ಅವತಾರ್ 3 ಸಿನಿಮಾದಲ್ಲಿ ಪ್ರಿನ್ಸ್ ಹವಾ – ಮಹೇಶ್ ಬಾಬು ಅವತಾರ್ ನೋಡಲು ಕಾಯ್ತಿದ್ದೀರಾ?

ಅವತಾರ್ 3 ಸಿನಿಮಾದಲ್ಲಿ ಪ್ರಿನ್ಸ್ ಹವಾ – ಮಹೇಶ್ ಬಾಬು ಅವತಾರ್ ನೋಡಲು ಕಾಯ್ತಿದ್ದೀರಾ?

ಜೇಮ್ಸ್ ಕ್ಯಾಮರನ್ ನಿರ್ದೇಶನದ ಅವತಾರ್ ಸರಣಿಯ ಮೂರನೇ ಸಿನಿಮಾ ಬಿಡುಗಡೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಮಧ್ಯೆ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿರುವ ‘ಅವತಾರ್- ಫೈರ್ ಆಂಡ್ ಆಶ್’ ಸಿನಿಮಾದಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿದ ಧುರಂಧರ್ – ರಣವೀರ್ ಸಿಂಗ್ ಹೈ ಬಜೆಟ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಏನು?

ಟಾಲಿವುಡ್ ನಟ ಮಹೇಶ್ ಬಾಬು ವಾರಾಣಾಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶಿಸುತ್ತಿರುವ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ಲೀಡ್ ರೋಲ್ ನಿಭಾಯಿಸುತ್ತಿದ್ದಾರೆ. ಈ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಚನೆ ರಾಜಮೌಳಿ ಅವರದ್ದು. ಇದರ ಮಧ್ಯೆ ವಾರಾಣಾಸಿ ಸಿನಿಮಾ ತಂಡದ ಕಡೆಯಿಂದ ಬಿಗ್‌ ಅಪ್‌ಡೇಟ್ ಸಿಕ್ಕಿದೆ.

‘ಅವತಾರ್ 3’ ಸಿನಿಮಾ ಡಿಸೆಂಬರ್ 19ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ಅಮೆರಿಕದಲ್ಲಿ ಆಗಿದೆ. ಇದೀಗ ಈ ಸಿನಿಮಾಕ್ಕೆ ವಾರಣಾಸಿ ಸಿನಿಮಾದ ಟೀಸರ್ ಅನ್ನು ಅಟ್ಯಾಚ್ ಮಾಡಲಾಗಿದೆ. ವಾರಣಾಸಿ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಲು ರಾಜಮೌಳಿ ಇಟ್ಟಿರುವ ಮೊದಲ ಹೆಜ್ಜೆ ಇದಾಗಿದೆ. ‘ಅವತಾರ್ 3’ ಸಿನಿಮಾಕ್ಕೆ ‘ವಾರಣಾಸಿ’ ಟೀಸರ್ ಅಟ್ಯಾಚ್ ಮಾಡಿ ಕೆಲವು ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ‘ಅವತಾರ್’ ಸಿನಿಮಾ ಸರಣಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡುವುದು ಮೊದಲಿನಿಂದಲೂ ನಡೆದು ಬಂದಿದೆ. ಇದೇ ಕಾರಣಕ್ಕೆ ಈ ಸಿನಿಮಾವನ್ನು ‘ವಾರಣಾಸಿ’ ಸಿನಿಮಾದ ಪ್ರಚಾರಕ್ಕೆ ಬಳಸಲು ರಾಜಮೌಳಿ ಮುಂದಾಗಿದ್ದು, ಕೆಲವು ಆಯ್ದ ದೇಶಗಳಲ್ಲಿ ‘ಅವಾತಾರ್ 3’ ಸಿನಿಮಾದ ಇಂಟರ್ವೆಲ್ ಸಮಯದಲ್ಲಿ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಸಿನಿಮಾದ ಟೀಸರ್ ಪ್ರದರ್ಶನ ಆಗಲಿದೆ. ‘ಅವತಾರ್ 3’ ಅಥವಾ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾವನ್ನು ಜೇಮ್ಸ್ ಕ್ಯಾಮರನ್ ನಿರ್ದೇಶನ ಮಾಡಿದ್ದಾರೆ. ಇದು ‘ಅವತಾರ್’ ಸರಣಿಯ ಮೂರನೇ ಸಿನಿಮಾ ಆಗಿದೆ. ರಾಜಮೌಳಿ ನಿರ್ದೇಶಿಸಿದ್ದ ‘ಆರ್​​ಆರ್​​ಆರ್’ ಸಿನಿಮಾ ವೀಕ್ಷಿಸಿದ್ದ ಜೇಮ್ಸ್ ಕ್ಯಾಮರನ್, ರಾಜಮೌಳಿಯನ್ನು ಕೊಂಡಾಡಿದ್ದರು, ಮಾತ್ರವಲ್ಲದೆ, ಹಾಲಿವುಡ್​ನಲ್ಲಿ ಸಿನಿಮಾ ಮಾಡುವುದಾದರೆ ತಾವು ಬೆಂಬಲ ನೀಡುವುದಾಗಿ ಆಫರ್ ಸಹ ನೀಡಿದ್ದರು. ‘ಆರ್​​ಆರ್​​ಆರ್’ ಕುರಿತ ಡಾಕ್ಯುಮೆಂಟರಿಯಲ್ಲಿ ಸಹ ಜೇಮ್ಸ್ ಕ್ಯಾಮರನ್ ಕಾಣಿಸಿಕೊಂಡು, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ತಮ್ಮ ಸಿನಿಮಾ ಮೂಲಕ ರಾಜಮೌಳಿಯವರ ಸಿನಿಮಾಕ್ಕೆ ಪ್ರಚಾರ ನೀಡಲು ಜೇಮ್ಸ್ ಕ್ಯಾಮರನ್ ಒಪ್ಪಿಗೆ ಸೂಚಿಸಿದ್ದು, ಮಹೇಶ್ ಬಾಬು ಅಭಿಮಾನಿಗಳ ಸಂತಸ ಹೇಳತೀರದಾಗಿದೆ.

Sulekha