ಯುವಕನ ಪ್ರಾಣಕ್ಕೆ ಕುತ್ತು ತಂದ ಪ್ರೀತಿ – ಅಮ್ಮನ ಜೊತೆಯಲ್ಲಿದ್ದ ಮಗನ ಭೀ*ಕರ ಅಂತ್ಯ

ರಾಜಧಾನಿ ಬೆಂಗಳೂರಿನಲ್ಲಿ ಪ್ರೀತಿಗೆ ಯುವಕನೊಬ್ಬ ಬ*ಲಿಯಾಗಿದ್ದಾನೆ. ತಾನು ಪ್ರೀತಿಸಿದ ಹುಡುಗಿ ಕುಟುಂಬದವರು 30 ವರ್ಷದ ಪವನ್ ಕುಮಾರ್ ಎಂಬಾತನ ಪ್ರಾಣವನ್ನ ತೆಗೆದಿದ್ದಾರೆ. ದೊಡ್ಡಬಳ್ಳಾಪುರ ನಗರದ ಯಲಹಂಕ- ಹಿಂದೂಪುರ ರಸ್ತೆಯ ಚರ್ಚ್ ಮುಂಭಾಗದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಇದನ್ನೂ ಓದಿ: ರಕ್ಷಿತಾಗೆ ಅತಿರೇಕದ ವರ್ತನೆಯೇ ಮುಳುವಾಯ್ತಾ? – ಬ್ಯಾಕ್ ಟು ಬ್ಯಾಕ್ ಎಡವಟ್ಟು.. ಈ ವಾರ ಕಳಪೆ ಫಿಕ್ಸ್?
ಅಂದಹಾಗೇ ಮೃತ ಪವನ್ ಕುಮಾರ್, ಜಾಲಪ್ಪ ಕಾಲೇಜಿನಲ್ಲಿ ಡ್ರೈವರ್ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಕಾಲೇಜಿನ ವಸತಿ ಗೃಹದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದರು. ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಫೋನ್ ಮಾಡಿ ಹೊರಗೆ ಕರೆಸಿಕೊಂಡಿದ್ದಾರೆ. ಆಟೋದಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಆಟೋವನ್ನು ಅಡ್ಡಗಟ್ಟಿ, ಹ* ನಡೆಸಿ ಪರಾರಿಯಾಗಿದೆ. ಇದ್ರಿಂದ ಪವನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಯುವತಿಯೊಬ್ಬಳನ್ನು ಈತ ಪ್ರೀತಿ ಮಾಡುತ್ತಿದ್ದ ವಿಚಾರಕ್ಕೆ ಈ ಹಿಂದೆ ಕೂಡ ಗಲಾಟೆ ಆಗಿತ್ತು. ಕೆಲವರು ವಾರ್ನಿಂಗ್ ಕೊಟ್ಟ ಮೇಲೆ ಇಬ್ಬರೂ ಬೇರೆ ಬೇರೆಯಾಗಿದ್ದರಂತೆ . ಆದ್ರೆ ಇತ್ತೀಚೆಗೆ ಮತ್ತೆ ಇಬ್ಬರೂ ಜೊತೆಯಾಗಿದ್ರಿಂದ ಈ ಘಟನೆ ನಡೆದಿ ಎನ್ನಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ಪಾಡುರಂಗ, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶಗೌಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ನೋಡಿರಿ

