ನಾನೂ ಶಾಲೆಗೆ ಬರ್ತೀನಿ.. – ಪುಟ್ಟ ಹುಡುಗಿ ಜೊತೆ ಸ್ಕೂಲ್‌ಗೆ ಹೊರಟ ಮರಿಯಾನೆ!

ಆನೆ ಮರಿಗಳು ತುಂಬಾ ಮುದ್ದಾಗಿರುತ್ತವೆ. ಇನ್ನು ಅವುಗಳು ಆಟ ಆಡಲು ಶುರು ಮಾಡಿದ್ರೆ ನಿಲ್ಲಿಸೋದೇ ಇಲ್ಲ. ಪಕ್ಕದಲ್ಲಿದ್ದವರನ್ನ ಕೂಡ ಆಟ ಆಡಲು ಬಾ ಎಂದು ಕರೆಯುತ್ತವೆ. ಆದ್ರೀಗ ಇಲ್ಲೊಂದು ಕಡೆ ಬಾಲಕಿಯನ್ನ ಆನೆ ಮರಿಯೊಂದು ಸ್ಕೂಲ್ ಗೆ ಕರೆದುಕೊಂಡು ಹೋಗುತ್ತಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಪ್ರಯಾಣಿಕರ ಆಕ್ರೋಶ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA
ಸಾಮಾನ್ಯವಾಗಿ ನಾಯಿಗಳು ಮಕ್ಕಳ ಜೊತೆ ಸ್ಕೂಲ್ ಗೆ ಹೋಗುವುದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಇಲ್ಲೊಂದು ಆನೆ ಮರಿ ಪುಟಾಣಿಯನ್ನ ಸ್ಕೂಲ್‌ಗೆ ಕರೆದುಕೊಂಡು ಹೋಗಿದೆ. ಆನೆ, ಬಾಲಕಿ ಕ್ಯೂಟ್ ಫ್ರೆಂಡ್‌ಶಿಪ್ ನೋಡಿ ಜನ ಕಳೆದುಹೋಗಿದ್ದಾರೆ. ಈ ನಿಷ್ಕಲ್ಮಶ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
friendly_gaints_conversation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯು ಶಾಲೆಗೆ ಹೋಗಲು ರೆಡಿಯಾಗಿದ್ದಾಳೆ. ಆಕೆ ಶಾಲೆಗೆ ಹೊರಡುತ್ತಿದ್ದಂತೆ ಆನೆ ಕೂಡ ಹೊರಟಿದೆ. ಬಾಲಕಿ ಹಿಂದೆಯೇ ಪುಟಾಣಿ ಹೆಜ್ಜೆ ಇಡುತ್ತಾ ಮುಂದೆ ಸಾಗಿದೆ. ಆನೆಯ ಮುದ್ದಾದ ವಿಡಿಯೋ ವೈರಲ್ ಆಗಿದೆ. ಪುಟ್ಟ ಹುಡುಗಿಯನ್ನು ಕಾಳಜಿ ವಹಿಸುತ್ತಾ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆಯ ಪರಿಶುದ್ಧ ಪ್ರೀತಿಗೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಈ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಮಂದಿ ಈ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಗ್ಧ ಪ್ರಾಣಿಗಳ ಜತೆಗಿನ ಸ್ನೇಹವೇ ಸುಂದರ. ನನಗೂ ಕೂಡ ಈ ಆನೆಯೊಂದಿಗೆ ಸ್ನೇಹ ಬೆಳೆಸಬೇಕೆನಿಸುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ.
View this post on Instagram

ನೋಡಿರಿ

