ಕಾಮಿಡಿ ಅಲ್ಲ.. ಗಿಲ್ಲಿ ಕಂಡ್ರೆ ಉರಿ! – ಗೆಲ್ತಾರೆ ಅನ್ನೋ ಭಯಕ್ಕೆ ಕಳಪೆ ಕೊಟ್ಟು ಗಿಲ್ಲಿಯನ್ನ ಕುಗ್ಗಿಸ್ತಿದ್ದಾರಾ ಮನೆ ಮಂದಿ?

ಕಾಮಿಡಿ ಅಲ್ಲ.. ಗಿಲ್ಲಿ ಕಂಡ್ರೆ ಉರಿ! – ಗೆಲ್ತಾರೆ ಅನ್ನೋ ಭಯಕ್ಕೆ ಕಳಪೆ ಕೊಟ್ಟು ಗಿಲ್ಲಿಯನ್ನ ಕುಗ್ಗಿಸ್ತಿದ್ದಾರಾ ಮನೆ ಮಂದಿ?

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿನಟನದ್ದೇ ದರ್ಬಾರ್..‌ ವೀಕ್‌ ಡೇಸ್‌ ಇರ್ಲಿ, ವೀಕೆಂಡ್‌ ಇರ್ಲಿ. ಗಿಲ್ಲಿ ಕಡೆಯಿಂದ 100% ಮನರಂಜನೆ ಫಿಕ್ಸ್‌ ಅಂತಾನೇ ಲೆಕ್ಕ. ಇಡೀ ವಾರ ಮನರಂಜನೆ ನೀಡಿದ್ರೂ ಕೂಡ ಮನೆಮಂದಿ ಈ ವಾರ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ. ಇದು ವೀಕ್ಷಕರ ಅಸಮಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನಟ ದರ್ಶನ್ ಬೆನ್ನು ನೋವು ಎಂದು ಡ್ರಾಮಾ ಮಾಡಿದ್ರಾ? – ವೈದ್ಯರು ಫಿಸಿಯೊಥೆರಪಿ ನಿಲ್ಲಿಸಿದ್ಯಾಕೆ?

ಬಿಗ್‌ಬಾಸ್‌ ನಲ್ಲಿ ಗಿಲ್ಲಿ ನಟ ಅಚ್ಚುಮೆಚ್ಚಿನ ಸ್ಪರ್ಧಿ. ಗಿಲ್ಲಿ ನಟ ಬಿಗ್ ಬಾಸ್​ಗೆ ಬಂದ ಮೊದಲ ದಿನದಿಂದಲೂ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ತನ್ನದೇ ರೀತಿಯಲ್ಲಿ ಕಾಮಿಡಿ ಮಾಡುತ್ತಾ , ಮನೆಯವರಿಗೆ ಹಾಗೂ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬರುತ್ತಿದ್ದಾರೆ. ಸದಾ ಬನಿಯನ್ ಹಾಕಿಕೊಂಡು ಕಾಮಿಡಿ ಪಂಚ್ ನೀಡುತ್ತಾ ಓಡಾಡುತ್ತಾ ಇರುತ್ತಾರೆ ಗಿಲ್ಲಿ. ಈ ಕಾರಣಕ್ಕೆ ಇವರನ್ನು ಮನೆಯ ಕೆಲವರು ಸಾಕಷ್ಟು ಟೀಕೆ ಮಾಡಿದ್ದಾರೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಗಿಲ್ಲಿ ಮಾತ್ರ ತನ್ನ ಪಾಡಿಗೆ ತನಗೆ ಏನು ಅನ್ನಿಸುತ್ತದೆ ಅದನ್ನೇ ಮಾಡುತ್ತಾ ಮನೆಯಲ್ಲಿ ತನ್ನ ಆಟವನ್ನು ಆಡುತ್ತಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಏನೇ ಮಾಡಿದರೂ ಹೊರಗಿನ ಜನ ಅವರನ್ನು ಇಷ್ಟ ಪಡುತ್ತಿದ್ದಾರೆ. ಆದ್ರೆ ಮನೆಮಂದಿ ಮಾತ್ರ ಗಿಲ್ಲಿಯನ್ನ ಕಂಡು ಸರಿಯಾಗಿ ಉರ್ಕೊಂಡಿದ್ದಾರೆ.

