ಹಾರ್ದಿಕ್ ಪಾಂಡ್ಯಗೆ ಫ್ಯಾನ್ಸ್ ಕಾಟ – ಸೈಯದ್ ಮುಷ್ತಾಕ್ ಅಲಿ ಟಿ20  ಟ್ರೋಫಿ ಪಂದ್ಯ ಸ್ಥಳಾಂತರ

ಹಾರ್ದಿಕ್ ಪಾಂಡ್ಯಗೆ ಫ್ಯಾನ್ಸ್ ಕಾಟ – ಸೈಯದ್ ಮುಷ್ತಾಕ್ ಅಲಿ ಟಿ20  ಟ್ರೋಫಿ  ಪಂದ್ಯ ಸ್ಥಳಾಂತರ

ಹಾರ್ದಿಕ್ ಪಾಂಡ್ಯರಿಂದಾಗಿ ಭಾರತದಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20  ಟ್ರೋಫಿಯ ಪಂದ್ಯವನ್ನ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ.   ವಾಸ್ತವವಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಹಾಗೂ ಗುಜರಾತ್ ನಡುವಿನ ಪಂದ್ಯ ಹೈದರಾಬಾದ್​ನ ಜಿಮ್ಖಾನಾ ಮೈದಾನದಲ್ಲಿ ನಡೆಯಬೇಕಾಗಿತ್ತು. ಆದರೆ ಪಂದ್ಯವನ್ನು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು.

ಬರೋಡಾ ತಂಡದ ಪರ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ ಇದ್ದಕ್ಕೆ ಕಾರಣವಾಗಿದ್ದಾರೆ.  ಹಾರ್ದಿಕ್ ಪಾಂಡ್ಯ ಕೂಡ ಈ ಟೂರ್ನಿಯಲ್ಲಿ ಆಡುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಅಲ್ಲದೆ ಹಾರ್ದಿಕ್​ ಮೈದಾನದಲ್ಲಿದ್ದಾಗ ಅಭಿಮಾನಿಗಳು ಕೂಡ ಮೈದಾನಕ್ಕೆ ಬಂದು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಆಯೋಜಕರಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಪಂದ್ಯವನ್ನು ಸ್ಥಳಾಂತರ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿರುವ ದಾಸನಿಗೆ ಶಾಕ್‌ ಕೊಟ್ಟ IT ಅಧಿಕಾರಿಗಳು! – ದರ್ಶನ್‌ಗೆ 82 ಲಕ್ಷ ಹಣ ಫ್ಯಾನ್ಸ್‌ ಕೊಟ್ಟಿದ್ದಾ?  

ಸಂಘಟಕರ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ನೋಡುವ ಸಲುವಾಗಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಬಂದಿದ್ದರು. ಆದ್ದರಿಂದ, ಭದ್ರತಾ ಕಾರಣಗಳಿಂದಾಗಿ, ಬರೋಡಾ ಹಾಗೂ ಗುಜರಾತ್ ನಡುವಿನ ಪಂದ್ಯವನ್ನು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕಾಯಿತು. ಪಂದ್ಯದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಮತ್ತು ಪಂದ್ಯವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

Kishor KV