ಅಸಭ್ಯವಾಗಿ ವರ್ತಿಸುತ್ತಿರೋದೇ ಧ್ರುವಂತ್ ಎಂದ ರಜತ್! – ಕಿಚ್ಚನ ಮುಂದೆ ಕಿತ್ತಾಡಿಕೊಂಡ ಸ್ಪರ್ಧಿಗಳು!

ಶನಿವಾರ ಬಂತಂದ್ರೆ ಸಾಕು. ಎಲ್ಲರ ಕಣ್ಣು ಕಿಚ್ಚನ ಪಂಚಾಯ್ತಿ ಮೇಲಿರುತ್ತೆ. ಈ ವಾರ ಸುದೀಪ್ ಕ್ಲಾಸ್ ಯಾರಿಗೆ? ಕಿಚ್ಚನ ಚಪ್ಪಾಳೆ ಯಾರಿಗೆ ಅನ್ನೋ ಕೂತೂಹಲ ಇತ್ತೇ ಇರುತ್ತದೆ. ಇವೆಲ್ಲದ್ರ ಮಧ್ಯೆ ಧ್ರುವಂತ್ ಹಾಗೂ ರಜತ್ ಕಿಚ್ಚ ಸುದೀಪ್ ಮುಂದೆಯೇ ಕಿತ್ತಾಡಿಕೊಂಡಿದ್ದಾರೆ. ಅಸಭ್ಯವಾಗಿ ವರ್ತಿಸ್ತಿರೋದೇ ಧ್ರುವಂತ್ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಕಾಮಿಡಿ ಅಲ್ಲ.. ಗಿಲ್ಲಿ ಕಂಡ್ರೆ ಉರಿ! – ಗೆಲ್ತಾರೆ ಅನ್ನೋ ಭಯಕ್ಕೆ ಕಳಪೆ ಕೊಟ್ಟು ಗಿಲ್ಲಿಯನ್ನ ಕುಗ್ಗಿಸ್ತಿದ್ದಾರಾ ಮನೆ ಮಂದಿ?
ಕಳೆದ ವಾರ ಧ್ರುವಂತ್ ಆಟ ಅರ್ಧಕ್ಕೆ ನಿಲ್ಲಿಸುವುದಾಗಿ ಸುದೀಪ್ ಮುಂದೆ ಹೇಳಿದ್ರು. ಅದಾದ ಬಳಿಕವೂ ಬಿಗ್‌ಬಾಸ್ ಬಳಿ ತಾನು ಮನೆಗೆ ಹೋಗುವುದಾಗಿ ಹೇಳಿದ್ರು. ಇದೀಗ ವೀಕ್ಷಕರು ಧ್ರುವಂತ್ಗೆ ಪತ್ರ ಬರೆದಿದ್ದಾರೆ. ಒಂದು ಪತ್ರದಲ್ಲಿ ಧ್ರುವಂತ್ ಅವರೇ ಮನೆಬಿಟ್ಟು ಹೋಗುವಂತದ್ದು ಏನಾಗಿತ್ತು ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಧ್ರುವಂತ್, ಇಲ್ಲದೇ ಇರುವ ಆರೋಪಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕಾಯಿತು. ಅದರಲ್ಲಿ ಆಗುವ ಡ್ಯಾಮೇಜ್ ಬೇಕಾ ಅನ್ನೋ ಯೋಚನೆ ಬಂತು.. ಎಂದಿದ್ದಾರೆ.
ಈ ವೇಳೆ ಮಧ್ಯ ಪ್ರವೇಶ ಮಾಡುವ ರಜತ್.. ಸರ್. ಡ್ಯಾಮೇಜ್ ಇವರೇ ಮಾಡಿಕೊಂಡಿರೋದು. ಅಸಭ್ಯವಾಗಿ ಮಾತನ್ನಾಡೋದು, ಅಸಭ್ಯವಾಗಿ ನಡೆದುಕೊಳ್ಳುವುದು.. ಎಂದಿದ್ದಾರೆ. ಆಗ ಕೋಪಗೊಳ್ಳುವ ಧ್ರುವಂತ್, ಇದು ವೆರಿ ವೆರಿ ರಾಂಗ್ ಸ್ಟೇಟ್ಮೆಂಟ್ ಅಂತಾ ಮಾತನ್ನಾಡಲು ಹೋಗಿದ್ದಾರೆ.
ಆದರೆ ರಜತ್ ಸುಮ್ಮನೆ ಆಗೋದಿಲ್ಲ. ಸರ್, ನಾನು ನೇರವಾಗಿ ಮಾತನ್ನಾಡ್ತೀನಿ, ತಡ್ಕೋ ಈಗ ಎಂದಿದ್ದಾರೆ. ಅದಕ್ಕೆ ರೊಚ್ಚಿಗೇಳುವ ಧ್ರುವಂತ್, ನೀನು ತಡ್ಕೋ. ಇದನ್ನೆಲ್ಲ ನೀನು ನನ್ನ ಹತ್ತಿರ ಮಾತನ್ನಾಡಲು ಬರಬೇಡ. ಬೇರೆ ಫಲಾಹಾರ ಅಲ್ಲ. ಎಷ್ಟರಲ್ಲಿ ಇರಬೇಕೋ, ಅಷ್ಟರಲ್ಲೇ ಇರು ಎಂದು ವಾರ್ನ್ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುದೀಪ್ ನಗುತ್ತ ನಿಂತಿದ್ದರು. ಸುದೀಪ್ ಉತ್ತರ ಏನು ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ.

ನೋಡಿರಿ

