ಮಂದಾನ ನಿಶ್ಚಿತಾರ್ಥ ರಿಂಗ್ ಮಿಸ್ – 1 ವಿಡಿಯೋ.. ಮದುವೆ ಕ್ಯಾನ್ಸಲ್!
ಸ್ಮೃತಿ-ಪಲಾಶ್ ಮಧ್ಯೆ ಏನಾಯ್ತು?

ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಾಗೇ ಸಿಂಗರ್ ಪಲಾಶ್ ಮುಚ್ಚಲ್ ಅವ್ರ ಮದುವೆ ವಿಚಾರದಲ್ಲಿ ಇದುವರೆಗೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಮದುವೆ ನಿಂತು 15 ದಿನ ಕಳೆದ್ರೂ ಯಾರೂ ಸರಿಯಾಗಿ ಸ್ಪಷ್ಟನೆ ನೀಡಿಲ್ಲ. ಮದುವೆ ಮುಂದೂಡಿದ್ದಾರಾ? ಅಥವಾ ಕ್ಯಾನ್ಸಲ್ ಮಾಡಿದ್ದಾರಾ? ಅಥವಾ ಅನಾರೋಗ್ಯ ಸಮಸ್ಯೆ ಇದ್ಯಾ? ಗೊತ್ತಿಲ್ಲ. ಬಟ್ ಈಗ ಸ್ಮೃತಿ ಮಂದಾನ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಅದೇ ವಿಡಿಯೋ ಈಗ ಹತ್ತಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಮದುವೆ ನಿಜಕ್ಕೂ ಮುರಿದು ಬಿದ್ದಿದೆ ಅನ್ನೋ ಚರ್ಚೆಗೆ ಪುಷ್ಠಿ ನೀಡಿದಂತಿದೆ.
ಇದನ್ನೂ ಓದಿ : ವರ್ಕೌಟ್ ಆಯ್ತು K.L ರಾಹುಲ್ ಎಡಗೈ ಟಾಸ್ – 2 ವರ್ಷದ ಬಳಿಕ ODIನಲ್ಲಿ ಟಾಸ್ ಗೆದ್ದ ಭಾರತ
ಚೊಚ್ಚಲ ಬಾರಿಗೆ ಐಸಿಸಿ ವುಮೆನ್ಸ್ ವಿಶ್ವಕಪ್ ಗೆದ್ದ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದ ಸ್ಮೃತಿ ಆ ನಂತ್ರ ತಮ್ಮ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ರು. ಲವ್ ಪ್ರಪೋಸ್, ಎಂಗೇಜ್ಮೆಂಟ್ ಅಂಥಾ ಸೆಲೆಬ್ರೇಷನ್ ಮೋಡ್ನಲ್ಲಿದ್ರು. ಌಂಡ್ ತಮ್ಮ ಬಹುಕಾಲದ ಗೆಳೆಯ ಪಲಾಶ್ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿ ನಿಂತಿದ್ರು. ನವೆಂಬರ್ 23ರಂದು ಮದುವೆಯೂ ಫಿಕ್ಸ್ ಆಗಿತ್ತು. ಬಟ್ ಶಾಕಿಂಗ್ ಎನ್ನುವಂತೆ ಮದುವೆಗೆ ಕೆಲವೇ ಗಂಟೆಗಳ ಮೊದಲು ಮದುವೆಯೇ ನಿಂತು ಹೋಗಿತ್ತು. ಆರಂಭದಲ್ಲಿ ಸ್ಮೃತಿ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ ಸೋ ಪೋಸ್ಟ್ ಪೋಸ್ ಮಾಡಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿತ್ತು. ಆ ನಂತ್ರ ಪಲಾಶ್ ಮುಚ್ಚಲ್ ಫ್ಯಾಮಿಲಿಯವ್ರು ಇಲ್ಲ ಮುಂದೂಡಿಕೆ ಮಾಡಿದ್ದೇವೆ ಅಂದ್ರು. ಆದರೆ ಸ್ಮೃತಿ ಕುಟುಂಬಸ್ಥರು ಈ ಬಗ್ಗೆ ತುಟಿ ಬಿಚ್ಚಿಲ್ಲ. ಇದನ್ನೆಲ್ಲಾ ನೋಡಿದ್ರೆ ರಿಯಾಲಿಟಿ ಬೇರೆನೇ ಇದೆ ಅನ್ನೋದು ಈಗ ಗಟ್ಟಿಯಾಗ್ತಿದೆ.
ಜಾಹೀರಾತಿನ ವಿಡಿಯೋದಲ್ಲಿ ಉಂಗುರ ಮಾಯ!
ನವೆಂಬರ್ 23ರಂದು ಸ್ನೃತಿ ಮತ್ತು ಪಲಾಶ್ ಮದುವೆ ನಿಂತಿದ್ದು ಇದಾದ ಮೇಲೆ ಸ್ಮೃತಿ ಮಂಧಾನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಸ್ಟ್ ಟೈಂ ವೀಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಹಾಗಂತ ಇದು ಮದುವೆ ಕ್ಲಾರಿಟಿ ಬಗ್ಗೆ ಸಂಬಂಧಪಟ್ಟ ವಿಡಿಯೋ ಅಲ್ಲ. ಜಾಹೀರಾತು ವಿಡಿಯೋ. ಇದೇ ವಿಡಿಯೋದಲ್ಲಿ ಮಂಧಾನ ಅವರ ನಿಶ್ಚಿತಾರ್ಥದ ಉಂಗುರ ಕೈಯಲ್ಲಿಲ್ಲ. ಹೀಗಾಗಿ ಸಹಜವಾಗಿಯೇ ಫ್ಯಾನ್ಸ್ ಕನ್ಫ್ಯೂಸ್ ಆಗಿದ್ದಾರೆ. ಹಾಗಾದ್ರೆ ಸ್ಮೃತಿ ತಮ್ಮ ಮದುವೆಯನ್ನ ಮುರಿದುಕೊಂಡ್ರಾ ಪಲಾಶ್ ಹಾಕಿದ್ದ ರಿಂಗ್ ಕಳಚಿಟ್ರಾ ಅಂತಾ ಚರ್ಚೆ ಮಾಡ್ತಿದ್ದಾರೆ. ಬಟ್ ಈ ವಿಡಿಯೋ ಮದುವೆ ಪೋಸ್ಟ್ಪೋಸ್ಟ್ ಆಗುವ ಮೊದಲು ರೆಕಾರ್ಡ್ ಮಾಡಿದ್ದಾ ಅಥವಾ ನಂತರ ವೀಡಿಯೋವನ್ನು ಚಿತ್ರೀಕರಿಸಿದ್ದಾ ಅನ್ನೋ ಬಗ್ಗೆ ಗೊಂದಲಗಳಿವೆ. ಆದ್ರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಮದುವೆ ಸಂಬಂಧಿತ ಪೋಸ್ಟ್ ಡಿಲೀಟ್ ಮಾಡಿರುವ ಸ್ಮೃತಿ!
ಸ್ಮೃತಿ ಮಂದಾನ ನಡೆ ಬಗ್ಗೆ ಪ್ರಶ್ನೆಗಳು ಮೂಡೋಕೆ ಕಾರಣಗಳೂ ಇವೆ. ಮದುವೆ ನಿಂತ ಬಳಿಕ ಸ್ಮೃತಿ ಮಂಧಾನ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಬೇರೆ ಬೇರೆ ಆಯಾಮಗಳನ್ನ ನೀಡಿದೆ. ಮತ್ತೊಂದೆಡೆ ಪಲಾಶ್ ಅವ್ರ ಸಹೋದರಿ ಗಾಯಕಿಯೂ ಆಗಿರುವ ಪಾಲಕ್ ಮುಚ್ಚಲ್ ಫಿಲ್ಮ್‌ಫೇರ್‌ಗೆ ನೀಡಿದ ಇಂಟರ್ವ್ಯೂನಲ್ಲಿ ಮಾತನಾಡಿದ್ದಾರೆ. ಎರಡೂ ಕುಟುಂಬಗಳು ಬಹಳ ಕಷ್ಟದ ಸಮಯವನ್ನು ಎದುರಿಸಿವೆ ಅಂದುಕೊಂಡಿದ್ದೇನೆ. ಈ ಸಮಯದಲ್ಲಿ ನಾವು ಸಕಾರಾತ್ಮಕತೆಯನ್ನು ನಂಬಬೇಕು ಎಂದಿದ್ದಾರೆ. ಬಟ್ ಇವ್ರೂ ಮದುವೆಗೆ ಸಂಬಂಧಪಟ್ಟ ಒಂದೇ ಒಂದು ಸುದ್ದಿಯನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು ಕೆಲ ದಿನಗಳ ಹಿಂದಷ್ಟೇ ಸ್ಮೃತಿ ಅವರ ಸಹೋದರ ಶ್ರವಣ್ ಮಂಧಾನ ಮದುವೆ ದಿನಾಂಕ ಫಿಕ್ಸ್ ಆಗಿದೆ ಅನ್ನೋ ವದಂತಿಗಳನ್ನ ನಿರಾಕರಿಸಿದ್ರು. ಈ ವಿಚಾರದಲ್ಲಿ ಎರಡೂ ಕುಟುಂಬಸ್ಥರು ಗೌಪ್ಯತೆಯನ್ನ ಹಾಗೇ ಮುಂದುವರಿಸಿದ್ದಾರೆ.
ಇನ್ನು ಐಸಿಸಿ ವಿಶ್ವಕಪ್ನ ಚಾಂಪಿಯನ್ಸ್ ಭಾರತ ತಂಡ ಡಿಸೆಂಬರ್ 21 ರಿಂದ 30 ರವರೆಗೆ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ T20I ಸರಣಿ ಆಡಲಿದೆ. ಈ ಸರಣಿ ಮೂಲಕ ಮಂಧಾನ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡ್ತಾರೆ. ವಿಶಾಖಪಟ್ಟಣ ಮತ್ತು ತಿರುವನಂತಪುರದಲ್ಲಿ ನಿಗದಿಯಾಗಿರುವ ಈ ಪಂದ್ಯಗಳು ಮುಂದಿನ ವರ್ಷದ T20 ವಿಶ್ವಕಪ್‌ಗೆ ಭಾರತಕ್ಕೆ ಪ್ಲಸ್ ಆಗಲಿದೆ. ಆ ನಂತ್ರ ಜನವರಿ 9 ರಿಂದ ನವಿ ಮುಂಬೈನಲ್ಲಿ ಪ್ರಾರಂಭವಾಗುವ 2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂದಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ ಲೀಡ್ ಮಾಡ್ತಾರೆ.

ನೋಡಿರಿ

