SA ಸೊಕ್ಕಿಳಿಸಿದ ಕುಲ್ದೀಪ್, ಕೃಷ್ಣ – ODI ಟಾಸ್ ಗೆದ್ದ ಲಕ್ಕಿ ಕ್ಯಾಪ್ಟನ್ KL
ಪವರ್ ಪ್ಲೇನಲ್ಲೇ POWER SHOW

ಅಂತೂ ಇಂತೂ ಟೀಂ ಇಂಡಿಯಾ ಏಕದಿನ ಫಾರ್ಮೆಟ್ಗೆ ಕವಿದಿದ್ದ ಗ್ರಹಣ ಬಿಡ್ತು. ಬರೋಬ್ಬರಿ 2 ವರ್ಷಗಳ ಬಳಿಕ, ಸತತ 20 ಪಂದ್ಯಗಳ ನಂತ್ರ ಕೆಎಲ್ ರಾಹುಲ್ ಕ್ಯಾಪ್ಟನ್ಸಿಯಲ್ಲಿ ಭಾರತ ಟಾಸ್ ವಿನ್ ಆಯ್ತು. ಅಬ್ಬಾ ಆ ಮೂಮೆಂಟ್ ಅಂತೂ ಸರಣಿನೇ ಗೆದ್ದಷ್ಟು ಫೀಲ್ ಕೊಟ್ಟಿತ್ತು. ಒಂದ್ಕಡೆ ರಾಹುಲ್, ಇನ್ನೊಂದ್ಕಡೆ ಪ್ಲೇಯರ್ಸ್, ಮತ್ತೊಂದ್ಕಡೆ ಫ್ಯಾನ್ಸ್ಗೆ ಖುಷಿಯೋ ಖುಷಿ. ಇಡೀ ಸ್ಟೇಡಿಯಂ ಎಕೋ ಹೊಡೀತಿತ್ತು.
ಇದನ್ನೂ ಓದಿ : ಟಿ20 ಯಲ್ಲಿ ಆಂಡ್ರೆ ರಸೆಲ್ ಕಮಾಲ್ – 500 ನೇ ಟಿ20 ವಿಕೆಟ್ ಪಡೆದ ಆಲ್ರೌಂಡರ್
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯ ಗೇಮ್ ಡಿಸೈಡರ್ ಆಗಿರೋ ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೀತಿದೆ. ಈ ಮ್ಯಾಚಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಌಂಡ್ ಟಾಸ್ ಗೆಲುವು ಭಾರತಕ್ಕೆ ತುಂಬಾನೇ ಸ್ಪೆಷಲ್ ಆಗಿತ್ತು. 2023ರ ನವೆಂಬರ್ನಿಂದ ಹಿಡ್ದು ಈವರೆಗೂ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಕೆಎಲ್ ರಾಹುಲ್ ನಾಯಕರಾಗಿ ಒಟ್ಟು 20 ಪಂದ್ಯಗಳಲ್ಲಿ ಭಾರತ ಮುನ್ನಡೆಸಿದ್ರೂ ಟಾಸ್ ಗೆದ್ದಿರಲಿಲ್ಲ. ಆದ್ರೆ ಈ ಮ್ಯಾಚಲ್ಲಿ ಕೆಎಲ್ ರಾಹುಲ್ ಎಡಗೈನಲ್ಲಿ ಕಾಯಿನ್ ಚಿಮ್ಮಿಸಿ ಟಾಸ್ ವಿನ್ ಆದ್ರು. ಕಳೆದ ಎರಡು ಪಂದ್ಯಗಳಲ್ಲಿ ಬಲಗೈಲಿ ಕಾಯಿನ್ ಫ್ಲಿಪ್ ಮಾಡಿದ್ರೂ ಗೆದ್ದಿದ್ರಿಲ್ಲ. ಫಾರ್ ದಿ ಚೇಂಜ್ ಅನ್ನೋ ಹಾಗೇ ಅದೂ ಕೂಡ ಪ್ರಾಕ್ಟೀಸ್ ಮಾಡಿ ಲೆಫ್ಟ್ ಹ್ಯಾಂಡ್ ಟ್ರೈ ಮಾಡಿದ್ರು. ಅದು ವರ್ಕೌಟ್ ಕೂಡ ಆಗೋಯ್ತು. ಟಾಸ್ ಗೆಲ್ತಿದ್ದಂತೆ ರಾಹುಲ್ ಫುಲ್ ಎಕ್ಸೈಟ್ ಆಗಿ ಜೋರಾಗಿ ನಕ್ರು. ಹಾಗೇ ಬೌಲಿಂಗ್ ಚೂಸ್ ಮಾಡಿಕೊಂಡ್ರು.
