ಜೈಲಿನಲ್ಲಿ ಮಾದಕ ವಸ್ತು ಬ್ಯಾನ್! – ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರೌಡಿಗಳು!

ಜೈಲಿನಲ್ಲಿ ಮಾದಕ ವಸ್ತು ಬ್ಯಾನ್! – ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರೌಡಿಗಳು!

ಜೈಲಿನಲ್ಲಿ ಇಷ್ಟು ದಿನಗಳ ಕಾಲ ಆಕ್ರಮವಾಗಿ ಸಿಗರೇಟ್, ಬೀಡಿ ಸಿಗುತ್ತಿತ್ತು. ಈಗ ನಿಯಮಗಳ ಬಿಗಿಯಾಗಿ ಜಾರಿಗೊಳಿಸಿ, ಸಿಗರೇಟ್, ಬೀಡಿ ಸಿಗದಂತೆ ಬ್ರೇಕ್ ಹಾಕಲಾಗಿದೆ. ಬೀಡಿ, ಸಿಗರೇಟ್ ಸಿಗದೇ ಇರೋದರಿಂದ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಬೀಡಿ, ಸಿಗರೇಟ್ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ. ಇದೀಗ ಕಾರವಾರ ಜೈಲಿನಲ್ಲಿ ಮಾದಕ ವಸ್ತು ಕೊಟ್ಟಿಲ್ಲ ಎಂದು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಮಿಡಿ ಅಲ್ಲ.. ಗಿಲ್ಲಿ ಕಂಡ್ರೆ ಉರಿ! – ಗೆಲ್ತಾರೆ ಅನ್ನೋ ಭಯಕ್ಕೆ ಕಳಪೆ ಕೊಟ್ಟು ಗಿಲ್ಲಿಯನ್ನ ಕುಗ್ಗಿಸ್ತಿದ್ದಾರಾ ಮನೆ ಮಂದಿ?

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಕೆಲ ದಿನಗಳಿಂದ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ಜೈಲಲ್ಲಿ ನಿರ್ಬಂಧಿಸಲಾಗಿತ್ತು. ಹೀಗಾಗಿ ಖೈದಿಗಳು ಮಾದಕ ವಸ್ತು ಬೇಕಿಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ನಿರಾಕರಿಸಿದ ಸಿಬ್ಬಂದಿ ಮೇಲೆ  ರೌಡಿಗಳು ಹಲ್ಲೆ ನಡೆಸಿದ್ದಾರೆ. ಮೂವರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಸೇರಿಕೊಂಡು ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಜೈಲರ್ ಹಾಗೂ ಸಿಬ್ಬಂದಿಯನ್ನು ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್  ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಖೈದಿಗಳು. ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು.

Shwetha M