಮ್ಮು & ಕಾಶ್ಮೀರದ ಭಲಾರಾ ಅರಣ್ಯ ಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ – ಉ*ಗ್ರ*ರ ಅಡುಗು ತಾಣ ಪತ್ತೆ

ಜಮ್ಮು ಮತ್ತು ಕಾಶ್ಮಿರದ  ಥಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಭಲಾರಾ ಅರಣ್ಯ ಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ.  ಕಾರ್ಯಾಚರಣೆ ವೇಳೆ ಉಗ್ರರ ಅಡುಗು ತಾಣ ಪತ್ತೆಯಾಗಿದ್ದು,   ಅಪಾರ ಪ್ರಮಾಣದ ಶಸ್ತ್ರಾಸ್ರ್ತಗಳನ್ನು ವಶಕ್ಕೆ ಪಡೆಯಲಾಗಿದೆ.  ಒಂದು ಎಸ್‌ಎಲ್‌ಆರ್ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು 22 ಲೈವ್ ಗುಂಡುಗಳು ಪತ್ತೆಯಾಗಿವೆ.  ಅರಣ್ಯದಲ್ಲಿ ವಶಪಡಿಸಿಕೊಳ್ಳಲಾದ ಆಯುಧದ ಮೂಲವನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು ಅಲ್ಲಿಟ್ಟ ವ್ಯಕ್ತಿಗಳು ಅಥವಾ ಗುಂಪುಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮಾರಾಮಾರಿ! – ಸಹ ಕೈದಿಗೆ ಥಳಿಸಿದ ನಟ ದರ್ಶನ್!

ಕಾನೂನುಬಾಹಿರ ಚಟುವಟಿಕೆಗಳು  ತಡೆಗಟ್ಟುವಿಕೆ  ಕಾಯ್ದೆ  ಅಡಿಯಲ್ಲಿ ನಿಷೇಧಿಸಲಾದ ನಿಷೇಧಿತ ಸಂಘಟನೆಯಾದ ಜ*ಮಾತ್-ಎ-ಇಸ್ಲಾಮಿ (ಜೆಇಐ) ನೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಮತ್ತು ಆವರಣಗಳನ್ನು ಗುರಿಯಾಗಿಸಿಕೊಂಡು ಪೊಲೀಸರು ಶೋಪಿಯಾನ್ ಜಿಲ್ಲೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಜಮಾ*ತ್-ಎ-ಇಸ್ಲಾಮಿ ಜಮ್ಮು ಮತ್ತು ಕಾಶ್ಮೀರ  ಸಂಘಟನೆಯನ್ನು ಭಾರತ ಸರ್ಕಾರ ಹಲವು ಬಾರಿ ನಿಷೇಧಿಸಿದೆ. “ರಾಷ್ಟ್ರ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳು” ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ 2019 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಇತ್ತೀಚೆಗೆ ನಿಷೇಧಿಸಲಾಗಿದೆ. ಆದ್ರೂ ಇವರು  ಬಯೋತ್ಪಾದಕರಿಗೆ ಬೆಂಬವ ಸೂಚಿಸುತ್ತಾ ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

Kishor KV