ಹೌದು. ಬಿಗ್‌ಬಾಸ್‌ನಲ್ಲಿ ಗಿಲ್ಲಿ ಏನೇ ಕಾಮಿಡಿ ಮಾಡಿದ್ರು, ಮನೆಮಂದಿ ನಗುತ್ತಾರೆ. ಆತನನ್ನ ಆಡಿಕೊಂಡು ಮಜಾ ತೆಗೆದುಕೊಳ್ತಾರೆ. ಆದ್ರೆ, ನಾಮಿನೇಷನ್‌, ಕಳಪೆ ವಿಚಾರಕ್ಕೆ ಬಂದ್ರೆ ಮನೆಮಂದಿ ಇದನ್ನೇ ಕಾರಣ ಕೊಡುತ್ತಾರೆ. ಗಿಲ್ಲಿ ಕಾಮಿಡಿ ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಕೆಲವೊಮ್ಮೆ ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿ ಮಾತಾಡ್ತಾರೆ. ಕಿರಿಕಿರಿ ಎನಿಸುತ್ತದೆ ಎಂಬುದು ಬಹುತೇಕ ಕಂಟೆಸ್ಟೆಂಟ್‌ಗಳ ಆರೋಪವಾಗಿದೆ. ಈ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲೂ ಅನೇಕರು ಗಿಲ್ಲಿ ಕಾಮಿಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೇ ಕಾರಣ ಕೊಟ್ಟು ಈ ವಾರ ಕೂಡ ಗಿಲ್ಲಿಗೆ ಕಳಪೆ ಕೊಡಲಾಗಿದೆ. ಇದು ವೀಕ್ಷಕರ ಅಸಮಧಾನಕ್ಕೆ ಕಾರಣವಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಅತೀ ಹೆಚ್ಚು ಮನರಂಜನೆ ಕೊಡ್ತಿರೋದೇ ಗಿಲ್ಲಿ. ಬೇರೆಯವರು ಒಳಗೊಂದು, ಹೊರಗೊಂದು ಇರುತ್ತಾರೆ. ಆದ್ರೆ ಗಿಲ್ಲಿ ಅನ್ನಿಸಿದ್ದನ್ನ ನೇರವಾಗಿ ಹೇಳಿ ಬಿಡ್ತಾರೆ. ಗಿಲ್ಲಿ ಗೆದ್ದು ಬಿಡ್ತಾರೆ ಅನ್ನೋ ಭಯ ಉಳಿದ ಸ್ಪರ್ಧಿಗಳಿಗೆ ಕಾಡ್ತಿದೆ. ಇದೇ ಕಾರಣಕ್ಕೆ ಗಿಲ್ಲಿಯನ್ನ ಪದೇ ಪದೇ ನಾಮಿನೇಟ್‌ ಮಾಡಿ, ಕಳಪೆ ಕೊಟ್ಟು ಕುಗ್ಗಿಸೋ ಪ್ರಯತ್ನ ಮಾಡುತ್ತಿದ್ದಾರೆ. ಯಾರು ಎಷ್ಟು ಬಾರಿ ನಾಮಿನೇಟ್‌ ಮಾಡಿದ್ರೂ, ಕಳಪೆ ಕೊಟ್ರೂ ನಾವು ಗಿಲ್ಲಿ ಪರ. ಗಿಲ್ಲಿಗೆ ವೋಟ್‌ ಹಾಕಿ ಗೆಲ್ಲಿಸುತ್ತೇವೆ ಅಂತ ವೀಕ್ಷಕರು ಕಮೆಂಟ್‌ ಮಾಡ್ತಿದ್ದಾರೆ.

Shwetha M