ಪವರ್ ಪ್ಲೇನಲ್ಲಿ ಸೌತ್ ಆಫ್ರಿಕಾ ನೀರಿಳಿಸಿದ ಬೌಲರ್ಸ್!
ಹೀಗೆ ಟಾಸ್ ಗೆದ್ದ ಜೋಶ್ನಲ್ಲೇ ಫೀಲ್ಡಿಂಗ್ಗೆ ಬಂದ ಭಾರತ ಆರಂಭದ ಓವರ್ಗಳಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತು. ಸೌತ್ ಆಫ್ರಿಕಾ ಪರ ಲಾಸ್ಟ್ ಮ್ಯಾಚಲ್ಲಿ ಓಪನರ್ ಆಗಿ ಸೆಂಚುರಿ ಸಿಡಿಸಿದ್ದ ಏಡಂ ಮಾರ್ಕ್ರಂರನ್ನ ಬಿಟ್ಟು ಕ್ವಿಂಟಾನ್ ಡಿಕಾಕ್ ಮತ್ತು ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ಫಸ್ಟ್ ಓವರ್ನಲ್ಲೇ ಅರ್ಶದೀಪ್ ಸಿಂಗ್ ಬ್ರೇಕ್ ಥ್ರ್ಯೂ ತಂದುಕೊಡ್ತಾರೆ. 4 ಬಾಲ್ ಫೇಸ್ ಮಾಡಿ ಖಾತೆಯನ್ನೇ ತೆರೆಯದೆ ರಿಕಲ್ಟನ್ ಔಟ್ ಆಗ್ತಾರೆ. ಫಸ್ಟ್ ಓವರ್ನಲ್ಲಿ ಒಂದೇ ರನ್. ಌಂಡ್ ಸೆಕೆಂಡ್ ಓವರ್ನಲ್ಲಿ ಹರ್ಷಿತ್ ರಾಣಾ ಯಾವುದೇ ರನ್ ಕೊಡಲ್ಲ. ಇನ್ನು ಮೂರನೇ ಓವರ್ನಲ್ಲಿ ಮೇಡನ್ ಓವರ್.. ಹೀಗೆ ಮೂರು ಓವರ್ಸ್ ಆದ್ರೂ ಸೌತ್ ಆಫ್ರಿಕಾಗೆ ಸಿಕ್ಕಿದ್ದು ಒಂದೇ ರನ್ಸ್. ಒನ್ ಮೋರ್ ಥಿಂಗ್ ಇಲ್ಲೀವರೆಗೂ ಒಂದೇ ಒಂದು ಎಕ್ಸ್ಟ್ರಾ ರನ್ಸ್ ಕೊಟ್ಟಿರಲಿಲ್ಲ. ಆನಂತ್ರ ಹರಿಣಪಡೆ ಸ್ಲೋವಾಗಿ ರನ್ಸ್ ಕಲೆ ಹಾಕೋಕೆ ಸ್ಟಾರ್ಟ್ ಮಾಡಿದ್ರು. ಌಂಡ್ ಪವರ್ಪ್ಲೇ ಮುಗಿಯೋ ಹೊತ್ತಿಗೆ 1 ವಿಕೆಟ್ ನಷ್ಟಕ್ಕೆ 42 ರನ್ ಸ್ಕೋರ್ ಮಾಡಿದ್ರು. ಬಟ್ ಪವರ್ ಪ್ಲೇ ಆದ್ಮೇಲೆ ಇಬ್ಬರ ಜೊತೆಯಾಟದಲ್ಲಿ 100ಪ್ಲಸ್ ಪಾರ್ಟ್ನರ್ಶಿಪ್ ಬಂತು. ಬವುಮಾ ಸ್ಲೋವಾಗಿ ಇನ್ನಿಂಗ್ಸ್ ಕಟ್ತಿದ್ರೆ ಡಿಕಾಕ್ ಹೊಡಿಬಡಿ ಆಟವಾಡ್ತಿದ್ರು. ಇಬ್ರೂ ಕೂಡ ಡೇಂಜರಸ್ ಆಗ್ತಿರೋ ಹೊತ್ತಲ್ಲೇ ರವೀಂದ್ರ ಜಡೇಜಾ 48 ರನ್ ಗಳಿಸಿದ್ದ ಬವುಮಾ ವಿಕೆಟ್ ತೆಗೆದ್ರು. ಌಂಡ್ ನೆಕ್ಸ್ಟ್ ಮ್ಯಾಥ್ಯೂ ಬ್ರೀಟ್ಜ್ಕಿ ಮತ್ತು ಕಳೆದ ಪಂದ್ಯದ ಸೆಂಚುರಿ ಸ್ಟಾರ್ ಏಡಂ ಮಾರ್ಕ್ರಂಗೆ ಒಂದೇ ಓವರ್ನಲ್ಲಿ ಪ್ರಸಿದ್ಧ್ ಕೃಷ್ಣ ಪೆವಿಲಿಯನ್ ದಾರಿ ತೋರಿಸಿದ್ರು. ಹಾಗೇ ಶತಕ ಬಾರಿಸಿದ್ದ ಕ್ವಿಂಟನ್ ಡಿಕಾಕ್ಗೂ ಪ್ರಸಿದ್ಧ್ ಗೇಟ್ಪಾಸ್ ಕೊಟ್ರು. ಇನ್ನು 39ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಒಂದೇ ಓವರ್ನಲ್ಲಿ ಡೆವಾಲ್ಡ್ ಬ್ರೇವಿಸ್ ಮತ್ತು ಮಾರ್ಕೋ ಜಾನ್ಸೆನ್ ವಿಕೆಟ್ ಬೇಟೆಯಾಡಿದ್ರು. ಹೀಗೆ 240 ರನ್ಸ್ ಕಲೆಹಾಕುವಷ್ಟ್ರಲ್ಲೇ ಸೌತ್ ಆಫ್ರಿಕಾ 7 ವಿಕೆಟ್ ಕಳ್ಕೊಂಡಾಗಿತ್ತು. ಮುಂದೆ ಕೂಡ ಚೇತರಿಸಿಕೊಳ್ಳೋಕೆ ಬಿಡ್ಲಿಲ್ಲ. ಅಂತಿಮವಾಗಿ ಸೌತ್ ಆಫ್ರಿಕಾ ತಂಡ 47.5 ಓವರ್ಗಳಲ್ಲಿ 270 ರನ್ಗಳಿಗೆ ಆಲೌಟ್ ಆಯ್ತು. ಭಾರತದ ಪರ ಪ್ರಸಿದ್ಧ್ ಕೃಷ್ಣ ನಾಲ್ಕು ವಿಕೆಟ್ ಹಾಗೇ ಕುಲ್ದೀಪ್ ಯಾದವ್ ನಾಲ್ಕು ವಿಕೆಟ್ ಬೇಟೆಯಾಡಿ ಹರಿಣಪಡೆಯ ಸೊಕ್ಕಿಳಿಸಿದ್ರು. ಅರ್ಶದೀಪ್ ಮತ್ತು ಜಡ್ಡು ತಲಾ ಒಂದೊಂದು ಬಿಗ್ ವಿಕೆಟ್ ತೆಗೆದ್ರು. ಸದ್ಯಕ್ಕೆ ಭಾರತ ಬೌಲಿಂಗ್ನಲ್ಲಿ ಡಾಮಿನೇಟ್ ಮಾಡಿದೆ. ಬಿಗ್ ಸ್ಕೋರ್ ಅಲ್ದೇ ಇದ್ರೂ ಚೇಸ್ ಮಾಡುಬಹುದಾದ ಟಾರ್ಗೆಟ್ನಲ್ಲೇ ಹರಿಣಪಡೆಯನ್ನ ಕಟ್ಟಿ ಹಾಕಿದ್ದಾರೆ.
ಟಾಸ್ ಗೆದ್ದಿದ್ದೇ ಅಡ್ವಾಂಟೇಜ್!
ಟಾಸ್ ವಿನ್ ಆಗಿದ್ದೇ ಆಟಗಾರರಿಗೆ ಬೆಸ್ಟ್ ಮೂಮೆಂಟ್
ಫಸ್ಟ್ ಓವರ್ ನಲ್ಲಿ ವಿಕೆಟ್ ತೆಗೆದು ಅರ್ಶದೀಪ್ ಬ್ರೇಕ್ ಥ್ರ್ಯೂ
ಪವರ್ ಪ್ಲೇನಲ್ಲಿ ಸೌತ್ ಆಫ್ರಿಕಾಗೆ ಕಾಟ ಕೊಟ್ಟ ಬೌಲರ್ಸ್
ಪ್ರಮುಖ 3 ವಿಕೆಟ್ ಗಳನ್ನ ಬೇಟೆಯಾಡಿದ ಪ್ರಸಿದ್ಧ್ ಕೃಷ್ಣ
ಒಂದೇ ಓವರ್ ನಲ್ಲಿ ಎರಡು ವಿಕೆಟ್ ತೆಗೆದ ಕುಲ್ದೀಪ್
ಕಳೆದ ಪಂದ್ಯಕ್ಕೆ ಹೋಲಿಸಿದ್ರೆ ಎಕಾನಮಿ ಕೂಡ ಬೆಟರ್
ಕಳೆದ ಪಂದ್ಯಕ್ಕೆ ಹೋಲಿಸಿದ್ರೆ ಫೀಲ್ಡಿಂಗ್ ಚೆನ್ನಾಗಿತ್ತು
ಹೀಗೆ ಗೇಮ್ ಡಿಸೈಡರ್ ಮ್ಯಾಚಲ್ಲಿ ಭಾರತ ಬೌಲಿಂಗ್ನಲ್ಲಿ ಚೆನ್ನಾಗೇ ಪರ್ಫಾಮ್ ಮಾಡಿದೆ. ಕಡಿಮೆ ಮೊತ್ತಕ್ಕೆ ಹರಿಣಪಡೆಯನ್ನ ಕಟ್ಟಿ ಹಾಕಿದ್ದಾರೆ. ಹಾಗೆ ನೋಡಿದ್ರೆ ಮೊದಲ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ 349, ಎರಡನೇ ಪಂದ್ಯದಲ್ಲಿ 358 ರನ್ಸ್ ಕಲೆ ಹಾಕಿತ್ತು. ಬಟ್ ಸೌತ್ ಆಫ್ರಿಕಾ ಭಾರತ ಕಲೆಹಾಕಿದ್ದ ಸ್ಕೋರ್ ಹತ್ತಿರಕ್ಕೂ ಬರೋಕೆ ಆಗಿಲ್ಲ. ಸೋ ಈಗ ಭಾರತಕ್ಕೆ ಚೇಸಿಂಗ್ ಈಸಿ ಆಗ್ಬೋದು. ಟಾರ್ಗೆಟ್ ಕೂಡ ಫಿಕ್ಸ್ ಆಗಿದೆ ಹೀಗಾಗಿ ಕ್ಯಾಲ್ಕುಲೇಟ್ ಮಾಡ್ಕೊಂಡು ಚೇಸ್ ಮಾಡ್ಬೇಕಿದೆ.

ನೋಡಿರಿ

